ಶಬರಿಯಂತೆ ಕಾದಿದ್ದ ಶಿಕ್ಷಕಿಯ ಕನಸು ನನಸು ಮಾಡಿದ ಪವರ್ ಸ್ಟಾರ್
Recommended Video

ಡಾ ರಾಜ್ ಕುಮಾರ್ ಅವರಿಗೆ ರಾಜ್ಯಾದಂತ್ಯ ಅಭಿಮಾನಿಗಳಿದ್ದರು. ಅದೆಷ್ಟೋ ಜನರಿಗೆ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕರೆ ಇನ್ನು ಕೆಲವರು ಬೆಳ್ಳಿತೆರೆ ಮೇಲೆ ಅವರನ್ನು ನೋಡಿ ಸಮಾಧಾನ ಪಟ್ಟುಕೊಂಡರು. ಕೆಲ ಅಭಿಮಾನಿಗಳು ಮಾತ್ರ ಅಣ್ಣಾವ್ರನ್ನ ಅವರ ಮಕ್ಕಳಲ್ಲಿ ನೋಡುತ್ತಿದ್ದಾರೆ.
ಡಾ ರಾಜ್ ಕುಮಾರ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದವರು ಅವರ ಮಕ್ಕಳನ್ನಾದರೂ ಒಮ್ಮೆ ಭೇಟಿ ಮಾಡಿ ಸಮಾಧಾನ ಪಟ್ಟಿಕೊಳ್ಳುತ್ತಾರೆ. ಡಾ ರಾಜ್ ಅವರನ್ನು ನೋಡಬೇಕು, ಭೇಟಿ ಮಾಡಬೇಕು ಎನ್ನುವ ಆಸೆ ಹೊಂದಿರುವ ಅನೇಕರಲ್ಲಿ ಹುಬ್ಬಳ್ಳಿಯ ಶಿಕ್ಷಕಿ ಕೂಡ ಒಬ್ಬರು.
ಅಣ್ಣಾವ್ರನ್ನ ನೋಡಲು ಸಾಧ್ಯವಾಗದ ಶಿಕ್ಷಕಿ ಅವರ ಸುಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿ ಖುಷಿ ಪಟ್ಟಿದ್ದಾರೆ. ಯಾರು ಆ ಶಿಕ್ಷಕಿ? ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ನಿವೃತ್ತ ಶಿಕ್ಷಕಿ ಆಸೆ ಪೂರೈಸಿದ ಅಪ್ಪು
ಸುಮಾರು ಹದಿನೈದು ವರ್ಷಗಳಿಂದ ಡಾ. ರಾಜ್ ಕುಮಾರ್ ಅವರನ್ನು ನೋಡಲೇಬೇಕು ಎಂಬ ಆಸೆಯಿಂದ ಕಾಯುತ್ತಿದ್ದ ನಿವೃತ್ತ ಶಿಕ್ಷಕಿಯ ಆಸೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೂರೈಸುವ ಮೂಲಕ ತಂದೆಗೆ ತಕ್ಕ ಮಗ ಎನ್ನಿಸಿಕೊಂಡಿದ್ದಾರೆ.

ಅಭಿಮಾನಿ ಮನೆ ಪವರ್ ಸ್ಟಾರ್ ಭೇಟಿ
ಹುಬ್ಬಳ್ಳಿಯ ಗೋಕುಲ್ ರೋಡ್ ನ ಅಕ್ಷಯ ಪಾರ್ಕ್ ನ ನಿವಾಸಿಯಾದ ಸುನಂದಾ ವೆರ್ಣೆಕರ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಕಳೆದ 6 ವರ್ಷಗಳ ಹಿಂದೆ ವೃತ್ತಿಯಿಂದ ನಿವೃತ್ತಿ ಹೊಂದಿದ ಸುನಂದಾ, ಅಣ್ಣಾವ್ರನ್ನು ನೋಡಬೇಕೆಂಬ ಆಸೆ ಹೊಂದಿದ್ದರಂತೆ. ಆದರೆ ಅವರ ಆಸೆ ಪೂರ್ತಿ ಆಗಲೇ ಇಲ್ಲ. ಆದರೆ ಡಾ ರಾಜ್ ಅವರ ಮಗನನ್ನು ನೋಡಿ ಖುಷಿ ಪಟ್ಟಿದ್ದಾರೆ.

ಸತತ ಪ್ರಯತ್ನಕ್ಕೆ ಸಿಕ್ತು ಫಲ
ಸುನಂದಾ ವೆರ್ಣೆಕರ್ ಅವರ ಸೆಯನ್ನು ಪೂರೈಸಬೇಕು ಎಂದು ನಿರ್ಧಾರ ಮಾಡಿದ ಮಗ ರಾಮ್ ಸುಮಾರು ಮೂರು ವರ್ಷಗಳಿಂದ ಪವರ್ ಸ್ಟಾರ್ ಅವರನ್ನು ಸಂಪರ್ಕ ಮಾಡಲು ಸಾಹಸ ಮಾಡಿದ್ದಾರೆ. ಇತ್ತೀಚಿಗಷ್ಟೇ ಬಾಗಲಕೋಟೆ ಜಿಲ್ಲೆಯ ಮಹಕೂಟದಲ್ಲಿ ನಡೆಯುತ್ತಿರುವ ನಟಸಾರ್ವಭೌಮ ಚಿತ್ರಿಕರಣಕ್ಕಾಗಿ ಬಂದ ಪುನೀತ್ ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದಾರೆ.

ಅಭಿಮಾನಿಯ ಮನೆ ಅಪ್ಪು
ವಿಚಾರ ತಿಳಿದ ನಂತರ ಚಿತ್ರೀಕರಣ ಮುಗಿಸಿ ಪುನೀತ್ ರಾಜ್ ಕುಮಾರ್ ಶಿಕ್ಷಕಿ ಸುನಂದಾ ವೆರ್ಣೆಕರ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಅಭಿಮಾನಿಯ ಮನೆಯಲ್ಲಿ ಕೆಲ ಸಮಯ ಕಳೆದು ಎಲ್ಲರೊಂದಿಗೆ ಮಾತನಾಡಿ ಫೋಟೋ ತೆಗಿಸಿಕೊಂಡಿದ್ದಾರೆ.


Click it and Unblock the Notifications











