'ರಾಜಕುಮಾರ'ನ ಸೆಂಚುರಿ ಸಂಭ್ರಮಕ್ಕೆ ಪವರ್ ಸ್ಟಾರ್ ಸಾಥ್

By Bharath Kumar

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಇಂದು (ಜುಲೈ 1) ರಾಜ್ಯಾದ್ಯಂತ ಯಶಸ್ವಿ 100 ದಿನಗಳನ್ನ ಪೂರೈಸಿದೆ. ಈ ಸಂಭ್ರಮವನ್ನ ನಟ ಪುನೀತ್ ರಾಜ್ ಕುಮಾರ್ ಮತ್ತು ಚಿತ್ರತಂಡ ಅಭಿಮಾನಿಗಳ ಜೊತೆ ಸಂಭ್ರಮಿಸಿದೆ.

ರಾಜಕುಮಾರ ಚಿತ್ರದ ಶತದಿನೋತ್ಸವದ ಅಂಗವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಅಪ್ಪು ನೋಡಿ ಅಭಿಮಾನಿಗಳು ಫುಲ್ ಖುಷಿಯಾದರು. ಈ ವೇಳೆ ಮಾತನಾಡಿದ ಪುನೀತ್ ರಾಜ್ ಕುಮಾರ್ ಚಿತ್ರವನ್ನ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದಗಳನ್ನ ತಿಳಿಸಿದರು.

Puneeth Raajakumar Visit To Narthaki Theater

ಸುಮಾರು 45ಕ್ಕೂ ಚಿತ್ರಮಂದಿರಗಳಲ್ಲಿ 100 ದಿನ ಕಂಪ್ಲೀಟ್ ಮಾಡಿರುವ 'ರಾಜಕುಮಾರ' ಮಾರ್ಚ್ 24ಕ್ಕೆ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿರುವ ಪುನೀತ್ ಸಿನಿಮಾ 75 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರ್ ಬಂಡವಾಳ ಹಾಕಿದ್ದರು. ಉಳಿದಂತೆ ಪ್ರಿಯಾ ಆನಂದ್, ಶರತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಅಭಿನಯಿಸಿದ್ದರು.

Puneeth Raajakumar Visit To Narthaki Theater

ಇನ್ನು ಜುಲೈ 7ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಾಜಕುಮಾರ ಚಿತ್ರದ ಶತದಿನೋತ್ಸವ ಕಾರ್ಯಕ್ರಮವನ್ನು ನಡೆಸಲು ಚಿಂತಿಸಿರುವ ಚಿತ್ರತಂಡ ಕಲಾವಿದರನ್ನ ಗೌರವಿಸಲಿದೆ.

More from Filmibeat

English summary
Power Star Puneeth Raajakumara Visit to Narthaki Theater Today For 100 Days celebration. The Movie Directed By Santhosh Anandram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X