ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ಗೆ ನಾಮಕರಣ
Recommended Video

ಪುನೀತ್ ಹೊಸ ಸಿನಿಮಾ ಟೈಟಲ್ ಏನಿರಬಹುದು..! | FILMIBEAT KANNADA
ನಟ ಪುನೀತ್ ರಾಜ್ ಕುಮಾರ್ ಒಂದು ಕಡೆ 'ನಟ ಸಾರ್ವಭೌಮ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮತ್ತೊಂದು ಕಡೆ ಅವರ ಇನ್ನೊಂದು ಸಿನಿಮಾ ಟೈಟಲ್ ಲಾಂಚ್ ಆಗಲು ಸಿದ್ಧವಾಗಿದೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್ ಕುಮಾರ್ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಎಲ್ಲರಿಗೆ ತಿಳಿದಿದೆ. 'ರಾಜಕುಮಾರ' ಬಳಿಕ ಮತ್ತೆ ಈ ಜೋಡಿ ಒಂದಾಗುತ್ತಿದೆ. ಹೊಂಬಾಳೆ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನು ಈ ಸಿನಿಮಾದ ಟೈಟಲ್ ಎನಿರಬಹುದು ಎಂಬ ಕುತೂಹಲಕ್ಕೆ ನವೆಂಬರ್ ನಲ್ಲಿ ಉತ್ತರ ಸಿಗಲಿದೆ. ಕನ್ನಡ ರಾಜ್ಯೋತ್ಸವದ ದಿನ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಚಿತ್ರದ ಹೆಸರನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಈ ಸಿನಿಮಾಗೆ 'ಪರಶುರಾಮ' ಹಾಗೂ 'ದೇವತಾ ಮನುಷ್ಯ' ಎಂಬ ಟೈಟಲ್ ಗಳು ಕೇಳಿ ಬಂದಿತ್ತು. ಆದರೆ, ಈ ಎಲ್ಲ ಗೊಂದಲಗಳಿಗೆ ನವೆಂಬರ್ 1 ರಂದು ತೆರೆ ಬೀಳಲಿದೆ. ಇದು ಪುನೀತ್ ಅವರ 29ನೇ ಹಾಗೂ ಸಂತೋಷ್ 3ನೇ ಸಿನಿಮಾವಾಗಿದೆ.
More from Filmibeat
English summary
Kannada actor Puneeth Rajkumar and Santhosh Ananddram's new movie title launch on November 1st. The movie will producing by Hombale Films.


Click it and Unblock the Notifications











