»   » ಪುಟ್ಟ ಪೋರನಿಗೆ ತಲೆಬಾಗಿದ 'ಅಣ್ಣಾವ್ರ' ಮಕ್ಕಳು

ಪುಟ್ಟ ಪೋರನಿಗೆ ತಲೆಬಾಗಿದ 'ಅಣ್ಣಾವ್ರ' ಮಕ್ಕಳು

Posted By:
Subscribe to Filmibeat Kannada
ಟಗರು ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಪುಟ್ಟ ಪೋರನಿಗೆ ಅಣ್ಣಾವ್ರ ಫ್ಯಾಮಿಲಿ ಫಿದಾ

ಡಾ.ರಾಜ್ ಕುಮಾರ್ ಕುಟುಂಬವೇ ಹಾಗೆ... ಅತಿಥಿಗಳಿಗೆ ಸತ್ಕಾರ, ಕಲೆಗೆ ಬೆಲೆ, ಪ್ರತಿಭೆಗೆ ಪುರಸ್ಕಾರ ಇವೆಲ್ಲವನ್ನೂ ಮಾಡ್ತಾರೆ. ನಿನ್ನೆ ಶಿವಣ್ಣ ಅಭಿನಯದ 'ಟಗರು' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಭಿಮಾನಿಗಳು ನಡೆಸಿದ ಅದ್ದೂರಿ ಕಾರ್ಯಕ್ರಮದಲ್ಲಿ ಬಂದಿದ್ದ ಪುಟ್ಟ ಪೋರನಿಗೆ ಇಡೀ ರಾಜ್ ಕುಟುಂಬವೇ ತಲೆ ಬಾಗಿದೆ.

ಅಣ್ಣಾವ್ರ ಫ್ಯಾಮಿಲಿ ಪ್ರತಿಭಾವಂತರಿಗೆ ತಲೆಬಾಗಿರುವುದು ಇದೇ ಮೊದಲೇನಲ್ಲ. ಸಾಕಷ್ಟು ಬಾರಿ ಕಾರ್ಯಕ್ರಮದಲ್ಲಿ ಸಣ್ಣ ಸಣ್ಣ ಪ್ರತಿಭೆಗಳನ್ನ ಗುರುತಿಸಿ ಅವ್ರಿಗೆ ಸಲ್ಲಬೇಕಾದ ನ್ಯಾಯ ದೊರಕಿಸಿರುವ ಅದೆಷ್ಟೋ ಉದಾಹರಣೆ ಕಣ್ಣಮುಂದಿವೆ.

ಹಾಗಾದ್ರೆ ನಿನ್ನೆ ರಾಜ್ ಪುತ್ರರು ತಲೆಬಾಗಿದ್ದು ಯಾರಿಗೆ, ಆ ಪುಟ್ಟ ಪೋರ ಮಾಡಿದ ಅಂತಹ ಮ್ಯಾಜಿಕ್ ಆದರೂ ಏನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಹನ್ನೊಂದು ವರ್ಷದ ಪೋರನ ಸಾಹಸ ಚಿಕ್ಕದಲ್ಲ

ನಿನ್ನೆ 'ಟಗರು' ಟೀಸರ್ ಬಿಡುಗಡೆ ಸಮಾರಂಭದಲ್ಲಿ 'ಯಶವಂತ್' ಎನ್ನುವ ಹನ್ನೊಂದು ವರ್ಷದ ಹುಡುಗ ತನ್ನ ಯೋಗಾಭ್ಯಾಸವನ್ನ ಪ್ರದರ್ಶನ ಮಾಡಿದ. ಸುಮಾರು ಆರು ವರ್ಷಗಳಿಂದ ಯೋಗ ಕಲಿಯುತ್ತಿರುವ ಯಶವಂತ್ ಅಣ್ಣಾವ್ರ ಅಭಿಮಾನಿ.

