ಅಂಜನಿಪುತ್ರನ ಆಗಮನಕ್ಕೆ ಅಭಿಮಾನಿಗಳಿಂದ ವೇದಿಕೆ ಸಜ್ಜು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರದ ರಿಲೀಸ್ ಡೇಟ್ ಕನ್ಫರ್ಮ್ ಆಗಿದೆ. ಸೆನ್ಸಾರ್ ಮಂಡಳಿಯಿಂದ 'ಯು ಎ ಸರ್ಟಿಫಿಕೇಟ್' ಪಡೆದು ಪಾಸ್ ಆಗಿರೋ ಅಂಜನಿಪುತ್ರ ಸಿನಿಮಾ ಬರುವ ಗುರುವಾರ (ಡಿ-21) ರಂದು ಪ್ರೇಕ್ಷಕರ ಮುಂದೆ ಬರಲಿದೆ. ಬಿಡುಗಡೆಗೆ ನಾಲ್ಕು ದಿನವಷ್ಟೇ ಬಾಕಿ ಇರೋ ಅಂಜನಿಪುತ್ರ ಚಿತ್ರವನ್ನ ಬರಮಾಡಿಕೊಳ್ಳಲು ಅಭಿಮಾನಿಗಳು ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

'ರಾಜಕುಮಾರ' ಚಿತ್ರದ ನಂತರ ರಿಲೀಸ್ ಆಗುತ್ತಿರುವ ಅಂಜನಿಪುತ್ರ ಸಿನಿಮಾಗೆ ಬಾರಿ ನಿರೀಕ್ಷೆಗಳು ಹುಟ್ಟುಕೊಂಡಿದೆ. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಈಗಾಗಲೇ ಥಿಯೇಟರ್ ಮುಂದೆ ಕಟೌಟ್ ಗಳು ರಾರಾಜಿಸುತ್ತಿವೆ. ಬಳ್ಳಾರಿ, ಹುಬ್ಬಳ್ಳಿ, ಹೊಸಪೇಟೆಯಲ್ಲಿ ಜಾತ್ರೆಯ ರೀತಿಯಲ್ಲಿ ಥಿಯೇಟರ್ ಗಳಿಗೆ ಸೀರಿಯಲ್ ಸೆಟ್ ಲೈಟಿಂಗ್ ಹಾಕಿ ಸಿಂಗಾರ ಮಾಡಲಾಗಿದೆ.

ಎ ಹರ್ಷ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ಅಭಿನಯಿಸುತ್ತಿದ್ದು, ರಶ್ಮಿಕಾ ಮಂದಣ್ಣ ಹಾಗೂ ಅಪ್ಪು ಜೋಡಿ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಮೇಲೆ ಬರ್ತಿದೆ. ಅದ್ದೂರಿ ತಾರಾ ಬಳಗವಿರೋ ಅಂಜನಿ ಪುತ್ರ ಚಿತ್ರದ ಹಾಡುಗಳು ಹಿಟ್ ಆಗಿದೆ.

200 ಕ್ಕೂ ಹೆಚ್ಚು ಸಿನಿಮಾಮಂದಿರಗಳಲ್ಲಿ ಅಂಜನಿಪುತ್ರ ಸಿನಿಮಾ ತೆರೆಗೆ ಬರ್ತಿದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿರದಲ್ಲಿ ಬೆಳ್ಳಿಗ್ಗಿನ ಪ್ರದರ್ಶನಗಳನ್ನ ಆಯೋಜಿಸಲಾಗಿದೆ. ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳ್ಳಿಗ್ಗೆ 5 ಗಂಟೆಗೆ ಶೋ ಪ್ರಾರಂಭವಾಗಲಿದೆ. ಕೆ ಜಿ ರಸ್ತೆಯ ತ್ರಿವೇಣಿ ಥಿಯೇಟರ್ ನಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಬೆಳ್ಳಿಗ್ಗೆ 7 ಗಂಟೆಗೆ ಚಿತ್ರ ಪ್ರದರ್ಶನ ಶುರುವಾಗುತ್ತಿದೆ.


Click it and Unblock the Notifications











