For Quick Alerts
  ALLOW NOTIFICATIONS  
  For Daily Alerts

  'ಡಿಯರ್ ಸತ್ಯ' ಆಡಿಯೋ ಲಾಂಚ್ ಮಾಡಿದ ಅಪ್ಪು-ವಿಜಯ ರಾಘವೇಂದ್ರ

  |

  ಯುವ ನಟ ಸಂತೋಷ್ ಆರ್ಯನ್ ನಾಯಕನಟನಾಗಿ ಕಂಬ್ಯಾಕ್ ಮಾಡ್ತಿದ್ದಾರೆ. ಟೀಸರ್ ಮೂಲಕ ಗಮನ ಸೆಳೆದಿರುವ ಸಂತೋಷ್ ಆರ್ಯನ್ ನಟಿಸುತ್ತಿರುವ 'ಡಿಯರ್ ಸತ್ಯ' ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ.

  ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ವಿಜಯ ರಾಘವೇಂದ್ರ ಅವರು 'ಡಿಯರ್ ಸತ್ಯ' ಸಿನಿಮಾದ ಆಡಿಯೋ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾದ 'ಕೌರವ' ಬಿಸಿ ಪಾಟೀಲ್ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾದ 'ಕೌರವ' ಬಿಸಿ ಪಾಟೀಲ್

  'ಡಿಯರ್ ಸತ್ಯ' ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನುರಾಧ ಭಟ್, ಅನಿರುದ್ಧ ಶಾಸ್ತ್ರಿ, ಹೇಮಂತ್, ವಿಹಾನ್ ಹಾಡುಗಳಿಗೆ ದನಿಯಾಗಿದ್ದಾರೆ.

  ಶಿವಗಣೇಶನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಂತೋಷ್ ಆರ್ಯನ್ ಅವರ ಕನಸಿನ ಪ್ರಾಜೆಕ್ಟ್ ಇದಾಗಿದೆ. ಸಂತೋಷ್‌ಗೆ ನಾಯಕಿಯಾಗಿ ಅರ್ಚನಾ ಕೊಟಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

  ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್, ಶ್ರೀನಿವಾಸ್ ಹಾಗೂ ಅಜಯರ್ ರಾವ್ ಜಂಟಿಯಾಗಿ ಡಿಯರ್ ಸತ್ಯ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಫೆಬ್ರವರಿಯಲ್ಲಿ ತೆರೆಮೇಲೆ ಬರಲು ಚಿತ್ರತಂಡ ನಿರ್ಧರಿಸಿದೆ.

  ಹೊಸಬರ 'ಕ್ಷಿಪ್ರ' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬೆಂಬಲಹೊಸಬರ 'ಕ್ಷಿಪ್ರ' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬೆಂಬಲ

  ಕಳೆದು ಹೋದದನ್ನ ಪುನಃ ಪಡೆದುಕೊಂಡ ಮೇಘಾ ಶೆಟ್ಟಿ | Filmibeat Kannada

  ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್, ಆದರ್ಶ್ ಚಂದ್ರಶೇಖರ್ ಸೇರಿದಂತೆ ಹಲವರು ತಾರಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Powerstar Puneeth Rajkumar and Vijay Raghavendra launched Santhosh Aryan's Dear Sathya Movie Audio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X