'ಪಂಚತಂತ್ರ'ದಲ್ಲಿ ಪುನೀತ್, ದುನಿಯಾ ವಿಜಯ್ ಗೆ ಇಷ್ಟ ಆಗಿದ್ದೇನು?
Recommended Video

ಕಳೆದ ಶುಕ್ರವಾರ ಬಿಡುಗಡೆಯಾದ 'ಪಂಚತಂತ್ರ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರೇಕ್ಷಕರ ಜೊತೆ ಜೊತೆಗೆ ಚಿತ್ರರಂಗದ ಅನೇಕರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
ಸಿನಿಮಾ ಪ್ರೀಮಿಯರ್ ಶೋ ನಲ್ಲಿಯೇ ಕೆಲ ಚಿತ್ರರಂಗದ ಅತಿಥಿಗಳು ಚಿತ್ರ ನೋಡಿ ಖುಷಿ ಪಟ್ಟಿದ್ದರು. ಈಗ ಇನ್ನಷ್ಟು ಸ್ಟಾರ್ ಗಳು, ಸ್ಟಾರ್ ಡೈರೆಕ್ಟರ್ ಗಳು ಸಿನಿಮಾವನ್ನು ನೋಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ನಿರ್ದೇಶಕ ಜಯತೀರ್ಥ ಹಾಗೂ ರಿಷಬ್ ಶೆಟ್ಟಿ ಸಿನಿಮಾವನ್ನು ವೀಕ್ಷಿಸಿ ಅದರ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...
ಮಾರ್ಡನ್ ಸ್ಟೈಲ್ ನಲ್ಲಿ 'ಪಂಚತಂತ್ರ' ಕಥೆ
''ಭಟ್ಟರ ಸಿನಿಮಾ ಅಂತ್ತಿದ್ದ ಹಾಗೆ, ಡೈಲಾಗ್, ಮಾತುಕಥೆಯ ಸ್ಟೈಲ್ ಯುವಕರಿಗೆ ಬಹಳ ಇಷ್ಟ ಆಗುತ್ತದೆ. ಈ ಚಿತ್ರದಲ್ಲಿಯೂ ವಿಹಾನ್ ಮತ್ತು ಸೊನಾಲ್ ತುಂಬ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಈ ವಯಸ್ಸು ಎಂದುಕೊಂಡೆ ಇನ್ನೊಂದು ವಯಸ್ಸು ಅದರ ಎದುರುಗಡೆ ಇರುತ್ತದೆ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. 'ಪಂಚತಂತ್ರ' ಕಥೆಯನ್ನು ಮತ್ತೆ ಮಾರ್ಡನ್ ಸ್ಟೈಲ್ ನಲ್ಲಿ ಹೇಳಿದ್ದಾರೆ. ಮ್ಯೂಸಿಕ್, ಕಾರ್ ಸಾಹಸ ಚೆನ್ನಾಗಿದೆ. ಸಿನಿಮಾದಲ್ಲಿ ಒಂದು ನೀತಿ ಇದೆ.'' ಪುನೀತ್ ರಾಜ್ ಕುಮಾರ್, ನಟ
ಎಲ್ಲ ಪಾತ್ರಗಳು ಮನರಂಜನೆ ನೀಡುತ್ತದೆ
''ಎಲ್ಲ ಸ್ನೇಹಿತರು ಸೇರಿ ಅದ್ಭುತ ಸಿನಿಮಾ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಇರುವ ಪಾತ್ರಗಳು ಮನರಂಜನೆ ನೀಡುತ್ತದೆ. ಹೀರೋ, ಹೀರೋಯಿನ್ ಚೆನ್ನಾಗಿ ಮಾಡಿದ್ದಾರೆ. ಜೀವನದ ಬಹಳ ವಿಷಯವನ್ನು ಹೇಳಿದ್ದಾರೆ. ತುಂಬಾನೇ ಖುಷಿ ನೀಡಿದೆ. ಕಾರ್ ಸ್ಟಂಟ್ ಮಾಡಿರುವ ವ್ಯಕ್ತಿ ಆಗಾಗಾ ಭಯ ಪಡಿಸುತ್ತಾರೆ.'' - ದುನಿಯಾ ವಿಜಯ್, ನಟ
ರಂಗಾಯಣ ರಘು ಪೈಸಾ ವಸೂಲ್
''ಭಟ್ಟರು ಬರೆಯುವ ಸಾಹಿತ್ಯದ ರೀತಿ ಈ ಸಿನಿಮಾ ಇದೆ. 'ಪಂಚತಂತ್ರ' ಎಂದು ತಕ್ಷಣ ಬೋಧನೆ ಮಾತ್ರ ಇಲ್ಲ. ಅದರ ಜೊತೆಗೆ ಸಿಕ್ಕಾಪಟ್ಟೆ ಎಂಟಟೈನ್ಮೆಂಟ್ ಇದೆ. ವಿಹಾನ್ ಹಾಗೂ ಸೊನಾಲ್ ಫಸ್ಟ್ ಟೈಮ್ ಆಕ್ಟ್ ಮಾಡಿದ್ದಾರೆ ಎನಿಸುವುದಿಲ್ಲ. ರಂಗಾಯಣ ರಘು ಅಣ್ಣ ಪೈಸಾ ವಸೂಲ್. ಮತ್ತೊಮ್ಮೆ ಭಟ್ಟರು ರಾಕ್ ಮಾಡಿದ್ದಾರೆ.'' - ರಿಷಬ್ ಶೆಟ್ಟಿ, ನಿರ್ದೇಶಕ
'ಪಂಚತಂತ್ರ' ಅಂದರೆ ಎನರ್ಜಿ
''ಒಂದೇ ಪದದಲ್ಲಿ ಹೇಳಬೇಕು ಅಂದರೆ ಪಂಚತಂತ್ರ ಅಂದರೆ ಎನರ್ಜಿ. ಭಟ್ಟರು ಯಾವಾಗಲೂ ನನಗೆ ಒಂದು ಅಚ್ಚರಿ. ಅವರು ಪ್ರತಿ ಸಿನಿಮಾದಲ್ಲಿ ಅವರು ಹೇಳುತ್ತಿರುವ ವಿಷಯ ಬೇರೆ ಬೇರೆಯಾಗಿದೆ. ಸೆಕೆಂಡ್ ಹಾಫ್ ನಲ್ಲಿ ಫಿಲಾಸಫಿ, ಕಾಮಿಡಿ, ಥ್ರಿಲ್ ನೀಡಿ ಕೊನೆಗೆ ಭಾವುಕತೆ ಮೂಲಕ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಎಲ್ಲ ನಟರು ಚೆನ್ನಾಗಿ ಮಾಡಿದ್ದಾರೆ.'' - ಜಯತೀರ್ಥ, ನಿರ್ದೇಶಕ


Click it and Unblock the Notifications