ಸಂತಸದಿಂದ ಬಿಗಿದಪ್ಪಿದ ಅಪ್ಪು

ಯಶವಂತ್ ಟ್ಯಾಲೆಂಟ್ ನೋಡಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘಣ್ಣ ಫುಲ್ ಖುಷಿಯಾದ್ರು. ಯೋಗ ಪ್ರದರ್ಶನ ಮುಗಿಯುತಿದ್ದ ಹಾಗೆ ಎದ್ದು ನಿಂತು ಕೈಮುಗಿದು ಕಲೆಗೆ ಗೌರವ ಸಲ್ಲಿಸಿದ್ರು.

ಆರು ವರ್ಷದಿಂದ ನಡೆಯುತ್ತಿದೆ ಯೋಗಾಭ್ಯಾಸ

ಯಶವಂತ್ ಐದು ವರ್ಷದ ಮಗುವಾಗಿದ್ದಾಗಿನಿಂದಲೂ ಯೋಗಾಭ್ಯಾಸ ಮಾಡುತ್ತಾ ಬಂದಿದ್ದಾರೆ. ಒಮ್ಮೆ ಅಣ್ಣಾವ್ರ ಕಾಮನಬಿಲ್ಲು ಸಿನಿಮಾ ನೋಡಿ ರಾಜ್ ಕುಮಾರ್ ರಿಂದ ಸ್ಫೂರ್ತಿಗೊಂಡ ಯಶವಂತ್ ನವಲಿ ಆಸನ, ಜಲನೀತಿ ಆಸನವನ್ನ ಮಾಡೋದನ್ನ ಕಲಿತಿದ್ದಾರೆ.

ಆರು ವರ್ಷದಿಂದ ನಡೆಯುತ್ತಿದೆ ತಾಲೀಮು

ಯಶವಂತ್ ಅವ್ರ ಮನೆಯಲ್ಲಿ ಎಲ್ಲರೂ ಡಾ.ರಾಜ್ ಕುಟುಂಬಸ್ಥರ ಅಭಿಮಾನಿಗಳು. ಅಜ್ಜಿ ಲಕ್ಷ್ಮೀ ಹಾಗೂ ತಾತ ಸದಾಶಿವರೆಡ್ಡಿ ಹಿಂದಿನಿಂದಲೂ ಅಣ್ಣಾವ್ರ ಅಭಿಮಾನಿಗಳು. ಆರು ವರ್ಷದಿಂದ ಶ್ರೀ ಸರಸ್ವತಿ ಯೋಗ ಕೇಂದ್ರದಲ್ಲಿ ಶ್ರೀ ಪುರುಷೋತ್ತಮ್ ಅನ್ನೋರಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ ಯಶವಂತ್.

ಹೈಪರ್ ಆಕ್ಟಿವ್ ಹುಡುಗನಿಗೆ ಸಿಕ್ತು ಸ್ಫೂರ್ತಿ

ಸಾಕಷ್ಟು ವರ್ಷಗಳಿಂದ ರಾಜ್ ಕುಮಾರ್ ಫ್ಯಾಮಿಲಿ ಮುಂದೆ ಯೋಗ ಪ್ರದರ್ಶನ ಮಾಡಬೇಕು ಅಂತಿದ್ದ ಯಶವಂತ್ ಕನಸು ನಿನ್ನೆ ನನಸಾಗಿದೆ. ಪುನೀತ್ ಹಾಗೂ ಶಿವಣ್ಣರಿಂದ ಸಿಕ್ಕ ಪ್ರೋತ್ಸಾಹದಿಂದ ಯೋಗದಲ್ಲಿ ಮತ್ತಷ್ಟು ಸಾಧನೆ ಮಾಡಲು ಯಶವಂತರಿಗೆ ಸ್ಫೂರ್ತಿ ಸಿಕ್ಕಂತಾಗಿದೆ.

English summary
Puneeth Rajkumar and Shiva Rajkumar were happy to see Yashwant's yoga performance at 'Tagaru' teaser launch. ಯಶವಂತ್ ಯೋಗ ಪ್ರದರ್ಶನಕ್ಕೆ ಎದ್ದು ನಿಂತು ಗೌರವ ಸಲ್ಲಿಸಿದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X