ಚಾಮರಾಜನಗರ ಜಿಲ್ಲೆ ಅಭಿವೃದ್ಧಿಗೆ ಪುನೀತ್ ರಾಜ್‌ಕುಮಾರ್ ಸಾಥ್
ನಟ ಪುನೀತ್ ರಾಜ್‌ಕುಮಾರ್ ಅವರು ಸಿನಿಮಾಗಳ ಹೊರತಾಗಿ ಹಲವು ಸಮಾಜ ಸೇವೆ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಸರ್ಕಾರದೊಂದಿಗೆ ಸಹ ಹಲವು ಮಹತ್ವದ ಕಾರ್ಯಗಳಿಗೆ ಕೈಜೋಡಿಸಿದ್ದಾರೆ.
ಚುನಾವಣೆಗೆ ರಾಯಭಾರಿ, ಪ್ರವಾಸೋದ್ಯಮ ರಾಯಭಾರಿ, ನಂದಿನಿ ಹಾಲಿಗೆ ಉಚಿತ ಜಾಹೀರಾತು ಇನ್ನೂ ಹಲವಾರು ವಿಷಯಗಳಲ್ಲಿ ಸರ್ಕಾರಕ್ಕೆ ಸದಾ ಸಹಕಾರ ನೀಡಿದ್ದಾರೆ ಪುನೀತ್ ರಾಜ್‌ಕುಮಾರ್.

ಚಾಮರಾಜನಗರ ಅಭಿವೃದ್ಧಿಗೆ ಪುನೀತ್ ಸಾಥ್
ಇದೀಗ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಪುನೀತ್ ರಾಜ್‌ಕುಮಾರ್ ಅವರು ಕೈಜೊಡಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಜಿಲ್ಲಾಡಳಿತ ಮಾಡಿರುವ ವಿಡಿಯೋಕ್ಕೆ ಪುನೀತ್ ಅವರು ಜೊತೆಯಾಗಿದ್ದಾರೆ.

ಚಾಮರಾಜನಗರ ಬಗ್ಗೆ ಪುನೀತ್ ವಿಡಿಯೋ
ಚಾಮರಾಜನಗರ ಜಿಲ್ಲೆಯ ಬಗ್ಗೆ ಪುನೀತ್ ಅವರು ಮಾತನಾಡಿ, ತಮ್ಮ ಅಭಿಪ್ರಾಯ ಹಂಚಿಕೊಂಡು ಅದನ್ನು ಚಾಮರಾಜನಗರ ಜಿಲ್ಲಾಡಳಿತ ನಿರ್ಮಿಸುತ್ತಿರುವ ವಿಡಿಯೋಕ್ಕೆ ಬಳಸಲು ಅನುಮತಿ ನೀಡಿದ್ದಾರೆ. ಇದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ ನಟ ಪುನೀತ್.

ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಪತ್ರ
ಪುನೀತ್ ಅವರ ಈ ಕಾರ್ಯದ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಎಂಆರ್ ರವಿ ಮೆಚ್ಚುಗೆ ವ್ಯಕ್ತಪಡಿಸಿ, ಕೃತಜ್ಞತಾ ಭಾವದಿಂದ ಪುನೀತ್ ಅವರಿಗೆ ಧನ್ಯವಾದ ಅರ್ಪಿಸಿ ಪತ್ರವೊಂದನ್ನು ಬರೆದಿದ್ದಾರೆ. 'ನಿಮ್ಮ ತಂದೆ ಡಾ.ರಾಜ್‌ಕುಮಾರ್ ಅವರ ಹುಟ್ಟೂರಿನ ಮೇಲೆ ನಿಮಗೆ ಇರುವ ಪ್ರೀತಿ ಅಭಿನಂದನೀಯ' ಎಂದು ಪತ್ರದಲ್ಲಿ ಹೇಳಿದ್ದಾರೆ ಜಿಲ್ಲಾಧಿಕಾರಿ.
Recommended Video

ಸರ್ಕಾರಿ ಶಾಲೆಗೆ ಪುನೀತ್ ದನ ಸಹಾಯ
ಪುನೀತ್ ರಾಜ್‌ಕುಮಾರ್ ಅವರು ಕೆಲವು ದಿನಗಳ ಹಿಂದೆ ಗಂಗಾವತಿಯ ಸರ್ಕಾರಿ ಶಾಲೆಯೊಂದರ ಅಭಿವೃದ್ಧಿಗೆ ದನ ಸಹಾಯ ಮಾಡಿದ್ದರು. ಅದಕ್ಕೂ ಮುನ್ನಾ ಕೊಪ್ಪಳದಲ್ಲಿ ಕೊರೊನಾ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.


Click it and Unblock the Notifications











