»   » ಕಸ್ತೂರಿ ನಿವಾಸ ಗೆಟಪ್ ನಲ್ಲಿ ಪುನೀತ್ 'ರಾಜಕುಮಾರ'

ಕಸ್ತೂರಿ ನಿವಾಸ ಗೆಟಪ್ ನಲ್ಲಿ ಪುನೀತ್ 'ರಾಜಕುಮಾರ'

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅಭಿನಯದ ಅಮೋಘ ಚಿತ್ರಗಳಲ್ಲಿ ಒಂದಾಗಿರುವ 'ಕಸ್ತೂರಿ ನಿವಾಸ' (1971) ಜನಮಾನಸಲ್ಲಿ ಇಂದಿಗೂ ಅಚ್ಚಳಿಯದ ನೆನಪುಗಳನ್ನು ಉಳಿಸಿರುವ ಚಿತ್ರ. ಈ ಕ್ಲಾಸಿಕ್ ಚಿತ್ರದಲ್ಲಿ ಬಳಸಿಕೊಂಡಿರುವ ಬಿಳಿ ಪಾರಿವಾಳವೂ ಅಷ್ಟೇ ಹೈಲೈಟ್ ಆಗಿದೆ. ಅದಕ್ಕೆ ಲಕ್ವಾ ಪಾರಿವಾಳ ಎಂಬ ಇನ್ನೊಂದು ಹೆಸರು ಉಂಟು.

ಇದೀಗ ಇದೇ ರೀತಿಯ ಪಾರಿವಾಳದ ಗೆಟಪ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿದ್ದಾರೆ. ಇಂದು ರಾಜ್ ಕುಮಾರ್ ಅವರ 87ನೇ ಹುಟ್ಟುಹಬ್ಬ (ಏ.24) ನಿಮಿತ್ತ ಅವರ ಹೊಸ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಯಿತು. [ಅಣ್ಣಾವ್ರ 'ಕಸ್ತೂರಿ ನಿವಾಸ' ಮನಮೋಹಕ ವಿಡಿಯೋ]

Puneeth 'Rajakumara' in Kasturi Nivasa getup

ಚಿತ್ರದ ಶೀರ್ಷಿಕೆ ಬಿಡುಗಡೆ ಜೊತೆಗೆ ಇದರ ಜೊತೆಗೆ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ. ಪುನೀತ್ ಅವರು ಥೇಟ್ ಕಸ್ತೂರಿ ನಿವಾಸ ಚಿತ್ರದ ಅಣ್ಣಾವ್ರ ತರಹ ಕಂಗೊಳಿಸುತ್ತಿದ್ದಾರೆ. ಅದೇ ಬಿಳಿ ಪಾರಿವಾಳ, ಅದೇ ಕಪ್ಪು ಕೋಟು ಅಭಿಮಾನಿಗಳನ್ನು ಸೆಳೆಯುತ್ತಿದೆ.

ಪುನೀತ್ ಅವರ ಹುಟ್ಟುಹಬ್ಬದಂದು 'ರಾಜಕುಮಾರ' ಚಿತ್ರವನ್ನು ಪ್ರಕಟಿಸಲಾಗಿತ್ತು. ಇಂದು ಗ್ರ್ಯಾಂಡ್ ಆಗಿ ಟೈಟಲ್ ಲಾಂಚ್ ಮಾಡಲಾಯಿತು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಸಂತೋಷ್ ಆನಂದ್ ರಾಮ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

Puneeth 'Rajakumara' in Kasturi Nivasa getup

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ಇದು. 'ಕಸ್ತೂರಿ ನಿವಾಸ' ಚಿತ್ರದಲ್ಲಿನ ವರನಟ ಡಾ.ರಾಜ್ ಕುಮಾರ್ ಅವರ ಮನೋಜ್ಞ ಅಭಿನಯಕ್ಕೆ ಮನಸೋಲದವರಿಲ್ಲ. ಬೆಂಕಿಪೊಟ್ಟಣ (ಡವ್ ಬ್ರ್ಯಾಂಡ್ ಮ್ಯಾಚ್ ಬಾಕ್ಸ್) ಉದ್ಯಮಿಯ ವಿಫಲ ಪ್ರೇಮಕಥೆಯೇ ಈ ಚಿತ್ರದ ಕಥಾವಸ್ತು. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

Puneeth 'Rajakumara' in Kasturi Nivasa getup

ಕಪ್ಪುಬಿಳುಪಿನಲ್ಲಿದ್ದ ಕಸ್ತೂರಿ ನಿವಾಸ ಚಿತ್ರ ಕಲರ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ದಾಖಲಿಸಿದ್ದು ಗೊತ್ತೇ ಇದೆ. ಇದೀಗ ಪುನೀತ್ ಅವರು ಅದೇ ಗೆಟಪ್ ನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಕಸ್ತೂರಿ ನಿವಾಸದಂತೆ 'ರಾಜಕುಮಾರ' ಚಿತ್ರವೂ ಸೂಪರ್ ಡೂಪರ್ ಹಿಟ್ ಆಗಲಿ ಎಂದು ಆಶಿಸೋಣ. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar's latest movie 'Rajakumara' 1st look poster released on 24th April, Dr Rajkumar's 87th birthday. The film being directed by Santhosh Anandram and produced by Vijay Kiraganduru. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada