»   » ದುನಿಯಾ ವಿಜಿಗೆ ಸಾಥ್ ನೀಡಿದ ಪವರ್ ಸ್ಟಾರ್

ದುನಿಯಾ ವಿಜಿಗೆ ಸಾಥ್ ನೀಡಿದ ಪವರ್ ಸ್ಟಾರ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ಅಭಿನಯ ಮಾತ್ರವಲ್ಲದೆ ಗಾಯನದಲ್ಲೂ ಗುರುತಿಸಿಕೊಂಡಿರುವ ನಟ. ಇತ್ತೀಚಿಗಷ್ಟೇ "ವಾಸು ನಾನ್ ಪಕ್ಕಾ ಕಮರ್ಷಿಯಲ್" ಚಿತ್ರದ ಒಂದು ಹಾಡನ್ನ ಹಾಡಿದ ಅಪ್ಪು ಈಗ ದುನಿಯಾ ವಿಜಿ ಅವರ ಚಿತ್ರಕ್ಕೆ ತಮ್ಮ ಧ್ವನಿ ನೀಡಿದ್ದಾರೆ.

'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ದುನಿಯಾ ವಿಜಿ ಅವರ ಇಂಟ್ರಡಕ್ಷನ್ ಹಾಡನ್ನ ಪುನೀತ್ ಅವರಿಂದ ಹಾಡಿಸಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಡಿಗೆ ಅಪ್ಪು ಧ್ವನಿ ಆಗಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ 'ಬೆಳಗೆದ್ದು ಯಾರ ಮುಖವ' ಹಾಡನ್ನ ಬರೆದಿದ್ದ ಚಿತ್ರ ಸಾಹಿತಿ ಧನಂಜಯ ಈ ಹಾಡನ್ನ ಬರೆದಿದ್ದಾರೆ.

 Puneeth Raj Kumar sings a song for film 'Johnny Johnny Yes Pappa' movie

ಹೊಸ ಸಿನಿಮಾಗಾಗಿ ಬದಲಾಯಿತು ಪುನೀತ್ ಹೇರ್ ಸ್ಟೈಲ್

ಪುನೀತ್ ಹಾಗೂ ದುನಿಯಾ ವಿಜಿ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದರು ಅಪ್ಪು ಇದೇ ಮೊದಲ ಬಾರಿಗೆ ವಿಜಿ ಅವರ ಸಿನಿಮಾ ಹಾಡನ್ನ ಹಾಡಿದ್ದಾರೆ.

 Puneeth Raj Kumar sings a song for film 'Johnny Johnny Yes Pappa' movie

ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾವನ್ನ ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನ ಎನ್ನಿಸುವ ಟೀಸರ್ ಗಳನ್ನ ಬಿಡುಡಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆದಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರ ಇದೇ ತಿಂಗಳ ಅಂತ್ಯ ಅಥವಾ ಏರ್ಪಿಲ್ ನಲ್ಲಿ ಬಿಡುಡಗೆ ಮಾಡುವ ಸಾಧ್ಯತೆಗಳಿವೆ.

ಬರಿಗಾಲಲ್ಲಿ ಚಾಮುಂಡೇಶ್ವರಿ ಬೆಟ್ಟ ಹತ್ತಿದ ಪುನೀತ್

English summary
Kannada actor Power Star Puneeth Raj Kumar sings a song for film 'Johnny Johnny Yes Pappa' movie, Duniya Viji and Rachitha Ram acting in 'Johnny Johnny Yes Pappa' movie. Preetam Gubbi directing the film .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada