»   » ಪುನೀತ್ ಮತ್ತು ರಕ್ಷಿತ್ ದೊಡ್ಡತನದಿಂದ ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತ

ಪುನೀತ್ ಮತ್ತು ರಕ್ಷಿತ್ ದೊಡ್ಡತನದಿಂದ ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತ

Posted By:
Subscribe to Filmibeat Kannada

ಒಬ್ಬ ನಟ ತಾನು ಬೆಳೆಯುವುದರ ಜೊತೆಗೆ ಒಂದಷ್ಟು ಜನರನ್ನು ಬೆಳಸಬೇಕು. ಒಳ್ಳೆಯ ಕಥೆ..ಒಳ್ಳೆಯ ಸಿನಿಮಾ.. ಮಾಡುವವರಿಗೆ ಸಹಾಯ ಮಾಡಬೇಕು. ಹಿಂದಿಯಲ್ಲಿ ಅಮೀರ್ ಖಾನ್ ಅದೇ ರೀತಿಯ ಕೆಲಸವನ್ನು ಅನೇಕ ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ. ಈಗ ಕನ್ನಡದಲ್ಲಿ ಕೂಡ ಅಂತಹ ಪ್ರಯತ್ನ ಶುರುವಾಗಿದೆ.

ನಟ ಪುನೀತ್ ರಾಜ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಈಗ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ವಿಭಿನ್ನ ಸಿನಿಮಾಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಈ ನಟರು ಅದನ್ನು ಇನ್ನಷ್ಟು ಹೆಚ್ಚಿಸಿ ಚಿತ್ರರಂಗದ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ.

ಅಂದಹಾಗೆ, ಪುನೀತ್ ಮತ್ತು ರಕ್ಷಿತ್ ಮಾಡಿರುವ ಆ ಒಳ್ಳೆಯ ನಿರ್ಧಾರ ಏನು ಎಂಬುದು ಮುಂದಿದೆ ಓದಿ...

ಕವಲುದಾರಿ ಚಿತ್ರ

ಒಬ್ಬ ಸ್ಟಾರ್ ನಟನಾಗಿದ್ದ ಪುನೀತ್ ಈಗ ನಿರ್ಮಾಪಕನಾಗಿದ್ದಾರೆ. ತಮ್ಮ ನಿರ್ಮಾಣದಲ್ಲಿ ವಿಭಿನ್ನ ಸಿನಿಮಾವನ್ನು ಮಾಡುವುದಕ್ಕೆ ಪವರ್ ಸ್ಟಾರ್ ಮುಂದಾಗಿದ್ದಾರೆ. 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರ ಮಾಡಿದ್ದ ಹೇಮಂತ್ ರಾವ್ ಎರಡನೇ ಚಿತ್ರದ ಅಪ್ಪು ಬಂಡವಾಳ ಹಾಕಿದ್ದಾರೆ.

ಅಪ್ಪು ನಿರ್ಮಾಣದ ಮೊದಲ ಸಿನಿಮಾಗೆ ಕ್ಲಾಪ್ ಮಾಡಿದ ಶಿವಣ್ಣ

ಅಪ್ಪು ಬಂಡವಾಳ

ತಮ್ಮ ನಿರ್ಮಾಣದಲ್ಲಿ ವಿಭಿನ್ನ ಸಿನಿಮಾಗಳನ್ನು ಮಾಡುವುದಕ್ಕೆ ಪುನೀತ್ ಹೊರಟಿದ್ದಾರೆ. ಒಂದು ಕಂಪ್ಲೀಟ್ ಯುವ ತಂಡವನ್ನು ನಂಬಿ ಅವರ ಒಳ್ಳೆಯ ಕಥೆ ತೆರೆ ಮೇಲೆ ಮೂಡಲು ಪುನೀತ್ ಹಣ ಹಾಕಿದ್ದಾರೆ. ಪುನೀತ್ ಮೊದಲ ಚಿತ್ರದ ನಾಯಕನಾಗಿ ರಿಷಿ ಕಾಣಿಸಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ಮಾಣ

ಸ್ಯಾಂಡಲ್ ವುಡ್ ಚಿತ್ರರಂಗದ ಈ ರೀತಿಯ ಬದಲಾವಣೆಗೆ ಕಾರಣರಾದ ಪ್ರಮುಖರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ಅದೇ ರೆಗ್ಯೂಲರ್ ಸಿನಿಮಾ ಬಿಟ್ಟು ಬೇರೆ ರೀತಿಯ ಕಥೆಯ ಚಿತ್ರವನ್ನು ರಕ್ಷಿತ್ ಮಾಡಿದರು. ಸದ್ಯ ಅವರ ನಿರ್ಮಾಣದಲ್ಲಿ ಅನೇಕ ಡಿಫರೆಂಟ್ ಸಿನಿಮಾಗಳು ಬರುತ್ತಿದೆ.

'ಕಿರಿಕ್ ಪಾರ್ಟಿ'ಯ ಸ್ನೇಹಿತನಿಗಾಗಿ ರಕ್ಷಿತ್ ಮತ್ತೊಂದು ಸಿನಿಮಾ ನಿರ್ಮಾಣ!

'ಹಂಬಲ್ ಪೊಲಿಟಿಶಿಯನ್ ನಾಗರಾಜ್'

ರಕ್ಷಿತ್ ಶೆಟ್ಟಿ ಸದ್ಯ ನಿರ್ಮಾಣ ಮಾಡುತ್ತಿರುವ ವಿಭಿನ್ನ ಚಿತ್ರಗಳಲ್ಲಿ 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಚಿತ್ರ ಕೂಡ ಒಂದು. ಈ ಚಿತ್ರದಲ್ಲಿ ಡ್ಯಾನೀಶ್ ಸೇಠ್ ನಾಯಕನಾಗಿ ನಟಿಸಿದ್ದಾರೆ.

'ಕಿರಿಕ್ ಪಾರ್ಟಿ' ಗೆಳೆಯನಿಗಾಗಿ

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಗೆಳೆಯರ ಪೈಕಿ ಒಬ್ಬರಾಗಿ ನಟಿಸಿದ್ದ ನಟ ಅರವಿಂದ್‌ ಅಯ್ಯರ್‌ ಈಗ ಹೀರೋ ಆಗಿ ಎರಡು ಸಿನಿಮಾ ಮಾಡುತ್ತಿದ್ದಾರೆ. ಅರವಿಂದ್‌ ಅಯ್ಯರ್‌ ಅವರ 'ಭೀಮಸೇನಾ ನಳಮಹಾರಾಜ' ಮತ್ತು '777 ಚಾರ್ಲಿ' ಚಿತ್ರಕ್ಕೆ ರಕ್ಷಿತ್ ಪ್ರೊಡ್ಯೂಸರ್ ಆಗಿದ್ದಾರೆ.

English summary
Actor Puneeth Rajkumar and Rakshit shetty producing different movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada