ವೈರಲ್ ವಿಡಿಯೋ: ಅಭಿಮಾನಿಗಾಗಿ ದೋಸೆ ಹುಯ್ದ ಪುನೀತ್ ರಾಜ್‌ಕುಮಾರ್

ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವವರು ನಟ ಪುನೀತ್‌ ರಾಜ್‍ಕುಮಾರ್. ತಾನೊಬ್ಬ ದೊಡ್ಡ ಸ್ಟಾರ್ ನಟನ ಪುತ್ರ ಅನ್ನುವ ಯಾವ ಅಹಂ ಕೂಡ ಇಲ್ಲದೇ ತಾನೋಬ್ಬ ಸಾಮಾನ್ಯ ವ್ಯಕ್ತಿ ಎಂಬಂತೆಯೇ ಬದುಕಿದ್ದಷ್ಟು ದಿನವು ಇದ್ದವರು. ಅದರಲ್ಲೂ ಪ್ರತೀನಿತ್ಯ ಪುನೀತ್ ಮನೆಗೆ ಸಾಕಷ್ಟು ಅಭಿಮಾನಿಗಳು ಬರುತ್ತಿರುತ್ತಾರೆ. ಶೂಟಿಂಗ್ ಇಲ್ಲದೇ ಮನೆಯಲ್ಲೆ ಇದ್ದರೆ ಬೇಜಾರು ಮಾಡಿಕೊಳ್ಳದೇ ಪ್ರತಿಯೊಬ್ಬರನ್ನು ಭೇಟಿ ಮಾಡಿ, ಮಕ್ಕಳು ಬಂದಿದ್ದರೆ ಅವರನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು. ಅವರಿಗೆ ಹೊಟ್ಟೆ ತುಂಬ ಊಟ ಹಾಕಿ ಖುಷಿ ಖುಷಿಯಾಗಿ ಅಪ್ಪು ಅಭಿಮಾನಿಗಳನ್ನು ಕಳುಹಿಸಿಕೊಡುತ್ತಿದ್ದರು.

ಹೀಗೆ ತಾನೊಬ್ಬ ದೊಡ್ಡ ನಟ ಎನ್ನುವುದನ್ನು ಮರೆತು ಅಭಿಮಾನಿಗಳೊಂದಿಗೆ ಬೆರೆಯುತ್ತಿದ್ದ ಅಪ್ಪು ಕೆಲ ದಿನಗಳ ಹಿಂದೆಯಷ್ಟೆ ಮಲ್ಲೇಶ್ವರಂನ ದೋಸೆ ಕ್ಯಾಂಪ್‌ನಲ್ಲಿ ಸುಂದರ ಕ್ಷಣಗಳನ್ನು ಕಳೆದಿದ್ರು. ತನ್ನ ಅಭಿಮಾನಿಯ ದೋಸೆ ಕ್ಯಾಂಪ್‌ಗೆ ತೆರಳಿದ್ದ ಅಪ್ಪು ಅಲ್ಲಿ ಸ್ವತಃ ತಾನೇ ಕೈಯಾರೆ ದೋಸೆ ಮಾಡಿ ಖುಷಿಪಟ್ಟಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.

Puneeth making a dosa for his fan: old video got viral now

ಮೊದಲಿನಿಂದಲೂ ಪುನೀತ್‌ಗೆ ಮಲ್ಲೇಶ್ವರದ ದೋಸೆ ಕ್ಯಾಂಪ್‌ನ ದೋಸೆ ಅಂದರೆ ತುಂಬಾ ಇಷ್ಟ, ಶೂಟಿಂಗ್ ಬಿಡುವಿನಲ್ಲಿ, ಅಥವಾ ಶೂಟಿಂಗ್ ಸ್ಪಾಟ್‌ಗೆ ಇಲ್ಲಿಂದ ದೋಸೆ ತರಿಸಿಕೊಳ್ಳುತ್ತಿದ್ದ ಅಪ್ಪು ಎರಡು ದಿನಗಳ ಹಿಂದೆ ಕೂಡ ಅಲ್ಲಿ ತೆರಳಿದ್ದರು. ಹೋಗಿದ್ದು ಅಷ್ಟೇ ಅಲ್ಲದೇ ಅಭಿಮಾನಿಯ ಖುಷಿಗಾಗಿ ಕೈಯಾರೆ ಒಂದು ದೋಸೆ ಮಾಡಿದ್ದಾರೆ. ಹಾಗೇ ಅಲ್ಲಿ ನೆರೆದಿದ್ದ ಸಾಕಷ್ಟು ಅಭಿಮಾನಿಗಳನ್ನು ಅಪ್ಪು ಮಾತನಾಡಿಸಿದ್ದಾರೆ. ಹೀಗೆ ಪುನೀತ್ ಸರಳತೆ ಬಗ್ಗೆ ಸಾಕಷ್ಟು ನೋಡಿದ್ದೇವೆ ಕೇಳಿದ್ದೇವೆ. ಈ ವೀಡಿಯೋ ಕೂಡ ಇದಕ್ಕೆ ಸಾಕ್ಷಿಯಾಗಿದೆ. ಸಾಕಷ್ಟು ಅಭಿಮಾನಿಗಳು ಇಷ್ಟು ಒಳ್ಳೆ ಮನಸ್ಸಿನ ನಟನನ್ನು ಇಷ್ಟು ಬೇಗ ಇಹಲೋಕ ತ್ಯಜಿಸಿದ ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Puneeth making a dosa for his fan: old video got viral now

ಹೀಗೆ ಅಪ್ಪು ಸರಳತೆ ಬಗ್ಗೆ ಮಾತನಾಡಲು ಪದಗಳೇ ಸಾಲುವುದಿಲ್ಲ. ಒಂದೊಂದು ಸಿನಿಮಾ ಮಾಡಿಕೊಂಡು ತಾನೊಬ್ಬ ಸೂಪರ್ ಸ್ಟಾರ್ ಅಂತ ಬೀಗುವ ಅದೆಷ್ಟೋ ಮಂದಿಗೆ ಪುನೀತ್ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಆದರೆ ಇನ್ನು ಪುನೀತ್ ನೆನಪು ಮಾತ್ರ. ಪ್ರತಿ ಅಭಿಮಾನಿಯ ಹೃದಯದಲ್ಲಿ ಬೆಚ್ಚಗಿನ ಜಾಗ ತನ್ನದಾಗಿಸಿಕೊಂಡಿರುವ ಅಪ್ಪು ಹಾಯಾಗಿ ಸುಖ ನಿದ್ದೆಗೆ ಜಾರಿದ್ದಾರೆ. ಆದರೆ ಅಭಿಮಾನಿಗಳು, ಕುಟುಂಬ ಸದಸ್ಯರು ಕಣ್ಣೀರ ಕೋಡಿ ಹರಿಸುತ್ತಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

More from Filmibeat

English summary
Puneeth made a dosa for his fan: old video got viral now on Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X