Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿವಣ್ಣ, ರಾಘಣ್ಣ ಅಂದರೆ ನನಗೆ ಪ್ರಾಣ ಎಂದಿದ್ದ ಅಪ್ಪು: ಕೋಟ್ಯಾಧಿಪತಿ ನೆನೆದು ಮಿಸ್ ಯು ಎಂದ ರಾಘಣ್ಣ
ಡಾ.ರಾಜ್ಕುಮಾರ್ ಕುಟುಂಬ ಶಿಸ್ತಿಗೆ, ಸಂಬಂಧಗಳಿಗೆ ಹೆಸರುವಾಸಿ. ಕನ್ನಡ ಚಿತ್ರರಂಗದ ದೊಡ್ಮನೆ ವಿವಾದಗಳ ಗೋಜಿಗೆ ಹೋಗಿಲ್ಲ. ಕೇವಲ ಸಿನಿಮಾ, ಚಿತ್ರರಂಗ, ಅಭಿಮಾನಿಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು ಅಣ್ಣಾವ್ರ ಕುಟುಂಬ. ಅದರಲ್ಲೂ ಸ್ಯಾಂಡಲ್ವುಡ್ಗೆ ಶಿವಣ್ಣ, ರಾಘಣ್ಣ, ಪುನೀತ್ ಮೂರು ಮುತ್ತುಗಳಂತೆ ಇದ್ದವರು. ಒಬ್ಬರಿಗೊಬ್ಬರು ಗೌರವ ಕೊಟ್ಟುಕೊಂಡು ಕುಟುಂಬದ ಮೌಲ್ಯವನ್ನು ತೋರಿಸಿಕೊಟ್ಟವರು.
ಶಿವಣ್ಣ, ರಾಘಣ್ಣ ಹಾಗೂ ಪುನೀತ್ ನಡುವಿನ ಸಹೋದರ ಸಂಬಂಧ ಹೇಗಿತ್ತು? ಅನ್ನುವುದನ್ನು ಇಡೀ ಚಿತ್ರರಂಗ ಕಣ್ಣಾರೆ ನೋಡಿದೆ. ಮೂವರ ಅಭಿಮಾನಿಗಳಿಗೂ ಗೊತ್ತು. ಈ ಹಿಂದೆ ಕನ್ನಡದ ಕೊಟ್ಯಾಧಿಪತಿ ಕಾರ್ಯಕ್ರಮದ ವೇಳೆ ಪುನೀತ್ ರಾಜ್ಕುಮಾರ್ ತಮ್ಮ ಸಹೋದರರ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಆ ವಿಡಿಯೋವನ್ನೇ ರಾಘವೇಂದ್ರ ರಾಜ್ಕುಮಾರ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಶಿವಣ್ಣ ಹಾಗೂ ರಾಘಣ್ಣ ಬಗ್ಗೆ ಅಪ್ಪು ಏನು ಹೇಳಿದ್ದಾರೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಶಿವಣ್ಣ, ರಾಘಣ್ಣ ಗುಣಗಾನ
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡದ ಕೊಟ್ಯಾಧಿಪತಿ' ಜನ ಮೆಚ್ಚಿದ ಕಾರ್ಯಕ್ರಮ. ಪುನೀತ್ ರಾಜ್ಕುಮಾರ್ ಕಿರುತೆರೆಯಲ್ಲಿ ಮಾಡಿದ ನಿರೂಪಣಾ ಶೈಲಿಗೆ ಪವರ್ ಫ್ಯಾನ್ಸ್ ಅಷ್ಟೇ ಅಲ್ಲ, ಇಡೀ ಕನ್ನಡದ ಜನತೆ ಫಿದಾ ಆಗಿದ್ದರು. ಸಮಾಜಕ್ಕೆ ಒಳ್ಳೆಯ ಮಾತುಗಳ ಮೂಲಕ ಸಮಾಜಕ್ಕೆ ಪಾಸಿಟಿವಿಟಿಯನ್ನು ತುಂಬುತ್ತಿದ್ದ ಕಾರ್ಯಕ್ರಮ ಜನಮನ್ನಣೆಯನ್ನಯ ಗಳಿಸಿತ್ತು. ಈ ವೇಳೆ ಸ್ಪರ್ಧಿಯೊಬ್ಬರು ಅಪ್ಪು ಬಾಲ್ಯದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಆ ವೇಳೆ ಪುನೀತ್ ರಾಜ್ಕುಮಾರ್ " ನನ್ನ ಜೀವನದ ಎರಡು ಪಿಲ್ಲರ್ ಶಿವಣ್ಣ, ರಾಘಣ್ಣ. ಅವರು ನನ್ನ ಪ್ರಾಣ" ಎಂದಿದ್ದರು. ಆ ಸಂಚಿಕೆಯಲ್ಲಿ ಸ್ಪರ್ಧಿ ಹಾಗೂ ಅಪ್ಪುನ ಸಂಭಾಷಣೆಯನ್ನು ಮುಂದು ಓದಿ.

ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅಪ್ಪು ಹೇಳಿದ್ದು ಏನು?
