»   » ರಕ್ಷಿತ್ ಶೆಟ್ಟಿ ಕನಸಿಗೆ ಕೈ ಜೋಡಿಸಿದ ಪುನೀತ್ ರಾಜ್ ಕುಮಾರ್

ರಕ್ಷಿತ್ ಶೆಟ್ಟಿ ಕನಸಿಗೆ ಕೈ ಜೋಡಿಸಿದ ಪುನೀತ್ ರಾಜ್ ಕುಮಾರ್

Posted By:
Subscribe to Filmibeat Kannada

ನಟ ರಕ್ಷಿತ್ ಶೆಟ್ಟಿ ಅವರಿಗೆ ಈಗ ಒಂದಾದ ಮೇಲೆ ಒಂದು ಶುಭ ಸುದ್ದಿಗಳು ಬರುತ್ತಿದೆ. 'ಕಿರಿಕ್ ಪಾರ್ಟಿ' ಸಿನಿಮಾದ ದೊಡ್ಡ ಯಶಸ್ಸು, ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ, ಬಳಿಕ ಮತ್ತೆ ಈಗ ರಕ್ಷಿತ್ ಶೆಟ್ಟಿ ತುಂಬಾ ಸಂತೋಷವಾಗಿದ್ದಾರೆ.

ಕನ್ನಡದ ಸ್ಟಾರ್ ನಟರು ಈಗ ಯಶಸ್ವಿ ನಿರ್ಮಾಪಕರು

ಮೊದಲು ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ನಿರ್ಮಾಪಕರಾಗಿದ್ದಾರೆ. ಆದರೆ ಈಗ ರಕ್ಷಿತ್ ತಮ್ಮ 'ಪರಮ್ ವಾಹ್' (paramvah) ನಿರ್ಮಾಣ ಸಂಸ್ಥೆಯ ಕಛೇರಿಯನ್ನು ಸಹ ಶುರು ಮಾಡಿದ್ದಾರೆ. ಬಹಳ ವರ್ಷಗಳಿಂದ ಒಂದು ಸ್ವಂತ ನಿರ್ಮಾಣ ಸಂಸ್ಥೆ ಮತ್ತು ಅದರ ಕಛೇರಿ ಮಾಡಬೇಕು ಎಂಬ ಕನಸು ರಕ್ಷಿತ್ ಅವರದ್ದಾಗಿತ್ತು. ಆ ಕನಸು ಈಗ ನೆರವೇರಿದೆ.

ನಿಶ್ಚಿತಾರ್ಥದ ನಂತರ ಮಂತ್ರಾಲಯಕ್ಕೆ ಭೇಟಿಕೊಟ್ಟ ರಕ್ಷಿತ್-ರಶ್ಮಿಕಾ

ರಕ್ಷಿತ್ ಶೆಟ್ಟಿ ಅವರ ನೂತನ ಕಛೇರಿ ಉದ್ಗಾಟನೆ ಕಾರ್ಯಕ್ರಮದ ಸಂತೋಷದ ಕ್ಷಣಗಳು ಫೋಟೋಗಳಲ್ಲಿ ಸೆರೆಯಾಗಿದೆ. ಮುಂದೆ ಓದಿ...

ನೂತನ ಕಛೇರಿ

ನಟ ರಕ್ಷಿತ್ ಶೆಟ್ಟಿ ತಮ್ಮ 'ಪರಮ್ ವಾಹ್' (paramvah) ನಿರ್ಮಾಣ ಸಂಸ್ಥೆಯ ಹೊಸ ಕಚೇರಿಯನ್ನು ಶುರು ಮಾಡಿದ್ದಾರೆ. ಬೆಂಗಳೂರಿನ ನಾಗದೇವನಹಳ್ಳಿ ಬಳಿ ಈ ಕಚೇರಿ ಇದೆ.

ಪುನೀತ್ ಶುಭ ಹಾರೈಕೆ

ರಕ್ಷಿತ್ ಶೆಟ್ಟಿ ಅವರ ಈ ಹೊಸ ಕಛೇರಿಯನ್ನು ನಟ ಪುನೀತ್ ರಾಜ್ ಕುಮಾರ್ ಉದ್ಘಾಟನೆ ಮಾಡಿದ್ದರು. ಟೇಪ್ ಕಟ್ ಮಾಡಿ, ದೀಪ ಬೆಳಗಿ, ರಕ್ಷಿತ್ ಶೆಟ್ಟಿ ಅವರಿಗೆ ಅಪ್ಪು ಶುಭ ಕೋರಿದರು.

ಮತ್ತೊಂದು ಸಾಧನೆಗೆ ಪಾತ್ರವಾದ 'ಕಿರಿಕ್ ಪಾರ್ಟಿ'

ಕುಟುಂಬದ ಹಾಜರಿ

ರಕ್ಷಿತ್ ಶೆಟ್ಟಿ ಅವರ ತಾಯಿ ಮತ್ತು ನಟಿ ರಶ್ಮಿಕಾ ಮಂದಣ್ಣ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

'ಕಿರಿಕ್ ಪಾರ್ಟಿ' ತಂಡ ಭಾಗಿ

ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಿ‍ಷಬ್ ಶೆಟ್ಟಿ, ನಟಿ ಸಂಯುಕ್ತ ಹೆಗ್ಡೆ ಸೇರಿದಂತೆ 'ಕಿರಿಕ್ ಪಾರ್ಟಿ' ಚಿತ್ರತಂಡ ಹಾಗೂ ರಕ್ಷಿತ್ ಶೆಟ್ಟಿ ಅವರ ಆಪ್ತ ಗೆಳೆಯರು ಭಾಗಿಯಾಗಿದ್ದರು.

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ವಿಡಿಯೋ ನೋಡಿ...

ಸಿನಿಮಾದ ಕೆಲಸಗಳು ನಡೆಯುತ್ತದೆ

ರಕ್ಷಿತ್ ಶೆಟ್ಟಿ ಅವರ ಈ ಹೊಸ ಕಛೇರಿಯಲ್ಲಿ ಸಿನಿಮಾದ ಚರ್ಚೆ, ಸ್ಕ್ರಿಪ್ಟ್ ವರ್ಕ್, ಎಡಿಟಿಂಗ್ ಸೇರಿದಂತೆ ಅನೇಕ ಕೆಲಸಗಳು ನಡೆಯಲಿದೆಯಂತೆ.

English summary
Puneeth Rajkumar inaugurated Rakshith Shetty's new production office.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada