»   » 'ರಾಜಕುಮಾರ' ಸಂಭ್ರಮದಲ್ಲಿ ಡ್ಯುಯೆಟ್ ಹಾಡಿದ ಕಿಚ್ಚ-ಅಪ್ಪು ವಿಡಿಯೋ ನೋಡಿ

'ರಾಜಕುಮಾರ' ಸಂಭ್ರಮದಲ್ಲಿ ಡ್ಯುಯೆಟ್ ಹಾಡಿದ ಕಿಚ್ಚ-ಅಪ್ಪು ವಿಡಿಯೋ ನೋಡಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿದ ಅಪರೂಪದ ಕ್ಷಣಕ್ಕೆ ಅರಮನೆ ಮೈದಾನ ಸಾಕ್ಷಿಯಾಯಿತು.

ಹೌದು, ಇತ್ತೀಚೆಗಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಶತದಿನೋತ್ಸವ ಸಂಭ್ರಮ ನಡೆಯಿತು. 'ರಾಜಕುಮಾರ'ನ ಸೆಂಚುರಿ ಸಂಭ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಅಪ್ಪು ಜೊತೆ ಕುಣಿದು ಸಂಭ್ರಮಿಸಿದರು.

ಅಪ್ಪು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಸುದೀಪ್, ಯಶ್, ಉಪೇಂದ್ರ.!

Puneeth and Sudeep Dance in Raajakumara 100 Days Function

ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಅನುಶ್ರಿ ಮತ್ತು ಅರುಣ್ ಸಾಗರ್, ಸುದೀಪ್ ಅವರನ್ನ ಡ್ಯಾನ್ಸ್ ಮಾಡಲು ಒತ್ತಾಯಿಸಿದರು. ಆಗ ಸುದೀಪ್ ಅವರು, ಪುನೀತ್ ಜೊತೆ ಸೇರಿ 'ರಾಜಕುಮಾರ' ಚಿತ್ರದ ಅಪ್ಪು ಡ್ಯಾನ್ಸ್ ಹಾಡಿಗೆ ಹೆಜ್ಜೆ ಹಾಕಿದರು. ಅಷ್ಟೇ ಅಲ್ಲದೇ ಪುನೀತ್ ಅವರ ಕೈ ಹಿಡಿದು ಡ್ಯುಯೆಟ್ ಹಾಡಿದ್ದು ನೆರದಿದ್ದ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಯಿತು.

'ರಾಜಕುಮಾರ'ನ ಶತದಿನೋತ್ಸವದಲ್ಲಿ ಹಾಡಿ-ಕುಣಿದು ಸಂಭ್ರಮಿಸಿದ ತಾರೆಯರು

ಇನ್ನು 'ರಾಜಕುಮಾರ' ಚಿತ್ರದ ಬಗ್ಗೆ ಮಾತನಾಡಿದ ಸುದೀಪ್ ''ಪುನೀತ್ ರಾಜ್ ಕುಮಾರ್ ಅವರ ನಟನೆ ಮತ್ತು ಡ್ಯಾನ್ಸ್ ಅಂದ್ರೆ ನನಗೆ ಇಷ್ಟ, 'ರಾಜಕುಮಾರ' ಚಿತ್ರ ಎಂದಾಕ್ಷಣ 'ಬೊಂಬೆ ಹೇಳುತೈತೆ' ಹಾಡು ನೆನಪಾಗುತ್ತೆ ಹಾಡನ್ನ ಕೂಡ ಹಾಡಿದರು.

ಸುದೀಪ್ ಮತ್ತು ಅಪ್ಪು ಡ್ಯಾನ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Powerstar Puneeth Rajkumar and Kiccha Sudeep Dance together in Raajakumara Movie 100 Days Celebration at Palace Ground. Watch Video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada