'ಪುನೀತ್ ರಾಜ್‌ಕುಮಾರ್' ಕಥೆಗೆ 'ಯುವರಾಜ್ ಕುಮಾರ್' ಹೀರೊ!
ರಾಜ್‌ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಿನಿಮಾರಂಗಕ್ಕೆ ಭರ್ಜರಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೆ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳು ರಿವೀಲ್ ಆಗುತ್ತಿವೆ. ಈ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ ಹೊರ ಇಲ್ಲಿದೆ ಮುಂದೆ ಓದಿ.
ಯುವರಾಜ್ ಕುಮಾರ್ ಮೊದಲ ಸಿನಿಮಾ 'ಯುವ ರಣಧೀರ ಕಂಠೀರವ' ಎನ್ನುವ ಟೈಟಲ್ ಅಡಿಯಲ್ಲಿ ಲಾಂಚ್ ಆಗಿದೆ. ಆದರೆ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಈ ಚಿತ್ರದ ನಿಂತು ಹೋಗಿದೆ. ಬೇರೊಂದು ಚಿತ್ರದ ಮೂಲಕ ಲಾಂಚ್ ಆಗಲು ತಯಾರಿ ನಡೆಸಿದ್ದಾರೆ.
ಯುವರಾಜ್ ಕುಮಾರ್ ಮುಂದಿನ ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಏಪ್ರಿಲ್ 24ಕ್ಕೆ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಲಾಂಚ್ ಆಗುವ ಸಾಧ್ಯತೆ ಇದೆ. ಈ ಚಿತ್ರದ ಕಥೆಯ ಬಗ್ಗೆ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ.

ಅಪ್ಪುಗಾಗಿ ಮಾಡಿದ್ದ ಕಥೆಗೆ ಯುವರಾಜ್ ನಾಯಕ!
ನಟ ಯುವರಾಜ್ ಕುಮಾರ್ ಮೊದಲ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿವೆ. ಡಾ.ರಾಜ್‌ಕುಮಾರ್ ಕುಟುಂಬದಿಂದ ಚಿತ್ರರಂಗಕ್ಕೆ ಬರೆಯುತ್ತಿರುವ ಮತ್ತೊಮ್ಮ ನಾಯಕ ಯುವರಾಜ್‌ಕುಮಾರ್. ಹಾಗಾಗಿ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಯುವರಾಜ್ ಕುಮಾರ್ ಮೊದಲ ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಡೈರೆಕ್ಟರ್. ಈ ಕಾರಣಕ್ಕೆ ಕತೆಯ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ. ಅದೇನಂದ್ರೆ, ಪುನೀತ್ ರಾಜ್‌ಕುಮಾರ್‌ಗಾಗಿ ಬರೆದ ಕಥೆಗೆ ಯುವರಾಜ್ ಕುಮಾರ್ ನಾಯಕನಾಗಲಿದ್ದಾರೆ.

ಅಪ್ಪುಗಾಗಿ, ಸಂತೋಷ್ ಮಾಡಿದ್ದ ಕಥೆ!
ನಿರ್ದೇಶಕ ಸಂತೋಷ್ ಆನಂದ್ ರಾಮ್ ಪುನೀತ್ ರಾಜ್‌ಕುಮಾರ್‌ಗಾಗಿ ಕಥೆ ಒಂದನ್ನು ಮಾಡಿದ್ದರು. 'ಜೇಮ್ಸ್' ಚಿತ್ರದ ಬಳಿಕ ಸಂತೋಷ್ ಆನಂದ್ ರಾಮ್ ಬರೆದ ಈ ಕಥೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಬೇಕಿತ್ತು. ಆದರೆ ದುರಾದೃಷ್ಟವಶಾತ್ ಅಪ್ಪು ಅಗಲಿಕೆಯಿಂದ ಸಂತೋಷ್ ಆನಂದ್‌ರಾಮ್ ಕತೆಯನ್ನು ಪಕ್ಕಕ್ಕಿಟ್ಟಿದ್ದರು. ಈಗ ಇದೇ ಕಥೆಯನ್ನು ಯುವರಾಜ್ ಕುಮಾರ್‌ಗಾಗಿ ಸ್ವಲ್ಪ ಬದಲಾಯಿಸಿದ್ದಾರಂತೆ ನಿರ್ದೇಶಕ ಸಂತೋಷ್ ಆನಂದ್ ರಾಮ್. ಈ ಕಥೆ ಕ್ರೀಡೆ ಆಧಾರಿತ ಕಥೆಯಾಗಿದ್ದು, ಯುವರಾಜ್ ಲುಕ್ ಮೇಲೆ, ಪಾತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

ಏಪ್ರಿಲ್ 24ಕ್ಕೆ ಯುವರಾಜ್ ಕುಮಾರ್ ಹೊಸ ಚಿತ್ರ ಲಾಂಚ್!
ಸಂತೋಷ್ ಆನಂದ್‌ರಾಮ್ ಮತ್ತು ಯುವ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಬರುವ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ, ಏಪ್ರಿಲ್ 24ಕ್ಕೆ ಹೊರ ಬೀಳಲಿದೆ. ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ, ಈ ಚಿತ್ರ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಅಂದೇ ಯುವ ರಾಜ್‌ಕುಮಾರ್ ಲಾಂಚ್ ಮತ್ತು ಹೊಸ ಚಿತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ.

ನಿರೀಕ್ಷೆ ಹುಟ್ಟಿಸಿರುವ ಯುವ ರಾಜನ ಎಂಟ್ರಿ!
ಪುನೀತ್ ರಾಜ್‌ಕುಮಾರ್‌ರನ್ನು ಅದೆಷ್ಟೋ ಜನ ಯುವರಾಜ್ ಕುಮಾರ್‌ನಲ್ಲಿ ಕಾಣುತ್ತಿದ್ದಾರೆ. ಅಪ್ಪು ಅಗಲಿಕೆ ಬಳಿಕ ಬಹುತೇಕ ಮಂದಿ ಅವರನ್ನು ಯುವರಾಜ್‌ನಲ್ಲಿ ಕಾಣುತ್ತಿದ್ದಾರೆ. ಹಾಗಾಗಿ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೊದಲ ಚಿತ್ರ ಬಹಳ ಪ್ರಾಮುಖ್ಯತೆ ಪಡೆದು ಕೊಂಡಿದ್ದು, ಸಾಕಷ್ಟು ನಿರೀಕ್ಷೆ ಹೊಂದಿದೆ. ಯುವ ರಾಜ್‌ಕುಮಾರ್ ಲಾಂಚಿಂಗ್ ಸಿನಿಮಾಗೆ ಸಂತೋಷ್ ಆನಂದ್ ರಾಮ್ ನಿರ್ದೇಶನವಿದ್ದು, ಹೊಂಬಾಳೆ ಬಂಡವಾಳ ಹೂಡಿದೆ.


Click it and Unblock the Notifications











