ಪುನೀತ್ - ಸಂತೋಷ್ ಸಿನಿಮಾದ ಟೈಟಲ್ ಇದೇ ಅಂತೆ
ನಟ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ ಸಿನಿಮಾದ ಟೈಟಲ್ ಏನು? ಎನ್ನುವ ಪ್ರಶ್ನೆ ಅನೇಕ ದಿನದಿಂದ ಇದೆ. ಈಗ ಸಿನಿಮಾದ ಟೈಟಲ್ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬಂದಿದೆ.
'ರಾಜಕುಮಾರ' ಸಿನಿಮಾದ ಸೂಪರ್ ಸಕ್ಸಸ್ ನಂತರ ಮತ್ತೆ ಪುನೀತ್, ಸಂತೋಷ್ ಒಟ್ಟಿಗೆ ಸೇರಿದ್ದಾರೆ. ಈ ಚಿತ್ರದ ಹೆಸರಿನ ಬಗ್ಗೆ ಬಹಳ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಟೈಟಲ್ ಇದಾಗಿರಬಹುದು ಎಂದು ಕೆಲ ಳ ಹೆಸರುಗಳು ಹರಿದಾಡಿವೆ.
ಒಂದು ಕಡೆ ಇದೇ ಗುರುವಾರ ಈ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗುತ್ತದೆ. ರಾಜ್ಯೋತ್ಸವದ ವಿಶೇಷವಾಗಿ ಅಪ್ಪು ಅವರ ಹೊಸ ಚಿತ್ರದ ಹೆಸರು ಘೋಷಣೆ ಆಗಲಿದೆ. ಆದರೆ, ಅದಕ್ಕೂ ಮುಂಚೆ ಸಿನಿಮಾದ ಟೈಟಲ್ ಇದು ಇರಬಹುದು ಎಂದು ಒಂದು ಹೆಸರು ಹೊರ ಬಂದಿದೆ. ಮುಂದೆ ಓದಿ...

'ಕ್ರಾಂತಿವೀರ'
ಈ ಹಿಂದೆ ದರ್ಶನ್ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಎಂಬ ಸಿನಿಮಾ ಮಾಡಿದ್ದರು. ಆದರೆ ಈಗ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ 'ಕ್ರಾಂತಿವೀರ' ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಚಿತ್ರಕ್ಕೆ ಇದೇ ಟೈಟಲ್ ಅಂತಿಮ ಎಂಬ ಮಾತಿದೆ.

ರಾಜಣ್ಣನ ಚಿತ್ರದ ಹೆಸರು
ವಿಶೇಷ ಅಂದರೆ, ತಮ್ಮ ಮೊದಲ ಸಿನಿಮಾದಲ್ಲಿ ವಿಷ್ಣುವರ್ಧನ್ ಹಾಗೂ ಎರಡನೇ ಸಿನಿಮಾದಲ್ಲಿ ರಾಜ್ ಕುಮಾರ್ ಅವರ ಆರಾದನೆ ಮಾಡಿದ್ದ ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಸಹ ರಾಜ್ ಕುಮಾರ್ ಅವರ ಚಿತ್ರದ ಹೆಸರನ್ನು ಇಟ್ಟಿದ್ದಾರೆ. 'ಕ್ರಾಂತಿವೀರ', 1972 ರಲ್ಲಿ ತೆರೆಗೆ ಬಂದ ರಾಜಣ್ಣನ ಚಿತ್ರವಾಗಿದೆ.

ಈ ಹಿಂದೆ ಕೇಳಿ ಬಂದ ಟೈಟಲ್ ಗಳು
ಈ ಸಿನಿಮಾದ ಟೈಟಲ್ ಏನು ಎನ್ನುವ ಪ್ರಶ್ನೆ ಸಾಕಷ್ಟು ದಿನದಿಂದ ಇತ್ತು. ಸಿನಿಮಾಗೆ 'ದೇವತಾ ಮನುಷ್ಯ', 'ಪರಶುರಾಮ', 'ಜ್ವಾಲಾಮುಖಿ' ಎಂಬ ಹೆಸರು ಇಡಬಹುದು ಎಂಬ ಊಹೆ ಇತ್ತು. ಈ ಎಲ್ಲ ಹೆಸರುಗಳು ರಾಜ್ ಕುಮಾರ್ ಅವರ ಹಳೆಯ ಚಿತ್ರಗಳ ಹೆಸರಾಗಿವೆ.

ಅಭಿಮಾನಿಯ ಕೈನಲ್ಲಿ ಟೈಟಲ್ ಲಾಂಚ್
ಪುನೀತ್ ರಾಜ್ ಕುಮಾರ್ ಅವರ ಈ ಸಿನಿಮಾದ ಟೈಟಲ್ ಅನ್ನು ಅಭಿಮಾನಿ ದೇವರು ಲಾಂಚ್ ಮಾಡಲಿದ್ದಾರೆ. ಆ ಅದೃಷ್ಟದ ಅಭಿಮಾನಿ ಯಾರು ಎನ್ನುವ ಕುತೂಹಲ ಎಲ್ಲರಲ್ಲಿ ಇದೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಟೈಟಲ್ ರಿಲೀಸ್ ಆಗಲಿದೆ.

ಅಪ್ಪು ಅವರ 29ನೇ ಸಿನಿಮಾ
ಅಂದಹಾಗೆ, ಈ ಸಿನಿಮಾ ಪುನೀತ್ ನಟನೆಯ 29ನೇ ಸಿನಿಮಾವಾಗಿದೆ. ಅಲ್ಲದೆ, ಸಂತೋಷ್ ಆನಂದ್ ರಾಜ್ ಅವರ 3ನೇ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್ ನ 6ನೇ ಚಿತ್ರವಾಗಿದೆ. 'ರಾಜಕುಮಾರ' ನಂತರ ಅದೇ ನಿರ್ಮಾಪಕ, ನಿರ್ದೇಶಕ, ನಟ ಸೇರಿ ಈ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











