Rajakumara Special Show : ಶಿವರಾತ್ರಿ ಜಾಗರಣೆಗೆ ಇಂಡಸ್ಟ್ರಿ ಹಿಟ್ 'ರಾಜಕುಮಾರ' ವಿಶೇಷ ಪ್ರದರ್ಶನ; ಬುಕಿಂಗ್ ಓಪನ್!

ಶಿವರಾತ್ರಿ ಹಬ್ಬದ ಪ್ರಯುಕ್ತ ಆ ದಿನ ರಾತ್ರಿ ಹಲವರು ಜಾಗರಣೆ ಮಾಡುತ್ತಾರೆ. ಕೆಲವರು ದೇವರ ನಾಮ ಜಪಿಸುತ್ತಾ ಜಾಗರಣೆ ಮಾಡಿದರೆ, ಇನ್ನೂ ಹಲವರು ವಿವಿಧ ಸಿನಿಮಾಗಳನ್ನು ವೀಕ್ಷಿಸುತ್ತಾ ರಾತ್ರಿ ಪೂರ್ತಿ ನಿದ್ರೆ ಇಲ್ಲದೇ ಜಾಗರಣೆ ಆಚರಿಸುತ್ತಾರೆ. ಇನ್ನು ಇತ್ತೀಚೆಗಿನ ದಿನಗಳಲ್ಲಿ ಶಿವರಾತ್ರಿ ಹಬ್ಬದ ಜಾಗರಣೆ ಅಂಗವಾಗಿ ಹಲವು ಸಿನಿ ರಸಿಕರು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವತ್ತ ಆಸಕ್ತಿ ತೋರಿಸಿದ್ದರು.

ಈ ಆಸಕ್ತಿಯತ್ತ ಚಿತ್ತ ನೆಟ್ಟ ಚಿತ್ರಗಳ ವಿತರಕರು ಹಲವು ಹಿಟ್ ಚಿತ್ರಗಳ ವಿಶೇಷ ಪ್ರದರ್ಶನವನ್ನು ಶಿವರಾತ್ರಿ ಪ್ರಯುಕ್ತ ಮಧ್ಯರಾತ್ರಿಯಂದು ಏರ್ಪಡಿಸಿ ಒಳ್ಳೆಯ ಕಲೆಕ್ಷನ್ ಮಾಡಲಾರಂಭಿಸಿದರು. ಅದರಲ್ಲೂ ಸ್ಟಾರ್ ನಟರ ಆಲ್ ಟೈಮ್ ಹಿಟ್ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಆಯೋಜಿಸುವ ಮೂಲಕ ಶಿವರಾತ್ರಿ ಜಾಗರಣೆಯನ್ನು ನೆಚ್ಚಿನ ನಟರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಅನುವು ಮಾಡಿಕೊಡಲಾಯಿತು.

ಇನ್ನು ತೆಲುಗಿನಲ್ಲಿ ಹೆಚ್ಚಿದ್ದ ಪ್ರವೃತ್ರಿ ಕನ್ನಡಕ್ಕೂ ಸಹ ಕಾಲಿಟ್ಟಿದೆ. ಇದೇ ಶನಿವಾರ ( ಫೆಬ್ರವರಿ 18 ) ಶಿವರಾತ್ರಿ ಹಬ್ಬವನ್ನು ಆಚರಿಸಲಿದ್ದು, ಭಾನುವಾರ 12.30AM ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಇಂಡಸ್ಟ್ರಿ ಹಿಟ್ ಚಿತ್ರ ರಾಜಕುಮಾರ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಬೆಂಗಳೂರಿನಲ್ಲಿ ರಾಜಕುಮಾರ ವಿಶೇಷ ಪ್ರದರ್ಶನ

