ಮತ್ತೆ ಕಾಲೇಜ್ ಹುಡುಗನಾದ ಅಪ್ಪು : ಪುನೀತ್ ಗೆ ಒಳಗೊಳಗೆ ಭಯವಂತೆ!

Recommended Video

ಪುನೀತ್ ರಾಜ್ ಕುಮಾರ್ ಗೆ ಯುವರತ್ನ ಸಿನಿಮಾದ ಪಾತ್ರ ಮಾಡಲು ಒಳಗೊಳಗೇ ಭಯವಂತೆ! | FILMIBEAT KANNADA

'ತಾಲಿಬಾನ್ ಅಲ್ಲ ಅಲ್ಲ...' ಅಂತ ಕಾಲೇಜ್ ಹುಡುಗರಿಗೆ ಹುಚ್ಚೆಬಿಸಿದ್ದ ಪುನೀತ್ ರಾಜ್ ಕುಮಾರ್ ಬಳಿಕ ತಮ್ಮ ಎರಡನೇ ಸಿನಿಮಾದಲ್ಲಿಯೂ ಕಾಲೇಜ್ ಬಾಯ್ ಆಗಿ ರಮ್ಯಾ ಹಿಂದೆ ಸುತ್ತಿದ್ದರು.

'ಅಭಿ' ಸಿನಿಮಾದ ನಂತರ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಿದ್ದ ಪುನೀತ್ ಈಗ ಮತ್ತೆ ಕಾಲೇಜ್ ಗೆ ಹೋಗುತ್ತಿದ್ದಾರೆ. ಹೌದು, ಪುನೀತ್ ರಾಜ್ ಕುಮಾರ್ ತಮ್ಮ ಮುಂದಿನ ಸಿನಿಮಾ 'ಯುವರತ್ನ'ದಲ್ಲಿ ಕಾಲೇಜು ಹುಡುಗನ ಪಾತ್ರ ಮಾಡುತ್ತಿದ್ದಾರೆ.

ನಿನ್ನೆ ಈ ಸಿನಿಮಾದ ಟೈಟಲ್ ಲಾಂಚ್ ಆಗಿದ್ದು, ಸಿನಿಮಾದ ಕೆಲವು ವಿಚಾರಗಳನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಮುಂದೆ ಓದಿ....

ಕಾಲೇಜು ಹುಡುಗನಾದ ಅಪ್ಪು

ಕಾಲೇಜು ಹುಡುಗನಾದ ಅಪ್ಪು

ನಟ ಪುನೀತ್ ರಾಜ್ ಕುಮಾರ್ ತಮ್ಮ ಮುಂದಿನ ಸಿನಿಮಾ 'ಯುವರತ್ನ'ದಲ್ಲಿ ಯಾವ ಪಾತ್ರ ಮಾಡುತ್ತಾರೆ ಎಂಬ ಕುತೂಹಲ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದ್ದು, 'ಅಭಿ' ಸಿನಿಮಾದ ಬಳಿಕ ಅಂದರೆ, 16 ವರ್ಷದ ನಂತರ ಪುನೀತ್ ಕಾಲೇಜ್ ಬಾಯ್ ಆಗಿದ್ದಾರೆ.

'ಯುವರತ್ನ' ಟೈಟಲ್ ಯಾಕೆ?

'ಯುವರತ್ನ' ಟೈಟಲ್ ಯಾಕೆ?

ಸಿನಿಮಾಗೆ 'ಯುವರತ್ನ' ಎಂಬ ಹೆಸರೇ ಯಾಕೆ? ಎಂಬ ಪ್ರಶ್ನೆಗೆ ಉತ್ತರ ನೀಡಿರುವ ನಿರ್ದೇಶಕರು, ಪುನೀತ್ ರಾಜ್ ಕುಮಾರ್ ಒಬ್ಬ ಯುತ್ ಐಕಾನ್. ಸೋ, 'ಯುತ್ ಐಕಾನ್' ಪದವನ್ನು ಕನ್ನಡದಲ್ಲಿ 'ಯುವರತ್ನ' ಎಂದು ಕರೆಯಲಾಗಿದೆ ಎಂದರು. ಇನ್ನು ಈ ಸಿನಿಮಾ ಯುವಕರಿಗೆ ತುಂಬ ಹತ್ತಿರ ಆಗಲಿದೆಯಂತೆ.

