ಯುವ ರಾಜ್‌ಕುಮಾರ್, ಶ್ರೀದೇವಿ ಮದುವೆಗೆ 3ನೇ ವರ್ಷ: ಪುನೀತ್ ಸಮಾಧಿಗೆ ದಂಪತಿ ಭೇಟಿ!
ಕನ್ನಡ ಚಿತ್ರರಂಗದ ದೊಡ್ಮನೆ ಮೊಮ್ಮಗ ಯುವ ರಾಜ್‌ಕುಮಾರ್ ಸದ್ಯ ತಮ್ಮ ಸಿನಿಮಾ ಜರ್ನಿಯ ಆರಂಭದಲ್ಲಿ ಬ್ಯುಸಿಯಾಗಿ ಇದ್ದಾರೆ. ಮೊದಲ ಸಿನಿಮಾದ ಫಸ್ಟ್ ಲುಕ್ ಕೂಡ ಲಾಂಚ್ ಆಗಿದೆ. ಇನ್ನೇನು ಸಿನಿಮಾ ಶೂಟಿಂಗ್ ಶುರುವಾಗಬೇಕು ಅಷ್ಟೆ.
ಯುವ ರಾಜ್‌ಕುಮಾರ್ ಮೊದಲ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟು ಕೊಂಡಿವೆ. ಇನ್ನು ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು ಎನ್ನು ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಕಲ ತಯಾರಿ ಮಾಡಿಕೊಳ್ಳುತ್ತಾ ಇದೆ.
ಸಿನಿಮಾ ಹೊರತು ಪಡಿಸಿ ಯುವ ರಾಜ್‌ಕುಮಾರ್ ಇಂದು (ಮೇ 26) ತುಂಬಾ ವಿಶೇಷವಾದ ದಿನ. ಯುವರಾಜ್ ಸಿನಿಮಾಗೆ ಬರುವ ಮೊದಲೇ ಮದುವೆ ಆಗಿದ್ದಾರೆ. ತಾವು ಬಹುಕಾಲ ಪ್ರೀತಿಸಿದ ಗೆಳತಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ ಯುವರಾಜ್ ಇಂದು ಈ ಜೋಡಿಯ ವಿವಾಹ ವಾರ್ಷಿಕೋತ್ಸವ.

ಯುವರಾಜ್, ಶ್ರೀದೇವಿ 3ನೇ ವಿವಾಹ ವಾರ್ಷಿಕೋತ್ಸವ!
ಇವರ ದಾಂಪತ್ಯ ಜೀವನಕ್ಕೆ ಈಗ 3ನೇ ವರ್ಷ. ಹೌದು ಯುವರಾಜ್ ಕುಮಾರ್ ಮತ್ತು ಶ್ರೀದೇವಿ ತಮ್ಮ 3ನೇ ವಿವಾಹ ವರ್ಷಿಕೋತ್ಸವವನ್ನು ಆಚರಿಸಿಕೊಳ್ಳತ್ತಾ ಇದ್ದಾರೆ. ಯುವರಾಜ್ ಮೊದಲ ಸಿನಿಮಾದ ಯೋಜನೆಗಳು ನಡೆಯುವ ಮುನ್ನವೇ ಮದುವೆ ಆಗಿದ್ದರು. ಪ್ರೀತಿಸಿ ಮದುವೆ ಆದ ಈ ಜೋಡಿ, ತಮ್ಮ ವಿವಾಹ ವಾರ್ಷಿಕೋತ್ಸವದ ದಿನವನ್ನು ವಿಶೇಷವಾಗಿ ಆಚರಿಸುತ್ತಾ ಇದೆ.
ಅಪ್ಪು ಆಶೀರ್ವಾದ ಪಡೆದ ಯುವರಾಜ್ ದಂಪತಿ!
ಇಂದು ಯುವರಾಜ್ ಮತ್ತು ಶ್ರೀದೇವಿ ಅವರ ಮದುವೆ ವಾರ್ಷಿಕೋತ್ಸವದ ದಿನ. ಹಾಗಾಗಿ ಈ ಜೋಡಿ ಈ ದಿನವನ್ನು ಅಪ್ಪು ಆಶೀರ್ವಾದ ಪಡೆದುಕೊಳ್ಳುವುದರ ಮೂಲಕ ಆರಂಭ ಮಾಡಿದೆ. ಯುವರಾಜ್ ಮತ್ತು ಶ್ರೀದೇವಿ ಇಬ್ಬರೂ ಕೂಡ ಕಂಠೀರವ ಸ್ಟೂಡಿಯೋಗೆ ಭೇಟಿ ನೀಡಿ. ಅಲ್ಲಿ ಅಪ್ಪು ಸಮಾಧಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೊತೆಗೆ ಅಜ್ಜ, ಅಜ್ಜಿ ಸಮಾಧಿಗೆ ವಂದಿಸಿದ್ದಾರೆ.

2019ರಲ್ಲಿ ಮದುವೆ ಆದ ಯುವ, ಶ್ರೀದೇವಿ!
ಈ ಜೋಡಿ 2019ರಲ್ಲಿ ಅದ್ಧೂರಿಯಾಗಿ ಮಾದುವೆ ಆಗಿದೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ಜರುಗಿತ್ತು. 2019 ಮೇ 26ರಂದು ಕುಟುಂಬಸ್ಥರು, ಗುರು ಹಿರಿಯರು, ಆಪ್ತರ ಸಮ್ಮುಖದಲ್ಲಿ ಯುವರಾಜ್ ಮತ್ತು ಶ್ರೀದೇವಿ ಮದುವೆ ನೆರವೇರಿದೆ. 2018ರ ಜುಲೈನಲ್ಲಿ ಮೈಸೂರಿನಲ್ಲಿ ನಿಶ್ಚಿತಾರ್ಥ ನೆರವೇರಿತ್ತು.

ಯುವರಾಜ್ ಮೊದಲ ಚಿತ್ರಕ್ಕೆ ಭರ್ಜರಿ ತಯಾರಿ!
ಇನ್ನು ಯುವರಾಜ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಮೊದಲ ಸಿನಿಮಾದ ತಯಾರಿ ಭರ್ಜರಿಯಾಗಿ ನಡೆಯುತ್ತಾ ಇದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮತ್ತು ಹೊಂಬಾಳೆ ಸಂಸ್ಥೆ ನಿರ್ಮಾಣ ಚಿತ್ರಕ್ಕಿದೆ. ಈಗಾಗಲೆ ಯುವರಾಜ್ ಫಸ್ಟ್ ಲುಕ್ ರಿಲೀಸ್ ಆಗಿ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇನ್ನು ಸಿನಿಮಾ ಶೂಟಿಂಗ್ ಶುರುವಗುವುದೊಂದೆ ಬಾಕಿ ಇದೆ.


Click it and Unblock the Notifications