ಕನ್ನಡದ ಕೋಟ್ಯಾಧಿಪತಿಯ ಸ್ಪರ್ಧಿಯೊಬ್ಬರು ಅಪ್ಪು ನಿಮ್ಮ ಬಾಲ್ಯ ಹೇಗಿತ್ತು ಎಂದು ಪ್ರಶ್ನೆ ಹೇಳುತ್ತಾರೆ. ಇಲ್ಲಿಂದ ಅವರಿಬ್ಬರ ಸಂಭಾಷಣೆ ಹೀಗೆ ಸಾಗಿತ್ತು.
ಸ್ಪರ್ಧಿ: ನಾನು ಟಿವಿ ನೋಡುವಾಗ ಚಾನೆಲ್ ಗೋಸ್ಕರ್ ಹೊಡೆದಾಡುತ್ತಿದ್ದೆವು. ನಿಮ್ಮ ಬಾಲ್ಯ ಹೇಗಿತ್ತು?
ಪುನೀತ್ ರಾಜ್ಕುಮಾರ್: ತುಂಬಾ ಒಳ್ಳೆಯ ಪ್ರಶ್ನೆ. ಇನ್ನೊಂದು ಪ್ರಶ್ನೆ ಆದ್ಮೇಲೆ ಇದಕ್ಕೆ ಉತ್ತರ ನೀಡುತ್ತೇನೆ. ನನಗೆ ಚೆನ್ನಾಗಿ ನೆನಪಿದೆ. ನೀವು ನನ್ನ ಅಣ್ಣಂದಿರ ಬಗ್ಗೆ ಕೇಳಿದ್ದೀರಲ್ಲಾ? ಶಿವಣ್ಣ ಅವರು, ರಾಘಣ್ಣ ಅವರು ನನಗಿಂತ ಹತ್ತು ವರ್ಷದ ಮೇಲೆ ದೊಡ್ಡವರು. ಶಿವಣ್ಣ 13 ವರ್ಷಕ್ಕೆ ದೊಡ್ಡವರು. ರಾಘಣ್ಣ 10 ವರ್ಷಕ್ಕೆ ದೊಡ್ಡವರು. ನಮ್ಮಲ್ಲಿ ಯಾವುದೇ ಗಲಾಟೆಗಳು ಆಗುತ್ತಿರಲಿಲ್ಲ.
ಪುನೀತ್ ರಾಜ್ಕುಮಾರ್ ಹಾಗೂ ಅವರ ಇಬ್ಬರೂ ಸಹೋದರರಿಗೂ ವಯಸ್ಸಿನ ಅಂತರವಿತ್ತು. ಹೀಗಾಗಿ ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ಅಪ್ಪುನ ತಮ್ಮನಿಗಿಂತ ಹೆಚ್ಚಾಗಿ ಮಗನಂತೆ ಕಂಡಿದ್ದೇ ಹೆಚ್ಚು.

ಶಿವಣ್ಣ, ರಾಘಣ್ಣ ಅಂದರೆ ಪ್ರಾಣ
ಪುನೀತ್ ರಾಜ್ಕುಮಾರ್ ಕೇವಲ ಶಿವಣ್ಣ, ರಾಘಣ್ಣ ನಡುವಿನ ವಯಸ್ಸಿನ ಅಂತರ ಬಗ್ಗೆ ಅಷ್ಟೇ ಮಾತಾಡಿರಲಿಲ್ಲ. ಅವರ ಬದುಕಿನಲ್ಲಿ ಇವರಿಬ್ಬರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಕನ್ನಡ ನಾಡಿಗೆ ಸಾರಿ ಹೇಳಿದ್ದರು. " ಇವತ್ತಿಗೂ ನನಗೆ ಪಿಲ್ಲರ್ ಅಂತಾರಲ್ಲ. ನನ್ನ ಜೀವನದಲ್ಲಿ ನನ್ನನ್ನು ಎತ್ತಿದವರು ಶಿವಣ್ಣ ಅವರು, ರಾಘಣ್ಣ ಅವರು. ಅವರನ್ನು ತುಂಬಾ ಗೌರವಿಸುತ್ತೇನೆ. ಅವರಿಬ್ಬರು ಅಂದರೆ ನನಗೆ ಪ್ರಾಣ." ಎಂದು ಕೋಟ್ಯಾಧಿಪತಿ ಸ್ಪರ್ಧಿಗೆ ತಿಳಿಸಿದ್ದರು.
|
ಮಿಸ್ ಯು ಅಪ್ಪು ಎಂದ ರಾಘಣ್ಣ
ಕನ್ನಡದ ಕೋಟ್ಯಾಧಿಪತಿಯ ಈ ಅದ್ಭುತ ಕ್ಷಣವನ್ನು ರಾಘವೇಂದ್ರ ರಾಜ್ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. " ಕನ್ನಡದ ಕೋಟ್ಯಾಧಿಪತಿಯ ಅದ್ಭುತ ಕ್ಷಣಗಳು. ಮಿಸ್ ಯು ಅಪ್ಪು" ಎಂದು ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಅಪ್ಪು ಅಗಲಿದ ದಿನದಿಂದ ರಾಘಣ್ಣ ತಮ್ಮ ಟ್ವಿಟರ್ ಖಾತೆಯಲ್ಲಿ ಪುನೀತ್ ನೆನಪು ನೆನಪಿಸುವ ಒಂದಲ್ಲಾ ಒಂದು ವಿಡಿಯೋ ಶೇರ್ ಮಾಡುತ್ತಲೇ ಇದ್ದಾರೆ.