ಸೌತ್ ಚಿತ್ರರಂಗದ ದೊಡ್ಡ ಹೀರೋಯಿನ್ ?

ಸೌತ್ ಚಿತ್ರರಂಗದ ದೊಡ್ಡ ಹೀರೋಯಿನ್ ?

ಸಿನಿಮಾ ನಾಯಕಿ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಈ ಬಗ್ಗೆ ನಿರ್ದೇಶಕರನ್ನ ಕೇಳಿದಾಗ, ಸದ್ಯಕ್ಕೆ ನಾಯಕಿ ಫೈನಲ್ ಆಗಿಲ್ಲ. ಆದ್ರೆ, ದೊಡ್ಡ ನಟಿಯೊಬ್ಬರನ್ನ ಆಯ್ಕೆ ಮಾಡುವ ಯೋಚನೆ ಇದೆ ಎಂದಿದ್ದಾರೆ. ಸೌತ್ ಇಂಡಿಯಾದ ಸ್ಟಾರ್ ನಟಿಯರೊಬ್ಬರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಆದ್ರೆ, ಯಾರು ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ.

ಸ್ಟೈಲ್, ಆಕ್ಷನ್, ಡ್ಯಾನ್ಸ್

ಸ್ಟೈಲ್, ಆಕ್ಷನ್, ಡ್ಯಾನ್ಸ್

ಪುನೀತ್ ಸಿನಿಮಾ ಅಂದರೆ ಅಲ್ಲಿ ಸ್ಟೈಲ್, ಆಕ್ಷನ್, ಡ್ಯಾನ್ಸ್ ಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಅದರಲ್ಲಿಯೂ 'ರಾಜಕುಮಾರ' ಸಿನಿಮಾದಲ್ಲಿ ಈ ಮೂರು ಅಂಶಗಳು ಪ್ರೇಕ್ಷಕರಿಗೆ ಹೆಚ್ಚು ಖುಷಿ ನೀಡಿದ್ದವು. ಇನ್ನು ಈ ಸಿನಿಮಾದಲ್ಲಿಯೂ ಅಪ್ಪು ಅವರ ಸ್ಟೈಲ್ ತುಂಬ ಚೆನ್ನಾಗಿ ಇರಲಿದೆಯಂತೆ.

ಹರಿಕೃಷ್ಣ ಮ್ಯೂಸಿಕ್

ಹರಿಕೃಷ್ಣ ಮ್ಯೂಸಿಕ್

ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಂಗೀತ ಜರ್ನಿ ಈ ಚಿತ್ರದಲ್ಲಿಯೂ ಮುಂದುವರೆದಿದೆ. ಹರಿಕೃಷ್ಣ ಹಾಡುಗಳ ಜವಾಬ್ದಾರಿ ಹೊತ್ತುಕೊಂಡಿದ್ದು, ತಾಂತ್ರಿಕ ವರ್ಗದ ಉಳಿದವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆಯಂತೆ.

ಡಿಸೆಂಬರ್ ಮೂರನೇ ವಾರಕ್ಕೆ ಪ್ರಾರಂಭ

ಡಿಸೆಂಬರ್ ಮೂರನೇ ವಾರಕ್ಕೆ ಪ್ರಾರಂಭ

ಸದ್ಯ, ಸಿನಿಮಾದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸಂತೋಷ್ ಡೈಲಾಗ್ ಬರೆಯುತ್ತಿದ್ದಾರಂತೆ. ಡಿಸೆಂಬರ್ ಮೂರನೇ ವಾರ ಸಿನಿಮಾ ಪ್ರಾರಂಭ ಆಗಲಿದ್ದು, ಮುಂದಿನ ವರ್ಷದ ಗಣೇಶ ಹಬ್ಬದ ವೇಳೆಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

More from Filmibeat

English summary
Kannada actor Puneeth Rajkumar playing college boy role in 'Yuvaratna' movie. The movie is directing by Santhosh Ananddram and producing by Hombale Films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X