ಬೆಂಗಳೂರಿನಲ್ಲಿ ರಾಜಕುಮಾರ ವಿಶೇಷ ಪ್ರದರ್ಶನ

ಹೌದು, ಬೆಂಗಳೂರಿನ ಪೀಣ್ಯ ಏರಿಯಾದಲ್ಲಿರುವ ಭಾರತಿ ಚಿತ್ರಮಂದಿರದಲ್ಲಿ ಫೆಬ್ರವರಿ 19ರ 12.30 AM ಗೆ ರಾಜಕುಮಾರ ಚಿತ್ರದ ಒಂದು ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇಲ್ಲಿಗೆ ಸಮೀಪದಲ್ಲಿರುವ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಶನಿವಾರ ಶಿವರಾತ್ರಿ ಹಬ್ಬದ ಆಚರಣೆಯನ್ನು ಮನೆಯಲ್ಲಿ ಮುಗಿಸಿ ಮಧ್ಯರಾತ್ರಿ ರಾಜಕುಮಾರನ ದರ್ಶನ ಪಡೆಯಬಹುದಾಗಿದೆ. ಇನ್ನು ಈ ಪ್ರದರ್ಶನದ ಅಡ್ವಾನ್ಸ್ ಬುಕಿಂಗ್ ಸಹ ಬುಕ್ ಮೈ ಶೋನಲ್ಲಿ ಓಪನ್ ಆಗಿದ್ದು, ಬಾಲ್ಕನಿ ಟಿಕೆಟ್ ದರ 130 ರೂಪಾಯಿಗಳಿದ್ದರೆ, ಸೆಕೆಂಡ್ ಕ್ಲಾಸ್ ಟಿಕೆಟ್ ದರ 100 ರೂಪಾಯಿಗಳಷ್ಟಿದೆ.

ಇಂಡಸ್ಟ್ರಿ ಹಿಟ್ ಆಗಿತ್ತು ರಾಜಕುಮಾರ

ಇಂಡಸ್ಟ್ರಿ ಹಿಟ್ ಆಗಿತ್ತು ರಾಜಕುಮಾರ

ಇನ್ನು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ 75 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಈ ಚಿತ್ರ ಬರೆದಿತ್ತು. ಇದಕ್ಕೂ ಮುನ್ನ 50 ಕೋಟಿ ಗಳಿಸಿದ್ದ ಇದೇ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹಾಗೂ ಯಶ್ ನಟನೆಯ ರಾಜಕುಮಾರ ಚಿತ್ರ 50 ಕೋಟಿ ಕಲೆಕ್ಷನ್ ಅನ್ನು ಹಿಂದಿಕ್ಕಿದ ರಾಜಕುಮಾರ ಈ ದಾಖಲೆಯನ್ನು ಬರೆದಿತ್ತು.

ಮೈಸೂರಿನಲ್ಲಿ ಎಂದೂ ಅಳಿಸಲಾಗದ ದಾಖಲೆ

ಮೈಸೂರಿನಲ್ಲಿ ಎಂದೂ ಅಳಿಸಲಾಗದ ದಾಖಲೆ

ಇನ್ನು ಮೈಸೂರು ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲು ನೂರು ದಿನಗಳ ಪ್ರದರ್ಶನವನ್ನು ಪೂರೈಸಿದ ಚಿತ್ರ ಎಂಬ ದಾಖಲೆಯನ್ನು ರಾಜಕುಮಾರ ಹೊಂದಿದೆ. ಅಷ್ಟೇ ಅಲ್ಲದೇ ಮೈಸೂರಿನ ಒಟ್ಟು ನಾಲ್ಕು ಕೇಂದ್ರಗಳಲ್ಲಿ ನೂರು ದಿನಗಳನ್ನು ಪೂರೈಸಿದ ಚಿತ್ರ ಎಂಬ ಬೃಹತ್ ಹಾಗೂ ಎಂದೂ ಅಳಿಸಲಾಗದ ದಾಖಲೆಯನ್ನು ರಾಜಕುಮಾರ ತನ್ನ ಹೆಸರಿನಲ್ಲಿ ಹೊಂದಿದೆ. ಕುಟುಂಬ ಸಮೇತರಾಗಿ ಕುಳಿತು ನೋಡುವ ಅದ್ಭುತ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಕಥೆಯನ್ನು ಹೊಂದಿದ್ದ ಕಾರಣ ರಾಜಕುಮಾರ ಈ ಪರಿ ಯಶಸ್ಸು ಸಾಧಿಸಿದ್ದು, ಎವರ್‌ಗ್ರೀನ್ ಸಿನಿಮಾವಾಗಿ ಉಳಿದುಕೊಂಡಿದೆ.

More from Filmibeat

English summary
Puneeth Rajkumar and Santhosh Ananddram's Raajkumara special show on Shivaratri. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X