ಪುನೀತ್ ಚಿತ್ರ 'ಯಾರೇ ಕೂಗಾಡಲಿ' ಹೊಸ ದಾಖಲೆ

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಯಾರೇ ಕೂಗಾಡಲಿ' ಚಿತ್ರ ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಸೃಷ್ಟಿಸಿದೆ. ಚಿತ್ರದ ವಿತರಣೆ ಹಕ್ಕುಗಳು ಭರ್ಜರಿ ಬೆಲೆಗೆ ಮಾರಾಟವಾಗಿದ್ದು ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಭರವಸೆ ಮೂಡಿಸಿದೆ.

ತಮಿಳಿನ ಹಿಟ್ ಚಿತ್ರ 'ಪೊರಾಲಿ' ರೀಮೇಕ್ ಆಗಿರುವ 'ಯಾರೇ ಕೂಗಾಡಲಿ' ಚಿತ್ರ ಇದೇ ಡಿಸೆಂಬರ್ 20ರಂದು ತೆರೆಕಾಣುತ್ತಿದೆ. ಪುನೀತ್ ಅವರ ಬ್ಲಾಕ್ ಬಸ್ಟರ್ ಚಿತ್ರಗಳಾದ 'ಜಾಕಿ' ಹಾಗೂ 'ಅಣ್ಣಾಬಾಂಡ್' ಚಿತ್ರಗಳ ಸಮಕ್ಕೆ 'ಯಾರೇ ಕೂಗಾಡಲಿ' ವಿತರಣೆ ಹಕ್ಕುಗಳು ಮಾರಾಟವಾಗಿವೆ ಎನ್ನುತ್ತವೆ ಮೂಲಗಳು.

ಮೈಸೂರು ಹಾಗೂ ಉತ್ತರ ಕರ್ನಾಟಕ ವಿತರಣೆ ಹಕ್ಕುಗಳು ರು.3.75 ಕೋಟಿಗೆ ಮಾರಾಟವಾಗಿದ್ದರೆ, ಚಿತ್ರದುರ್ಗ, ದಾವಣಗೆರೆ ಹಾಗೂ ಬಳ್ಳಾರಿ ವಿತರಣೆ ಹಕ್ಕುಗಳು ರು.1.35 ಕೋಟಿಗೆ ಮಾರಾಟವಾಗಿವೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಡಿಸ್ಟ್ರಿಬ್ಯೂಷನ್ ರೈಟ್ಸ್ ರು.60 ಲಕ್ಷಕ್ಕೆ ಮಾರಾಟವಾಗಿವೆ.

ಆದರೆ ಬೆಂಗಳೂರು, ಕೋಲಾರ, ತುಮಕೂರು ಹಾಗೂ ಚಿಕ್ಕಬಳ್ಳಾಪುರದ ವಿತರಣೆ ಹಕ್ಕುಗಳನ್ನು ಮಾತ್ರ ಇನ್ನೂ ಯಾರಿಗೂ ಕೊಟ್ಟಿಲ್ಲ. ಬಿಕೆಟಿಸಿ ವಿತರಣೆ ಹಕ್ಕುಗಳಿಗೆ ಹೇಗಿದ್ದರೂ ಭರ್ಜರಿ ಬೆಲೆ ಗ್ಯಾರಂಟಿ ಸಿಕ್ಕೇ ಸಿಗುತ್ತದೆ.

ಅದು ರೀಮೇಕ್ ಆಗಿರಲಿ ಸ್ವಮೇಕ್ ಆಗಿರಲಿ ಪುನೀತ್ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆಗಳು ಕಮ್ಮಿ. ಬಾಕ್ಸ್ ಆಫೀಸ್ ಭಗವಾನ್ ಕೈಬಿಡಲ್ಲ ಎಂಬ ಭರವಸೆ ಅತ್ತ ನಿರ್ಮಾಪಕರು ಇತ್ತ ವಿತರಕರ ಪಾಲಿಗೆ ಸಿಕ್ಕಾಪಟ್ಟೆ ಹುಮ್ಮಸ್ಸು ನೀಡಿದೆ. (ಏಜೆನ್ಸೀಸ್)

More from Filmibeat

English summary
Power Star Puneeth Rajkumar's comedy film Yaare Koogadali distribution rights sold for record price. Mysore and North Karnataka has been sold to Rs. 3.75 cr. Chitradurga, Davanagere and Bellary districts distribution area rights has been sold to Rs. 1.35 cr said the trade analysts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X