Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದಂಪತಿಗೆ ವಿಶೇಷ ದಿನ
ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ದಂಪತಿಗೆ ಡಿಸೆಂಬರ್ 1 ರಂದು ವಿಶೇಷ ದಿನ. ಏಕಂದ್ರೆ, ಪುನೀತ್ ಮತ್ತು ಅಶ್ವಿನಿ ಮದುವೆ ಆಗಿ 21 ವರ್ಷ ಕಳೆದಿದೆ. ಹೀಗಾಗಿ, ಈ ದಿನವನ್ನು ಅಪ್ಪು ಅಭಿಮಾನಿಗಳು ಸೆಲೆಬ್ರೆಟ್ ಮಾಡ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ದಂಪತಿಗೆ ರಾಜ್ ಕುಟುಂಬದ ಅಭಿಮಾನಿಗಳು ಹಾಗೂ ನೆಟ್ಟಿಗರು 21ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ.
ಪುನೀತ್, ದರ್ಶನ್, ಉಪ್ಪಿ, ಶಿವಣ್ಣ, ಸುದೀಪ್ ಮದುವೆ ದಿನ ಹೇಗೆ ಕಾಣ್ತಿದ್ರು.?
ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ವಿವಾಹದ ಎರಡು ಫೋಟೋಗಳು ವೈರಲ್ ಆಗಿದೆ. ಅದರಲ್ಲಿ ಒಂದು ಫೋಟೋದಲ್ಲಿ ಅಣ್ಣಾವ್ರು ಅಪ್ಪು ಮದುವೆ ದಿನ ಜನ ಜೋಡಿಗೆ ಆಶೀರ್ವಾದ ಮಾಡುತ್ತಿರುವ ಕ್ಷಣ ನೋಡಲು ಖುಷಿ ನೀಡುತ್ತಿದೆ.
1999 ಡಿಸೆಂಬರ್ 1 ರಂದು ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ವಿವಾಹ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಈ ಜೋಡಿ ನಂತರ ಹಿರಿಯ ಸಮ್ಮುಖದಲ್ಲಿ ಮದುವೆಯಾಗಿದ್ದರು.
ಪುನೀತ್ ಮತ್ತು ಅಶ್ವಿನಿ ದಂಪತಿಗೆ ದೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣ ಮಕ್ಕಳಿದ್ದಾರೆ.
ಸದ್ಯ, ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾ ಮುಗಿಸಿ, ಚೇತನ್ ಕುಮಾರ್ ಜೊತೆ 'ಜೇಮ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಅಪ್ಪು ಎರಡನೇ ಹಂತದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ.