ಕಿರುತೆರೆ ಕಲಾವಿದರಿಂದ 'ಅಪ್ಪು ಅಮರ' ಕಾರ್ಯಕ್ರಮ!

ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ಶಾಕ್‌ನಿಂದ ಸಾಕಷ್ಟು ಮಂದಿ ಇಂದಿಗೂ ಹೊರ ಬಂದಿಲ್ಲ. ಪುನೀತ್ ರಾಜ್‌ಕುಮಾರ್ ಎಲ್ಲರನ್ನೂ ಅಗಲಿ ವಾರಗಳೇ ಉರುಳುತ್ತಿವೆ. ಇನ್ನೂ ಕೂಡ ಹಗಲು-ರಾತ್ರಿಯೆನ್ನದೆ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ಅವರ ಸಮಾಧಿಗೆ ಜನ ಭೇಟಿ ನೀಡಿ ಅವರ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಜೊತೆಗೆ ಅವರ ನೆನಪಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತಿದೆ.

ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ 'ಪುನೀತ್‌ ನಮನ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಕೇವಲ ಸಿನಿಮಾ ಮತ್ತು ರಾಜಕೀಯ ಗಣ್ಯರು ಅಂದರೆ, ವಿವಿಐಪಿಗಳಿಗೆ ಮಾತ್ರ ಸೀಮಿತವಾಗಿತ್ತು.

'ಪುನೀತ್‌ ಅಮರ' ಕಾರ್ಯಕ್ರಮದಲ್ಲಿ ಏನಿರಲಿದೆ!

'ಪುನೀತ್‌ ಅಮರ' ಕಾರ್ಯಕ್ರಮದಲ್ಲಿ ಏನಿರಲಿದೆ!

ಈಗ ಪುನೀತ್ ರಾಜ್‌ಕುಮಾರ್‌ ಅವರ ನೆನಪಿನಲ್ಲಿ 'ಪುನೀತ್‌ ಅಮರ' ಎನ್ನುವ ಕಾರ್ಯಕ್ರಮವನ್ನು 'ಕರ್ನಾಟಕ ಟೆಲಿವಿಶನ್ ಅಸೋಸಿಯೇಷನ್' ಆಯೋಜಿಸುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ' ಅಪ್ಪು ಅಮರ' ಎಂಬ ಕಾರ್ಯಕ್ರಮವನ್ನು 'ಕರ್ನಾಟಕ ಟೆಲಿವಿಶನ್ ಅಸೋಸಿಯೇಷನ್' ಆಯೋಜಿಸುತ್ತಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅಪ್ಪು ಬದುಕಿನ ಆದರ್ಶಗಳ ಬಗ್ಗೆ ಕಾರ್ಯಕ್ರಮ!

ಅಪ್ಪು ಬದುಕಿನ ಆದರ್ಶಗಳ ಬಗ್ಗೆ ಕಾರ್ಯಕ್ರಮ!

ನ್ಯಾಷನಲ್ ಕಾಲೇಜ್ ಜಯನಗರ, H N ಕಲಾಕ್ಷೇತ್ರ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳು ನವೆಂಬರ್ 28 ಭಾನುವಾರ ದಂದು ಸಂಜೆ 4 ಗಂಟೆಗೆ ಆರಂಭ ಆಗಲಿದೆ.

ಕಿರುತೆರೆಯ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ಕಲಾವಿದರು, ತಂತ್ರಜ್ಞರು ಪುನೀತ್ ರಾಜ್‌ಕುಮಾರ್ ರವರಿಗೆ ನಮನ ಸಲ್ಲಿಸಲಿದ್ದಾರೆ. ಜೊತೆಗೆ ವಿನೂತನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ನಟ ಪುನೀತ್‌ ರಾಜ್‌ಕುಮಾರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ವಿನೂತನ ಕಾರ್ಯಕ್ರಮ ನಡೆಸಲಾಗುತ್ತದೆ.

ಈಗಾಗಲೇ ಚಾಲ್ತಿಯಲ್ಲಿರುವ ಧಾರಾವಾಹಿಗಳ ನಿರ್ಮಾಣ ಸಂಸ್ಥೆಗಳು ಒಂದು ನಿರ್ಧಾರಕ್ಕೆ ಬಂದಿವೆ. ನವೆಂಬರ್ 28 ಈ ಕಾರ್ಯಕ್ರಮವನ್ನು ಎಲ್ಲಾ ಕಲಾವಿದರು ಸೇರಿ ಅದ್ಧೂರಿಯಾಗಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

ಇನ್ನೂ ನವೆಂಬರ್ 28ರ ಭಾನುವಾರ ಎಲ್ಲಾ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಕಲಾವಿತರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಗಣ್ಯರ ವಿವರಗಳನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ಪುನೀತ್‌ ನೆನಪಿನಲ್ಲಿ ಮತ್ತೊಂದು ಕಾರ್ಯಕ್ರಮ!

ಪುನೀತ್‌ ನೆನಪಿನಲ್ಲಿ ಮತ್ತೊಂದು ಕಾರ್ಯಕ್ರಮ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನವೆಂಬರ್ 16ರಂದು 'ಪುನೀತ್‌ ನಮನ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಅಪ್ಪು ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ. ಹಾಗಾಗಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಗಾಗಿ ಮತ್ತೊಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿತ್ತು. ಈ ಕುರಿತು ಈಗಾಗಲೇ ಯೋಜನೆಗಳು ರೂಪುಗೊಳ್ಳುತ್ತಿವೆ.

ಅಭಿಮಾನಿಗಳು, ಸಾರ್ವಜನಿಕರಿಗಾಗಿ ಪುನೀತ್ ನೆನಪು ಕಾರ್ಯಕ್ರಮ!

ಅಭಿಮಾನಿಗಳು, ಸಾರ್ವಜನಿಕರಿಗಾಗಿ ಪುನೀತ್ ನೆನಪು ಕಾರ್ಯಕ್ರಮ!

ಪುನೀತ್ ನಮನ ಕಾರ್ಯಕ್ರಮದ ಬಳಿಕ ಪುನೀತ್ ನೆನಪು ಎನ್ನುವ ಕಾರ್ಯಕ್ರಮವನ್ನು ಮಾಡಲು ವಾಣಿಜ್ಯಮಂಡಳಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಕಾರ್ಯಕ್ರಮದ ನಂತರ ಪುನೀತ್ ನೆನಪು ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಯೇ ಹಮ್ಮಿ ಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಕೂಡ ಅವಕಾಶವಿರುತ್ತದೆ.

More from Filmibeat

English summary
After Puneeth Namana Programme Puneeth Amara Programme Will Held On 28th November
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X