Yuva Rajkumar: ಹೊಂಬಾಳೆ ಜೊತೆ ಯುವ ಮಾಡ್ತಿರೋದು 1 ಸಿನಿಮಾ ಅಲ್ಲ, ಮತ್ತೆಷ್ಟು?
ರಾಜ್‌ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಅವರ ಮೊದಲ ಚಿತ್ರ 'ಯುವ', ಪೋಸ್ಟರ್ ಲುಕ್ ಲಾಂಚ್ ಆಗಿದೆ. ಆದರೆ ಅಪ್ಪು ನಿಧನದ ಬಳಿಕ ಎಲ್ಲವೂ ಬದಲಾಗುತ್ತಿದೆ. ಈಗ ಯುವ ರಾಜ್ ಮೊದಲ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಾ ಇದ್ದಾರೆ.
ಮೊದಲ ಚಿತ್ರ ಸೆಟ್ಟೇರುವ ಮೊದಲೇ, ಯುವ ರಾಜ್‌ಕುಮಾರ್ ಮತ್ತೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ಟು ಎಲ್ಲಾ ಸೇರಿ ಯುವ ಈಗ ನಾಲ್ಕು ಚಿತ್ರಗಳು ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಯುವ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭದಲ್ಲೇ, ದೊಡ್ಡ ಮಟ್ಟದ ಛಾಪು ಮೂಡಿಸಲಿದ್ದಾರೆ.
ಯುವ ರಾಜ್‌ಕುಮಾರ್ ಒಬ್ಬ ಭರವಸೆಯ ನಟ ಆಗಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅದರೆ ದೊಡ್ಡ ಪರದೆ ಮೇಲೆ ನಟನಾಗಿ ಅಭಿನಯಿಸುವಾಗ ಹೇಗೆ ಜನರ ಮನ ಗೆಲ್ಲುತ್ತಾರೆ ಎನ್ನುವುದು ಕೂಡ ಅಷ್ಟೆ ಮುಖ್ಯ. ಹಾಗಾಗಿಯೇ ಅವರ ಮೊದಲ ಚಿತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

3 ಚಿತ್ರಗಳಿಗೆ ಯುವರಾಜ್ ಕುಮಾರ್ ಸಹಿ!
ಯುವ ರಾಜ್‌ಕುಮಾರ್ ಬಗ್ಗೆ ಮತ್ತೊಂದು ಹೊಸ ಸುದ್ದಿ ಬಂದಿದೆ. ಅವರ ಮೊದಲ ಸಿನಿಮಾವನ್ನು ಸಂತೋಷ್ ಆನಂದ್ ನಿರ್ದೇಶನ ಮಾಡುತ್ತಾರೆ ಎನ್ನುವುದು ಈಗಾಗಲೇ ಕನ್ಫರ್ಮ್ ಆಗಿದೆ. ಆದರೆ, ಒಂದು ಮಾತ್ರ ಅಲ್ಲ, ಮೂರು ಚಿತ್ರಗಳ ಅಪ್‌ಡೇಟ್ ಇಲ್ಲಿದೆ. ಹೌದು ಒಂದಲ್ಲಾ, ಎರಡಲ್ಲ, ಮೂರು ಚಿತ್ರಗಳನ್ನು ಯುವ ರಾಜ್‌ಕುಮಾರ್ ಈಗಾಗಲೇ ಒಪ್ಪಿ ಓಕೆ ಎಂದಿದ್ದಾರೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಯುವರಾಜ್ 3 ಚಿತ್ರಗಳಿಗೆ ಹೊಂಬಾಳೆ ಬಂಡವಾಳ!
ಯುವ ರಾಜ್‌ಕುಮಾರ್ ಮೊದಲ ಚಿತ್ರ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿ ಹೊರ ಬಂದಿದೆ. ಹೌದು, ಹೊಂಬಾಳೆ ಸಿನಿಮಾ ಯುವ ರಾಜ್‌ಕುಮಾರ್ ಮುಂದಿನ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈಗಾಗಲೇ ಮಾತುಕತೆ ಮುಗಿದಿದ್ದು, ಯುವ ರಾಜ್‌ಕುಮಾರ್ ಕೂಡ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಯುವರಾಜ್ ಒಟ್ಟು 4 ಚಿತ್ರಗಳು ಕನ್ಫರ್ಮ್?
ಈಗಾಗಲೇ ಲಾಂಚ್ ಆಗಿರುವ 'ಯುವ ರಣಧೀರ್ ಕಂಠೀರವ' ಚಿತ್ರ ಎರಡನೇ ಸಿನಿಮಾ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಹೊಂಬಾಳೆ ಮೂರು ಚಿತ್ರಗಳನ್ನು ಮಾಡುತ್ತಾ ಇರುವ ಕಾರಣಕ್ಕೆ, ಈ ಚಿತ್ರ 4ನೇ ಸಿನಿಮಾ ಆಗಲಿದ್ಯಾ, ಅಥವಾ ಈ ಚಿತ್ರದ ಬಳಿಕ ಮಿಕ್ಕ ಚಿತ್ರಗಳನ್ನು ಹೊಂಬಾಳೆ ಸಂಸ್ಥೆ ಯುವ ರಾಜ್ ಜೊತೆಗೆ ಮಾಡುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ. ಆದರೆ ಇದಕ್ಕೆಲ್ಲಾ ಚಿತ್ರತಂಡವೇ ಉತ್ತರಿಸಬೇಕಿದೆ.

ಹೊಂಬಾಳೆಯಲ್ಲಿ ಯುವಗೆ ಅಪ್ಪು ಸ್ಥಾನ!
ಪುನೀತ್ ರಾಜ್‌ಕುಮಾರ್ ಚಿತ್ರಗಳಿಂದಲೇ ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಾಣ ಶುರು ಮಾಡಿತ್ತು. ಇಲ್ಲಿ ತನಕ ಅಪ್ಪು ಜೊತೆಗೆ ಹಲವು ಚಿತ್ರಗಳನ್ನು ಹೊಂಬಾಳೆ ಮಾಡಿದೆ. ಇನ್ನು ಮುಂದೆ ಅಪ್ಪು ಜೊತೆಗೆ ಹಲವು ಚಿತ್ರಗಳನ್ನು ಮಾಡುವ ಯೋಜನೆಯಲ್ಲಿ ಹೊಂಬಾಳೆ ಸಂಸ್ಥೆ ಇತ್ತು. ಆದರೆ ಅಪ್ಪು ಅಗಲಿಕೆ ಬಳಿಕ ಅಪ್ಪು ಸ್ಥಾನದಲ್ಲಿ ಯುವಗಾಗಿ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಯುವ ರಾಜ್ ಜೊತೆಗೆ ಹೊಂಬಾಳೆ 3 ಚಿತ್ರಗಳನ್ನು ಮಾಡಲು ಸಿದ್ಧವಾಗಿದೆ ಎನ್ನಲಾಗಿದೆ.


Click it and Unblock the Notifications











