ಅಪ್ಪು ಹುಟ್ಟುಹಬ್ಬಕ್ಕೆ ಇದಕ್ಕಿಂತ ಉಡುಗೊರೆ ಬೇಕಾ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ತಮ್ಮ 41ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಪ್ಪು ಬರ್ತಡೆ ದಿನ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡ್ಬೇಕು ಅಂತಲೇ ಕಾದು ಕುಳಿತಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಇಂದು 'ರಾಜಕುಮಾರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಒಂದ್ಕಡೆ, 'ಚಕ್ರವ್ಯೂಹ' ಆಡಿಯೋ ಬಿಡುಗಡೆ, ಇನ್ನೊಂದ್ಕಡೆ 'ರಾಜಕುಮಾರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಔಟ್ ಆಗಿರುವುದರಿಂದ ಅಪ್ಪು ಅಭಿಮಾನಿಗಳ ಮೊಗದಲ್ಲಿ ಸಂತಸ ತಂದಿದೆ.[ಪುನೀತ್ ಅವರ 'ರಾಜಕುಮಾರ'ದಲ್ಲಿ ಎರಡು ಕಥೆ ಇದೆಯಂತೆ]

'ಕಸ್ತೂರಿ ನಿವಾಸ' ಚಿತ್ರದಲ್ಲಿ ಡಾ.ರಾಜ್ ಕುಮಾರ್ ಕಾಣಿಸಿಕೊಂಡಂತೆ, ಬ್ಲಾಕ್ ಸೂಟು ಬೂಟು ತೊಟ್ಟು, ಹೆಗಲ ಮೇಲೆ ಪಾರಿವಾಳ ಕೂರಿಸಿಕೊಂಡು ಪುನೀತ್ ರಾಜ್ ಕುಮಾರ್ ಪೋಸ್ ಕೊಟ್ಟಿದ್ದ 'ರಾಜಕುಮಾರ' ಚಿತ್ರದ ಪೋಸ್ಟರ್ ಗಳನ್ನ ನೀವು ನೋಡಿರಬಹುದು.[41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್ ಸ್ಟಾರ್ ಪುನೀತ್]

ಅದಕ್ಕೆ ತದ್ವಿರುದ್ಧವಾಗಿದೆ 'ರಾಜಕುಮಾರ' ಚಿತ್ರದ ಲೇಟೆಸ್ಟ್ ಪೋಸ್ಟರ್. ಕ್ರಿಕೆಟರ್ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಪುನೀತ್ ರಾಜ್ ಕುಮಾರ್, APPU 1 ಜೆರ್ಸಿ ತೊಟ್ಟಿರುವ 'ರಾಜಕುಮಾರ' ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೇಗಿದ್ದರೂ, 'ರಾಜಕುಮಾರ' ಚಿತ್ರದಲ್ಲಿ ಎರಡು ವಿಭಿನ್ನ ಕಥೆಗಳಿವೆ ಅಂತ ಈಗಾಗಲೇ ವರದಿ ಆಗಿದೆ. ಇನ್ನೂ ಎರಡು ಬಗೆ ಬಗೆಯ ಪೋಸ್ಟರ್ಸ್ ನೋಡಿರುವ ಅಭಿಮಾನಿಗಳು ತಲೆಗೆ ಹುಳ ಅಲ್ಲ, ಹೆಬ್ಬಾವನ್ನೇ ಬಿಟ್ಟುಕೊಂಡಿದ್ದಾರೆ.


Click it and Unblock the Notifications











