ಯಶ್ ಮಗಳ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್, ಪುನೀತ್
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಮಗಳು ಆಯ್ರಾ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾಳೆ. ಮಗಳ ಬರ್ತ್ ಡೇಯನ್ನು ಅದ್ದೂರಿಯಾಗಿ ರಾಕಿಂಗ್ ದಂಪತಿ ಆಚರಣೆ ಮಾಡಿದೆ.
ನಟ ದರ್ಶನ್, ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದಾರೆ. ದರ್ಶನ್ ಹಾಗೂ ಪುನೀತ್ ಪ್ರೀತಿಯ ಗೆಳೆಯನ ಮಗಳ ಹುಟ್ಟಹಬ್ಬದಲ್ಲಿ ಭಾಗಿಯಾಗಿದ್ದಾರೆ. ಆಯ್ರಾಗೆ ಚಾಲೆಂಜಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ವಿಶ್ ಮಾಡಿದ್ದಾರೆ.
ನಟಿ, ಸಂಸದೆ ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ್, ಅಭಿಷೇಕ್ ಅಂಬರೀಶ್, ಉದ್ಯಮಿ ಅಶೋಕ್ ಖೇಣಿ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಮುಖರಾಗಿದ್ದಾರೆ. ಉಳಿದಂತೆ ಯಶ್ ತಂದೆ, ತಾಯಿ, ತಂಗಿ ಸೇರಿದಂತೆ ಕುಟುಂಬ ಸದಸ್ಯರು ಇದ್ದರು.

ಆಯ್ರಾಗಾಗಿ ವಿಶೇಷವಾದ ದೊಡ್ಡ ಕೇಕ್ ತಯಾರು ಮಾಡಲಾಗಿತ್ತು. ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಆಯಿತು. ಹುಟ್ಟುಹಬ್ಬದ ವಿಶೇಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಮಗಳಿಗೆ ಯಶ್ ಹಾಗೂ ರಾಧಿಕಾ ಶುಭಾಶಯ ತಿಳಿಸಿದ್ದರು.
ಅಂದಹಾಗೆ, 2018 ಡಿಸೆಂಬರ್ 2 ರಂದು ಆಯ್ರಾಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದರು. ರಾಕಿಂಗ್ ಮಗಳ ಬರ್ತಡೇ ಇಂಡಸ್ಟ್ರಿಯವರು ಕೂಡ ವಿಶ್ ಮಾಡಿದ್ದಾರೆ. ಕಳೆದ ತಿಂಗಳು ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಜನ್ಮ ನೀಡಿದ್ದರು.


Click it and Unblock the Notifications











