»   » 'ದೊಡ್ಮನೆ ಹುಡುಗ' ಪುನೀತ್ ಡೈಲಾಗ್ ಏನು ಗೊತ್ತಾ?

'ದೊಡ್ಮನೆ ಹುಡುಗ' ಪುನೀತ್ ಡೈಲಾಗ್ ಏನು ಗೊತ್ತಾ?

Posted By: ಜೀವನರಸಿಕ
Subscribe to Filmibeat Kannada

'ದೊಡ್ಮನೆ ಹುಡುಗ' ಚಿತ್ರ ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದಿದೆ. ಚಿತ್ರದ ಮುಹೂರ್ತ ಹೋಳಿ ಹಬ್ಬದ ದಿನ ನಡೆದಿದೆ. ಮಾಮೂಲಿನಂತೆ ಕ್ರೇಜಿಸ್ಟಾರ್ ರವಿಮಾಮ ಕ್ಲಾಪ್ ಮಾಡಿದ್ದಾರೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ.

ದೊಡ್ಮನೆಯಿಂದ ಹೋಳಿ ದಿನಕ್ಕೆ ಹೋಳಿಗೆಯಾಗಿ ಸಿನಿಪ್ರೇಮಿಗಳಿಗೆ ದೊಡ್ಮನೆ ಹುಡುಗ ಚಿತ್ರದ ಮುಹೂರ್ತ ನಡೆದಿದೆ. ಸ್ಯಾಂಡಲ್ ವುಡ್ ನಲ್ಲಿ ದೊಡ್ಮನೆ ಹುಡ್ಗ ಅನ್ನೋ ಟೈಟಲ್ಲೇ ಸಿನಿಮಾದ ಕಥೆಯನ್ನ ಹೇಳ್ತಿದೆ. ಆದ್ರೆ ಅದಕ್ಕಿಂತಲೂ ವಿಶೇಷ ಇನ್ನೊಂದಿದೆ.


Puneeth's first dialouge in Doddmane Hudga

ಅದು ಮುಹೂರ್ತದಲ್ಲಿ ಪುನೀತ್ ಹೇಳಿದ ಡೈಲಾಗ್. ರವಿಮಾಮ ಕ್ಲಾಪ್ ಮಾಡಿ ಆಕ್ಷನ್ ಅಂತ ಹೇಳ್ತಿದ್ದ ಹಾಗೇ ಪವರ್ ಸ್ಟಾರ್ ಹೇಳಿದ ಡೈಲಾಗ್, "ಅಭಿಮಾನಿಗಳೇ ನಮ್ಮ ಮನೇ ದೇವ್ರು" ಅಂತ. ಇಷ್ಟಕ್ಕೂ ಇದು ಚಿತ್ರದ ಟ್ಯಾಗ್ ಲೈನ್ ಕೂಡ.


ಚಿತ್ರ ಹೇಗಿದ್ಯೋ ಗೊತ್ತಿಲ್ಲ ಮೊದಲ ಪುನೀತ್ ಡೈಲಾಗ್ ಅಂತೂ ಸೂಪರ್ ಮತ್ತು ಪವರ್ ಫುಲ್ ಅನ್ನಿಸ್ತಿದೆ. ಸ್ಯಾಂಡಲ್ ವುಡ್ ದೊಡ್ಮನೆ ಅಣ್ಣಾವ್ರ ಕುಟಂಬದ ಹೆಸ್ರಿನಲ್ಲಿ ಬರ್ತಿರೋ ಸಿನಿಮಾ ಯಾವಾಗ ಶುರುವಾಗುತ್ತೆ ಅನ್ನೋ ಕುತೂಹಲಕ್ಕೆ ಸದ್ಯ ಬ್ರೇಕ್ ಬಿದ್ದಿದೆ.

English summary
Puneeth Rajkumar's Doddamane Hudga launched on the festival of colours 'Holi'. The movie directed by Soori and starring Puneeth Rajkumar and Radhika Pandit in lead roles also has Ambareesh, Bharathi Vishnuvardhan, Ravi Shankar, Avinash and Srinivas in important roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada