For Quick Alerts
  ALLOW NOTIFICATIONS  
  For Daily Alerts

  ಮರುಕಳಿಸಲಿದೆ ಗಂಧದಗುಡಿಯ ಮತ್ತೊಂದು ಚರಿತ್ರೆ: ಅಪ್ಪು ಕನಸು ಕಂಡು ಸಂಭ್ರಮಿಸಿದ ತಾರೆಯರು

  |

  ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕಂಡ ಕನಸು ಇಷ್ಟೊಂದು ಶ್ರೀಮಂತವಾಗಿತ್ತಾ? ಗಂಧದ ಗುಡಿಯ ಚಿಕ್ಕದೊಂದು ಟೀಸರ್ ಇಷ್ಟೊಂದು ಸದ್ದು ಮಾಡಿರಬೇಕಾದರೆ, ಇನ್ನು ಸಿನಿಮಾ ಹೇಗಿರಬೇಕು? ಊಹಿಸಿಕೊಂಡು ಥ್ರಿಲ್ ಆಗುವುದರಲ್ಲಿ ಎರಡು ಮಾತಿಲ್ಲ. ಅಪ್ಪು ಕನಸಿನ ಕೂಸು ಗಂಧದ ಗುಡಿಯ ಸಣ್ಣ ಟೀಸರ್ ಲೋಕಕ್ಕೆ ಅರ್ಪಣೆಯಾಗಿದೆ. ಪುನೀತ್ ಅಭಿಮಾನಿಗಳಲ್ಲಿ ಟೀಸರ್ ನೋಡಿದ ಸಂತಸ ಒಂದೆಡೆಯಾದರೆ, ಇನ್ನೊಂದಡೆ ಇಂತಹ ಅದ್ಭುತಕ್ಕೆ ಕೈ ಹಾಕಿದ ರತ್ನವೇ ಇಲ್ಲವಲ್ಲ ಅನ್ನುವ ನೋವು ಕಾಡುತ್ತಿದೆ.

  ಇದೇ ಟೀಸರ್.. ನವೆಂಬರ್ 1ರಂದು ರಾಜ್ಯೋತ್ಸವಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್ ಇದೆನೇ. ಕರ್ನಾಟಕದ ಪ್ರಕೃತಿ ಸೌಂದರ್ಯದ ಈ ದೃಶ್ಯಕಾವ್ಯದ ಟೈಟಲ್ ಟೀಸರ್ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಬೇಕಿತ್ತು. ಅಷ್ಟರಲ್ಲೇ ಅಪ್ಪು ಅಪಾರ ಅಭಿಮಾನಿಗಳನ್ನು ಅಗಲಿ ದೂರವಾದರು. ಇಂತಹ ನೋವಿನಲ್ಲಿಯೂ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿ ಕನಸನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ. ಈ ಟೀಸರ್ ನೋಡಿದವರು ತಾರೆಯವರು ಅಪ್ಪು ಕನಸು ಕಂಡು ಸಂಭ್ರಮಿಸಿದ್ದಾರೆ. ಹಾಗಿದ್ದರೆ ಯಾರು ಏನಂದಿದ್ದಾರೆ ಅಂತ ಮುಂದೆ ಓದಿ.

  'ನಿಮ್ಮ ಕಣ್ಣುಗಳಿಂದ ಗಂಧದ ಗುಡಿ ತೋರಿಸಿದ್ದಕ್ಕೆ ಧನ್ಯವಾದ'

