ಮೆಗಾ ಸಿನಿಮಾದ ಟೈಟಲ್ ಅನಾವರಣ: 'ಯುವರತ್ನ'ನಾದ ಪವರ್ ಸ್ಟಾರ್

Recommended Video

ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾದ ಟೈಟಲ್ ಅನಾವರಣ | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಅವರ ಹೊಸ ಚಿತ್ರದ ಟೈಟಲ್ ಏನು ಎಂದು ಕಳೆದ ತಿಂಗಳಿನಿಂದ ಭಾರಿ ಕುತೂಹಲ ಮೂಡಿಸಿತ್ತು. ಇಂದು ಅಂತಿಮವಾಗಿ ಟೈಟಲ್ ಅನಾವರಣ ಆಗಿದೆ.

ಹೌದು, ಕನ್ನಡ ರಾಜ್ಯೋತ್ಸವದ ವಿಶೇಷ ದಿನದಂದು ಪುನೀತ್-ಸಂತೋಷ್ ಜೋಡಿಯ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದು, 'ಯುವರತ್ನ' ದಿ ಪವರ್ ಆಫ್ ದಿ ಯೂತ್ ಎಂದು ನಾಮಕರಣ ಮಾಡಲಾಗಿದೆ.

ಅಭಿಮಾನಿಗಳಿಂದಲೇ ಚಿತ್ರದ ಟೈಟಲ್ ಬಿಡುಗಡೆಗೊಳಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತೊಂದು ಸೂಪರ್ ಟೈಟಲ್ ನೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

Puneeth and Santhosh Ananddram new movie titled as yuvaratna

ಇಷ್ಟು ದಿನ ಪರಶುರಾಮ, ದೇವತಾ ಮನುಷ್ಯ, ಜ್ವಾಲಾಮುಖಿ, ಕ್ರಾಂತಿವೀರ ಎಂದೆಲ್ಲಾ ಸುದ್ದಿಯಾಗಿತ್ತು. ಆದ್ರೆ, ಅಂತಿಮವಾಗಿ ಈ ಎಲ್ಲ ಟೈಟಲ್ ಗಳನ್ನ ಬಿಟ್ಟು 'ಯುವರತ್ನ' ಎಂದು ಹೆಸರಿಟ್ಟಿದ್ದಾರೆ.

ಇನ್ನುಳಿದಂತೆ ಹೊಂಬಾಳೆ ಫಿಲ್ಮ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಈ ಚಿತ್ರದಲ್ಲಿ ಪುನೀತ್ ಅವರ ಪಾತ್ರವೇನು? ಯಾವಾಗ ಚಿತ್ರೀಕರಣ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನ 'ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸುತ್ತಿದ್ದಾರೆ. ಬಹುತೇಕ ಸಿನಿಮಾ ಶೂಟಿಂಗ್ ಮುಗಿದಿದೆ. ಈ ಸಿನಿಮಾದ ನಂತರ ಸಂತೋಷ್ ಆನಂದ್ ರಾಮ್ ಸಿನಿಮಾ ಆರಂಭವಾಗಲಿದೆ.

More from Filmibeat

English summary
Kannada actor Puneeth Rajkumar and Santhosh Ananddram's new movie titled as 'yuvaratna'. The movie will producing by Hombale Films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X