'ಯುವರತ್ನ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹೋದರನ ಮದುವೆಯಲ್ಲಿ ಅಪ್ಪು ಮತ್ತು ಜಗ್ಗೇಶ್
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಂತೋಷ್ ಆನಂದ್ ರಾಮ್ ಸಹೋದರ ಸಾಗರ್ ಆನಂದ್ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಗರ್ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಗಣ್ಯರು ಸಹ ಭಾಗಿಯಾಗಿದ್ದರು.
Recommended Video
ಕೊರೊನಾ ಲಾಕ್ ಡೌನ್ ಇದ್ದರೂ ಮದುವೆ ಸಮಾರಂಭಗಳಿಗೇನು ಬ್ರೇಕ್ ಬಿದ್ದಿಲ್ಲ. ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತಿವೆ. ಸ್ಯಾಂಡಲ್ ವುಡ್ ನಲ್ಲಿಯೂ ಸಾಕಷ್ಟು ಮದುವೆ ಸಮಾರಂಭಗಳು ನಡೆದಿವೆ. ಅದ್ದೂರಿಯಾಗಿರಬಿದ್ದರು ಸರಳವಾಗಿ, ಅಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ.ಮುಂದೆ ಓದಿ...

ಸಂತೋಷ್ ಆನಂದ್ ರಾಮ್ ಸಹೋದರನ ಮದುವೆ ಅಪ್ಪು
ಇದೀಗ ಸಂತೋಷ್ ಆನಂದ್ ರಾಮ್ ಸಹೋದರ ಸಾಗರ್ ಆನಂದ್ ರಾಮ್ ಇತ್ತೀಚಿಗೆ ಬಹುಕಾಲದ ಗೆಳತಿ ಜೊತೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ.

ಮದುವೆ ಫೋಟೋಗಳು ವೈರಲ್
ಸಂತೋಷ್ ಆನಂದ್ ರಾಮ್ ಮದುವೆಯಲ್ಲಿಯೂ ಸಹ ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದರು. ಸಹೋದರ ಸಾಗರ್ ಆನಂದ್ ರಾಮ್ ಮದುವೆಗೂ ಹಾಜರಾಗಿ ಶುಭಹಾರೈಸಿದ್ದಾರೆ. ಪುನೀತ್ ಜೊತೆ ಪತ್ನಿ ಅಶ್ವಿನಿ ಕೂಡ ಸಾಥ್ ನೀಡಿದ್ದಾರೆ. ಅಪ್ಪು ದಂಪತಿ ಸಂತೋಷ್ ಆನಂದ್ ರಾಮ್ ಕುಟುಂಬದ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮದುವೆ ಸಂಭ್ರಮದಲ್ಲಿ ಭಾಗಿಯಾದ ಜಗ್ಗೇಶ್
ಇನ್ನೂ ಸಂತೋಷ್ ಆನಂದ್ ರಾಮ್ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿರುವ ನಟ ಜಗ್ಗೇಶ್ ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಸಹೋದರ ಸಾಗರ್ ಆನಂದ್ ರಾಮ್ ಸಹ ಸಂತೋಷ್ ಆನಂದ್ ರಾಮ್ ಸಿನಿಮಾಗಳಿಗೆ ಸಹಾಯ ಮಾಡುತ್ತಿದ್ದಾರೆ.

ಯುವರತ್ನ ರಿಲೀಸ್ ಗೆ ರೆಡಿಯಾಗುತ್ತಿದೆ
ಪುನೀತ್ ರಾಜ್ ಕುಮಾರ್ ಜೊತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಎರಡನೆ ಸಿನಿಮಾ ಮಾಡುತ್ತಿದ್ದಾರೆ. ರಾಜಕುಮಾರ ಸಿನಿಮಾದ ದೊಡ್ಡ ಮಟ್ಟದ ಸಕ್ಸಸ್ ನ ನಂತರ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಇಬ್ಬರು ಯುವರತ್ನ ಸಿನಿಮಾ ಮೂಲಕ ಎರಡನೆ ಬಾರಿಗೆ ಒಂದಾಗಿದ್ದಾರೆ. ಯುವಕರತ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಯುವರತ್ನ ಸಿನಿಮಾ ಸದ್ಯ ಹಾಡುಗಳನ್ನು ರಿಲೀಸ್ ಮಾಡಲು ತಯಾರಾಗಿದೆ ಸಿನಿಮಾತಂಡ.


Click it and Unblock the Notifications