twitter
    For Quick Alerts
    ALLOW NOTIFICATIONS  
    For Daily Alerts

    ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿದ ಯಶ್, ಪುನೀತ್

    By Pavithra
    |

    ಸಿನಿಮಾ ಕಲಾವಿದರು ರಾಜಕಾರಣಿಗಳ ಜೊತೆಯಲ್ಲಿ ಹಾಗೂ ಪೊಲೀಸರ ಜೊತೆಯಲ್ಲಿ ಉತ್ತಮ ಬಾಂದವ್ಯ ಹೊಂದಿರುತ್ತಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿದ್ದಾರೆ.

    ಸಿನಿಮಾ ಕಲಾವಿದರು ಉತ್ತಮ ಸಂದೇಶವಿರುವ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಎನ್ನುವ ಆಸೆಗಳನ್ನು ಹೊಂದಿರುತ್ತಾರೆ. ಕಂಪ್ಲೀಟ್ ಕಮರ್ಷಿಯಲ್ ಚಿತ್ರವಾದರೂ ಅದರಲ್ಲಿಲೂ ಸಣ್ಣದೊಂದು ಮೆಸೆಜ್ ಇರಲಿ ಎನ್ನು ಆಶಯವನ್ನು ಇಟ್ಟುಕೊಂಡಿರುತ್ತಾರೆ.

    ಸದ್ಯ ಪವರ್ ಸ್ಟಾರ್ ಹಾಗೂ ರಾಕಿಂಗ್ ಸ್ಟಾರ್ ಪೊಲೀಸರ ಜೊತೆ ಕೈ ಜೋಡಿಸಿರುವುದು ತಮ್ಮ ರಿಯಲ್ ಲೈಫ್ ನಲ್ಲಿಯೂ ಜನರಿಗೆ ಒಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ. ಇದೇ ಉದ್ದೇಶಕ್ಕಾಗಿ ಕನ್ನಡದ ಬಹುತೇಕ ಕಲಾವಿದರು ಬಳ್ಳಾರಿಯ ಆರಕ್ಷಕರ ಜೊತೆಯಾಗಿದ್ದಾರೆ. ಹಾಗಾದರೆ ಇವರೆಲ್ಲರೂ ಹೇಳುತ್ತಿರುವ ಸಂದೇಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

    ಜೀವ ಉಳಿಸಲು ಸಂದೇಶ

    ಜೀವ ಉಳಿಸಲು ಸಂದೇಶ

    ಕನ್ನಡ ಸಿನಿಮಾ ಕಲಾವಿದರು ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿರುವುದು ಜೀವ ಉಳಿಸಲು. ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಠಾಣೆಯ ಸಬ್ ಇನ್​ಸ್ಪೆಕ್ಟರ್ ಮೊಹಮದ್ ರಫಿ 'ಗುಡ್ ಸಮರಿಟನ್ ಲಾ' ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅದಕ್ಕಾಗಿ ಕನ್ನಡ ಸ್ಟಾರ್ಸ್ ಜೊತೆಯಾಗಿದ್ದಾರೆ.

    ಪವರ್ ಸ್ಟಾರ್ ಜೊತೆ -ರಾಕಿಂಗ್ ಸ್ಟಾರ್

    ರಸ್ತೆ ಅಪಘಾತದಲ್ಲಿ ಸಿಲುಕಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರಿಗೆ ಪೊಲೀಸ್ ತನಿಖೆಯ ಹೆಸರಿನಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಅಪಘಾತವಾದಾಗ ಗೊಲ್ಡನ್ ಅವರ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ ಎಂಬ ಸಂದೇಶ ಸಾರುವ ಉದ್ದೇಶದಿಂದ ನಡೆಯುತ್ತಿರುವ ಜಾಗೃತಿಗೆ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಕೈ ಜೋಡಿಸಿದ್ದಾರೆ.

    ಜಾಗೃತಿಗಾಗಿ ಒಟ್ಟಾದ ಕಲಾವಿದರು

    ಜಾಗೃತಿಗಾಗಿ ಒಟ್ಟಾದ ಕಲಾವಿದರು

    ಕೇವಲ ಯಶ್ ಹಾಗೂ ರಾಕಿಂಗ್ ಸ್ಟಾರ್ ಮಾತ್ರವಲ್ಲದೆ ಜೀವಕ್ಕೆ ಉಪಯೋಗವಾಗುವ ಈ ಜಾಗೃತಿ ಕಾರ್ಯಕ್ರಮಕ್ಕೆ ದಿಗಂತ್, ಐಂದ್ರಿತಾ ರೇ, ಚಿಕ್ಕಣ್ಣ, ಪವನ್ ಒಡೆಯರ್, ರಾಧಿಕಾ ಪಂಡಿತ್ ಸೇರಿದಂತೆ ಸಾಕಷ್ಟು ರಾಜಕೀಯ ಗಣ್ಯರು ಕೂಡ ಗೀವ್ ವೇ ಟು ಹಾಸ್ಪಿಟಲ್ ಕಾರ್ಯಕ್ರಮಕ್ಕೆ ಒಟ್ಟಾಗಿದ್ದಾರೆ.

    ಎಸ್ ಐ ಮೊಹಮದ್ ರಫಿ ಅವರ ಮುಂದಾಳತ್ವ

    ಎಸ್ ಐ ಮೊಹಮದ್ ರಫಿ ಅವರ ಮುಂದಾಳತ್ವ

    ಪೊಲೀಸರು ಅಂದರೆ ಅಪರಾಧವನ್ನು ತಡೆಯುವುದು ಕಳ್ಳರನ್ನ ಬಂಧಿಸುವುದು ಮಾತ್ರವಲ್ಲ, ತಮ್ಮ ಸುತ್ತ ಮುತ್ತಲಿನ ವಾತಾವರಣದಲ್ಲಿ ವಾಸಿಸುವ ಜನರ ಜೀವದ ಬಗ್ಗೆಯೂ ಕಾಳಜಿ ವಹಿಸಬೇಕು ಎನ್ನುವ ಉದ್ದೇಶದಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಪೊಲೀಸ್ ಠಾಣೆಯ ಸಬ್ ಇನ್​ಸ್ಪೆಕ್ಟರ್ ಮೊಹಮದ್ ರಫಿ ಮತ್ತು ತಂಡ ಈ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ.

    English summary
    Kannada artistes Puneet Rajkumar, Yash, Chikkanna, Radhika Pandit and others have joined the Bellary police for awareness program. The Bellary police have been campaigning Give way to Ambulance, shift Injured to Hospital
    Monday, June 11, 2018, 17:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X