»   » ಹೊಸಪೇಟೆ - ಚಿತ್ರದುರ್ಗ ಹೆದ್ದಾರಿಯಲ್ಲಿ ಕಂಡ ಪುನೀತ್ ರಾಜ್ ಕುಮಾರ್

ಹೊಸಪೇಟೆ - ಚಿತ್ರದುರ್ಗ ಹೆದ್ದಾರಿಯಲ್ಲಿ ಕಂಡ ಪುನೀತ್ ರಾಜ್ ಕುಮಾರ್

Posted By:
Subscribe to Filmibeat Kannada

ಸ್ಟಾರ್ ಎಂದ ಮಾತ್ರಕ್ಕೆ ಸಿಂಪಲ್ ಆಗಿ ಜೀವನ ಸಾಗಿಸಬಾರದು ಎನ್ನುವ ನಿಯಮ ಏನಿಲ್ಲ. ಕನ್ನಡ ಸಿನಿಮಾರಂಗದಲ್ಲಿ ಸರಳತೆಗೆ ಹೆಸರುವಾಸಿ ಆಗಿರುವ ಡಾ.ರಾಜ್ ಕುಮಾರ್ ಅವರ ಆದರ್ಶವನ್ನ ಅನುಸರಿಸುವ ಸಾವಿರಾರು ಅಭಿಮಾನಿಗಳಿದ್ದಾರೆ. ಅವರ ಮನೆಯಲ್ಲೇ ಡಾ.ರಾಜ್ ಕುಮಾರ್ ರನ್ನ ಪಾಲಿಸುವ ಅಪ್ಪಟ ಅಭಿಮಾನಿ ಎಂದರೆ ನಟ ಪುನೀತ್ ರಾಜ್ ಕುಮಾರ್.

ಪುನೀತ್ ರಾಜ್ ಕುಮಾರ್ ಮಾತ್ರವಲ್ಲದೆ ಮನೆ ಮಕ್ಕಳಿಗೆಲ್ಲ ಡಾ.ರಾಜ್ ಆದರ್ಶವಾಗಿದ್ದರು. ಬೆಳ್ಳಿ ಪರದೆ ಮೇಲೆ ಪವರ್ ಸ್ಟಾರ್ ಆಗಿ ಮೆರೆಯುವ ಪುನೀತ್ ತಮ್ಮ ನಿಜ ಜೀವನದಲ್ಲಿ ಸಖತ್ ಸಿಂಪಲ್ ಆಗಿರ್ತಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ...

'ಅಂಜನಿಪುತ್ರ' ಇದ್ದರೂ 'ದೊಡ್ಮನೆ ಹುಡ್ಗ' ಧ್ಯಾನದಲ್ಲಿ ಅಪ್ಪು ಫ್ಯಾನ್ಸ್

ಇತ್ತೀಚೆಗಷ್ಟೇ ಪುನೀತ್ ಹೊಸಪೇಟೆಯ ಅಭಿಮಾನಿಯೊಬ್ಬರ ಮನೆಗೆ ಭೇಟಿ ಕೊಟ್ಟು ಅವರಿಗೆಲ್ಲಾ ಸರ್ಪೈಸ್ ನೀಡಿದ್ದರು. ಯಾವಾಗಲೂ ಚಿತ್ರೀಕರಣದ ಜಾಗಕ್ಕೆ ತನ್ನ ಫೋಟೋವನ್ನ ದೇಹದ ಮೇಲೆ ಬರೆದುಕೊಂಡು ಬರುತ್ತಿದ್ದ ಅಭಿಮಾನಿಯನ್ನ ತಮ್ಮ ಮನೆಗೆ ಔತಣಕ್ಕೆ ಆಹ್ವಾನಿಸಿದ್ದರು.

