ಪುಟ್ಟ ಅಭಿಮಾನಿಯ ಆಸೆ ಈಡೇರಿಸಿ ಆಸ್ಪತ್ರೆಯ ಸಂಪೂರ್ಣ ಖರ್ಚು ಭರಿಸಿದ ಪುನೀತ್
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಟ್ಟ ಅಭಿಮಾನಿ ಆದರ್ಶ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಾಲಕನಿಗೆ ಪುನೀತ್ ರಾಜ್ ಕುಮಾರ್ ಅಂದರೆ ಪಂಚಪ್ರಾಣ. ಒಮ್ಮೆಯಾದರು ಪವರ್ ಸ್ಟಾರ್ ರನ್ನು ನೋಡಬೇಕು, ಮತನಾಡಬೇಕೆನ್ನುವ ಆಸೆ. ಅನೇಕ ತಿಂಗಳಿಂದ ಪುನೀತ್ ನೋಡುವ ಕನಸು ಕಾಣುತ್ತ ಜೀವ ಕೈಯಲ್ಲಿ ಹಿಡಿದು ಕಾಯುತ್ತಿದ್ದರು.
ಈ 16 ವರ್ಷದ ಪುಟ್ಟ ಬಾಲಕ ಆದರ್ಶ್ ಕನಸು ಈಗ ನನಸಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಲಕನ ಆಸೆಯನ್ ನುಈಡೇರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಇಂದಿರ ನಗರದ ನಿವಾಸಿ ಆದರ್ಶ್. ಹನುಮಂತ ಮತ್ತು ರೇಖಾ ದಂಪತಿಯ ಹಿರಿಯ ಪುತ್ರ. ಈ ಬಾಲಕ ಹುಟ್ಟಿದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಈ ಪುಟ್ಟ ಬಾಲಕನ ಅಭಿಮಾನ ಕಂಡು ಪುನೀತ್ ಮನ ಕರಗಿದೆ. ಬಾಲಕನನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ನಿನ್ನೆ ಪುನೀತ್ ಮನಗೆ ಬಂದ ಆದರ್ಶ್ ಮತ್ತು ಕುಟುಂಬದವರನ್ನು ಪವರ್ ಸ್ಟಾರ್ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಕೆಲವು ಸಮಯ ಅವರ ಜೊತೆ ಕಳೆದಿದ್ದಾರೆ. ಪುಟ್ಟ ಬಾಲಕನ ಮುಖದಲ್ಲಿ ನೆಚ್ಚಿನ ನಟನನ್ನು ನೋಡಿದ ಸಂತಸ ಕಾಣುತ್ತಿತ್ತು.

ಪವರ್ ಸ್ಟಾರ್ ಪುಟ್ಟ ಬಾಲಕನನ್ನು ಕರೆಸಿಕೊಂಡು ಮಾತನಾಡಿಸಿ ಆತನ ಆಸೆ ಈಡೇರಿಸಿದ್ದು ಅಷ್ಟೆಯಲ್ಲ. ಆತನ ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಪುನೀತ್ ರಾಜ್ ಕುಮಾರ್ ಅವರೆ ಭರಿಸಿ ಮಾನವಿಯತೆ ಮೆರೆದಿದ್ದಾರೆ. ಪುನೀತ್ ಭೇಟಿಯಾಗಿ ಬಾಲಕನ ಕುಟುಂಬದವರ ಜೊತೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದ್ಹಾಗೆ ಅಪ್ಪು ಸಹಾಯ ಮಾಡುತ್ತಿರುವುದು ಇದೆ ಮೊದಲೇನಲ್ಲ. ಈ ಮೊದಲು ಸಹ ಸಾಕಷ್ಟು ಮಂದಿಯ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಈಗ ಪುಟ್ಟ ಬಾಲಕ ಆದರ್ಶ್ ಕಷ್ಟಕ್ಕೆ ನೆರವಾದ ಪುನೀತ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟ ಅಭಿಮಾನಿ ಆದರ್ಶ್ ಬೇಗ ಚೇತರಿಕೊಳ್ಳಲಿ, ಆರೋಗ್ಯವಂತನಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.


Click it and Unblock the Notifications











