Just In
Don't Miss!
- News
ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೇನಾ ದಿನ; ರಿಯಲ್ ಹೀರೋಗಳಿಗೆ ಶುಭಕೋರಿದ ಸಿನಿಮಾ ಹೀರೋಗಳು
ದೇಶದಾದ್ಯಂತ ಇಂದು (ಜನವರಿ 15) 73ನೇ ಸೇನಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಹುತಾತ್ಮ ಯೋಧರಿಗೆ ದೇಶ ಗೌರವ ನಮನ ಸಲ್ಲಿಸುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಸೇನಾ ಕಮಾಂಡ್ ಗಳ ಪ್ರಧಾನ ಕಚೇರಿಯಲ್ಲಿ ಸೇನಾ ದಿನ ಆಚರಣೆ ಮಾಡಲಾಗುತ್ತಿದೆ.
ಸೇನಾ ದಿನಕ್ಕೆ ಅನೇಕರು ಶುಭಕೋರುತ್ತಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ವಿಶ್ ಮಾಡಿದ್ದಾರೆ. ಈ ವಿಶೇಷ ದಿನವನ್ನು ಸಿನಿಮಾ ಸೆಲೆಬ್ರಿಟಿಗಳು ಸಹ ನೆನಪಿಸಿಕೊಂಡು ಸೇನಾ ದಿನಕ್ಕೆ ಶುಭಕೋರಿ ಕೆಚ್ಚೆದೆಯ ವೀರರಿಗೆ ಗೌರವ ಸಲ್ಲಿಸಿದ್ದಾರೆ.
ಸೈನ್ಯ, ಸೈನಿಕರು ಎಂದಕ್ಷಣ ಮೊದಲು ಪ್ರತಿಕ್ರಿಯೆ ನೀಡುವುದು ಬಾಲಿವುಡ್ ನಟ ಅಕ್ಷಯ್ ಕುಮಾರ್. ಅಕ್ಷಯ್ ಕುಮಾರ್ ಎಂದಿನಂತೆ ಈ ಬಾರಿ ಸಹ ವಿಶೇಷವಾಗಿ ಸೇನಾ ದಿನ ಆಚರಿಸಿ ಗಮನ ಸೆಳೆದಿದ್ದಾರೆ.
ಪುನೀತ್, ಯಶ್, ಸುದೀಪ್ ಮನೆಗೆ ಭೇಟಿಕೊಟ್ಟ ಮಾಜಿ ಸಚಿವ ಜಮೀರ್ ಅಹ್ಮದ್

ಭಾರತೀಯ ಸೇನೆ ಜೊತೆ ವಾಲಿಬಾಲ್ ಆಡಿದ ಅಕ್ಷಯ್
ಭಾರತೀಯ ಸೇನೆ ಜೊತೆ ವಾಲಿಬಾಲ್ ಆಟವಾಗಿ ಸೆನಾ ದಿನ ಆಚರಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಆಟದ ಮೈದಾನಕ್ಕೆ ತೆರಳಿದ ಅಕ್ಷಯ್ ಸೈನಿಕರ ಜೊತೆ ವಾಲಿಬಾಲ್ ಆಡಿ ಸಂತಸ ಪಟ್ಟಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ನಮ್ಮ ದೇಶದ ಹೆಮ್ಮೆಯ ಸೈನಿಕರನ್ನು ಭೇಟಿಯಾಗಿ ಸಂತಸವಾಯಿತು' ಎಂದು ಬರೆದುಕೊಂಡು ಶುಭಾಶಯ ಕೋರಿದ್ದಾರೆ.

ಪುನೀತ್ ರಾಜ್ ಕುಮಾರ್
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿ, 'ಗಡಿಯಲ್ಲಿ ನಮ್ಮನ್ನು ನಿರಂತರವಾಗಿ ಕಾಯುತ್ತಿರುವ ನಮ್ಮ ಎಲ್ಲಾ ಸೈನಿಕರಿಗೆ ನನ್ನ ವಂದನೆಗಳು' ಎಂದು ಹೇಳಿದ್ದಾರೆ.
ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷನಾದ ನಾಗ ಚೈತನ್ಯ

ಮಹೇಶ್ ಬಾಬು ಟ್ವೀಟ್
ಇನ್ನೂ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹ ಸಾಮಾಜಿಕ ಜಾಲತಾಣದ ಮೂಲಕ ಶುಕೋರಿದ್ದಾರೆ. ನಮ್ಮ ವೀರರ ನಿಸ್ವಾರ್ಥ ಸೇವೆ ಮತ್ತು ತ್ಯಾಗಕ್ಕೆ ಯಾವಾಗಲು ಗೌರವ ಮತ್ತು ಕೃತಜ್ಞತೆಗಳು' ಎಂದು ಹೇಳಿದ್ದಾರೆ.

ರಕುಲ್ ಪ್ರೀತ್ ಸಿಂಗ್
'ನಮ್ಮ ದೇಶದ ಯೋಗಕ್ಷೇಮಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪ್ರತಿದಿನ ಹೋರಾಡುವ ವೀರರ ಅದಮ್ಯ ಮನೋಭಾವವಕ್ಕೆ ನನ್ನ ಗೌರವ ಮತ್ತು ಕೃತಜ್ಞತೆಗಳು. ಯಾವಾಗಲು ಗೌರವಿಸಿ' ಎಂದು ನಟಿ ರಕುಲ್ ಪ್ರೀತ್ ಸಿಂಗ್ ಟ್ವೀಟ್ ಮಾಡಿದ್ದಾರೆ.