ಹೀಗೆ ಅಪ್ಪು ತಮ್ಮ ಸುತ್ತ ಮುತ್ತಲಿರುವ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ತಾವು ಎಷ್ಟು ಸಿಂಪಲ್ ಅನ್ನೋದನ್ನ ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಅಪ್ಪು ಸೂಪರ್ ಸರ್ಪ್ರೈಸ್ ನೀಡಿದ್ದಾರೆ. ಅದೇನು ಅಂತೀರಾ? ಮುಂದೆ ಓದಿ....

ರಸ್ತೆಗೆ ಇಳಿದ ರಾಜಕುಮಾರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಆಡಿಯೋ ಸಂಸ್ಥೆಯ ಮೂಲಕ ಟಗರು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೊಸಪೇಟೆಯಿಂದ ಬೆಂಗಳೂರಿಗೆ ಬರುವಾಗ ಚಿತ್ರದುರ್ಗದ ರಸ್ತೆಯಲ್ಲಿ ಬೀದಿ ಬದಿಯಲ್ಲಿ ಮಾರುವ ಅಂಗಡಿಯಲ್ಲಿ ತಿಂಡಿ ತಿಂದಿದ್ದಾರೆ.

ಅಪ್ಪು ನೋಡಿ ಬೆರಗಾದ ಅಭಿಮಾನಿಗಳು

ಚಿತ್ರದುರ್ಗ-ಬೆಂಗಳೂರು ಹೈವೇ ನಲ್ಲಿ ಮಾರುತಿ ವ್ಯಾನ್ ನಲ್ಲಿ ತಿಂಡಿ ವ್ಯಾಪಾರ ಮಾಡುತ್ತಿದ್ದ ಪುಟ್ಟ ಅಂಗಡಿಯಲ್ಲಿ ಪುನೀತ್ ಮತ್ತು ಟೀಂ ಕೆಲ ಸಮಯ ಕಳೆದಿದೆ. ಅಷ್ಟೇ ಅಲ್ಲದೆ ಅಲ್ಲಿದ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಅಪ್ಪು.

ಅಭಿಮಾನಿ ಮನೆಗೆ ಪವರ್ ಸ್ಟಾರ್ ದಂಪತಿ

ಈ ಬಾರಿಯೂ ಪುನೀತ್ ಹಾಗೂ ಪತ್ನಿ ಅಶ್ವಿನಿ ಅಭಿಮಾನಿ ಮನೆಗೆ ಭೇಟಿ ನೀಡಿದ್ದಾರೆ. ಹೊಸಪೇಟೆಯಲ್ಲಿ ಡಾ.ರಾಜ್ ಕುಟುಂಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾಗಾಗಿ ಅಲ್ಲಿಯ ಕೆಲ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ ಅಪ್ಪು.

ಎಲ್ಲರಲ್ಲಿ ಒಂದಾಗುವ ನಾಯಕ

ಪುನೀತ್ ರಾಜ್ ಕುಮಾರ್ ಎಲ್ಲರಲ್ಲಿಯೂ ಒಂದಾಗುವಂತಹ ಗುಣವಿರುವ ನಾಯಕ ನಟ. ಯಾವುದೇ ಕಾರ್ಯಕ್ರಮಗಳಿಗೆ ಹೋಗುವಾಗ ತಮ್ಮ ಟೀಂ ಜೊತೆಯಲ್ಲೇ ಪುನೀತ್ ಟ್ರಾವೆಲ್ ಮಾಡುತ್ತಾರೆ. ಇದೊಂದೇ ಅಲ್ಲ ಈ ರೀತಿಯ ಸಾಕಷ್ಟು ಉದಾಹರಣೆಗಳು ಪುನೀತ್ ವಿಚಾರದಲ್ಲಿ ಸಿಗುತ್ತವೆ.

English summary
Kannada Matinee Idol Puneeth Rajkumar caught on National Highway 50, between Hospet an Chitradurga. The star is so simple, so humble to his fans. Filmibeat exclusive by Pavitra Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X