  ಅಪ್ಪು ಕರ್ನಾಟಕದ ಉದ್ದಗಲಕ್ಕೂ ಸುತ್ತಾಡಿದ್ದಾರೆ. ಕರ್ನಾಟಕದ ಕಾಡುಗಳು, ಬೆಟ್ಟಗಳನ್ನು ಹತ್ತಿ ಇಳಿದು ಅಲ್ಲಿನ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಇಡೀ ವಿಶ್ವವೇ ಬೆರಗುಗೊಳಿಸುವಂತೆ ಚಿತ್ರೀಸಿದ್ದಾರೆ. ಈ ಟೀಸರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಮೂಕವಿಸ್ಮಿತರಾಗಿದ್ದಾರೆ. " ಈ ಪ್ರಾಜೆಕ್ಟ್ ಬಗ್ಗೆ ಪ್ರತಿಬಾರಿ ಮಾತಾಡುವಾಗಲೂ ನಿಮ್ಮ ಕಣ್ಣುಗಳು ಮಿನುಗುತ್ತಿದ್ದವು. ಈ ಚಿತ್ರದ ಬಗ್ಗೆ ನಿಮ್ಮಲ್ಲಿದ್ದ ಉತ್ಸಾಹವೇ ಈ ಸಿನಿಮಾ ನಿಮ್ಮ ಹೃದಯಕ್ಕೆ ಎಷ್ಟು ಹತ್ತಿರವಾಗಿತ್ತು ಎಂಬುದನ್ನು ತೋರಿಸುತ್ತದೆ. ನಿಮ್ಮ ಕಣ್ಣುಗಳಿಂದ ಗಂಧದ ಗುಡಿಯನ್ನು ತೋರಿಸಿದ್ದಕ್ಕೆ ಥ್ಯಾಂಕ್ಯೂ ಅಪ್ಪು ಸರ್. ಇದು ನಿಜಕ್ಕೂ ಸ್ವರ್ಗ" ಎಂದು ಯಶ್ ಹೇಳಿದ್ದಾರೆ.

  ಅಪ್ಪು ಸರ್ ಕನಸು ವರ್ಲ್ಡ್ ಕ್ಲಾಸ್

  'ಗಂಧದಗುಡಿ' ಡಾಕ್ಯೂಮೆಂಟರಿ ಸಿನಿಮಾವನ್ನು ಅಮೋಘ ವರ್ಷ ನಿರ್ದೇಶಿಸಿದ್ದಾರೆ. ಈ ದೃಶ್ಯ ವೈಭವವನ್ನು ಕಂಡು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮರುಳಾಗಿದ್ದಾರೆ. " ವರ್ಲ್ಡ್ ಕ್ಲಾಸ್.. ಅಪ್ಪು ಸರ್ ಕನಸು ಹಾಗೂ ದೂರದೃಷ್ಟಿಗೆ ಕೈ ಜೋಡಿಸುವೆ. ಅಪ್ಪು ಅವರಂತಯೇ ಇದೊಂದು ಅಮೂಲ್ಯ ರತ್ನ ಹಾಗೂ ನೈಜ ನಿಧಿ. ಗಂಧದಗುಡಿ ತಂಡದ ಪ್ರತಿಯೊಬ್ಬರಿಗೂ ಅಬಿನಂಧನೆಗಳು" ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.

  ನಮ್ಮ ನೆಲದ ಸಂಭ್ರಮ ಎಂದ ರಿಷಬ್ ಶೆಟ್ಟಿ

  'ಗಂಧದ ಗುಡಿ' ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸು. ಈ ಕನಸಿಗಾಗಿ ವಿಶೇಷ ಕಾಳಜಿ ವಹಿಸಿದ್ದರು. ಈ ಸಿನಿಮಾ ನೈಜವಾಗಿ ಮೂಡಿಬರಲು ನೈಜವಾಗಿ ದೃಶ್ಯಗಳನ್ನು ಸೆರೆ ಹಿಡಿದಿರುವುದು ವಿಶೇಷ. ಈ ದೃಶ್ಯ ವೈಭವವನ್ನು ಕಂಡು ರಿಷಬ್ ಶೆಟ್ಟಿ ಥ್ರಿಲ್ ಆಗಿದ್ದಾರೆ. "ಅಪ್ಪು ಸರ್ ಅವರ ಕನಸು ಒಂದು ಅದ್ಭುತ ಜರ್ನಿ. ನಮ್ಮ ನೆಲದ ಸಂಭ್ರಮ ಮತ್ತು ಅದರ ದಂತಕಥೆ. ಇದು ಗಂಧದ ಗುಡಿ ಮರುಕಳಿಸುವ ಸಮಯ." ಎಂದು ನಿರ್ದೇಶಕ-ನಟ ವೃಷಭ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

  'ಗಂಧದ ಗುಡಿ' ಒಂದು ಅದ್ಭುತ ಕಲಾಕೃತಿ- ಬೊಮ್ಮಾಯಿ

  "ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ 'ಗಂಧದ ಗುಡಿ' ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಈ ಅದ್ಭುತವಾದ ದೃಶ್ಯ ಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡಿವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ." ಅಂತ ಸಿ ಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

  English summary
  Puneet rajkumars dream project gandhada gudi trending in social media celebrities shows appreciation. Yash, Prashanth neel, Rishabh Shetty, C M Basavaraj Bommai tweeted about this dream project.
  Monday, December 6, 2021, 17:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X