For Quick Alerts
  ALLOW NOTIFICATIONS  
  For Daily Alerts

  ಈ ಬಾರಿ ಸೈಮಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲು ಕಾರಣ ಅಪ್ಪು ಮತ್ತು ಕನ್ನಡದ ಈ ಸ್ಟಾರ್ ನಟ!

  |

  2012ರಲ್ಲಿ ಆರಂಭವಾದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ಸದ್ಯ ಹನ್ನೊಂದನೇ ಬಾರಿಗೆ ಜರುಗುತ್ತಿದೆ. ಹೀಗೆ ದಶಕಗಳನ್ನು ಪೂರೈಸಿರುವ ಸೈಮಾ ಅವಾರ್ಡ್ಸ್‌ನ ಈ ಬಾರಿಯ ಕಾರ್ಯಕ್ರಮವನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಿತ್ತು.

  ಅಪ್ಪು ಕಂಡು ಚಿತ್ರಮಂದಿರದಲ್ಲೇ ಗಳಗಳನೆ ಅತ್ತ ಫ್ಯಾನ್ಸ್; ಭಾವುಕ ವಿಡಿಯೋ ಹಂಚಿಕೊಂಡ ಲಕ್ಕಿಮ್ಯಾನ್ ಕೃಷ್ಣಅಪ್ಪು ಕಂಡು ಚಿತ್ರಮಂದಿರದಲ್ಲೇ ಗಳಗಳನೆ ಅತ್ತ ಫ್ಯಾನ್ಸ್; ಭಾವುಕ ವಿಡಿಯೋ ಹಂಚಿಕೊಂಡ ಲಕ್ಕಿಮ್ಯಾನ್ ಕೃಷ್ಣ

  ಅದರಂತೆ ಸದ್ಯ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಈ ಬಾರಿಯ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಜರುಗುತ್ತಿದೆ. ಮೊದಲಿಗೆ 9 ವರ್ಷಗಳು ವಿದೇಶಿ ನೆಲದಲ್ಲಿ ನಡೆದಿದ್ದ ಈ ಸೈಮಾ ಅವಾರ್ಡ್ಸ್ ಕಾರ್ಯಕ್ರಮಗಳು ಕಳೆದ ಬಾರಿ ಹೈದರಾಬಾದ್‌ನಲ್ಲಿ ನಡೆದಿತ್ತು. ಇದೀಗ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಆಯೋಜನೆಯಾದ ಭಾರತದ ಎರಡನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.

  'ಲೈಗರ್' ಸೋತರೂ ಭರ್ಜರಿ ಸಿನಿಮಾ ಬಾಚಿಕೊಂಡ ವಿಜಯ್ ದೇವರಕೊಂಡ'ಲೈಗರ್' ಸೋತರೂ ಭರ್ಜರಿ ಸಿನಿಮಾ ಬಾಚಿಕೊಂಡ ವಿಜಯ್ ದೇವರಕೊಂಡ

  ಭಾರತದಲ್ಲಿ ಇನ್ನೂ ಅನೇಕ ಬೃಹತ್ ಮೆಟ್ರೋ ನಗರಿಗಳು ಇದ್ದರೂ ಸಹ ಬೆಂಗಳೂರಿನಲ್ಲಿಯೇ ಈ ಬಾರಿಯ ಸೈಮಾ ಅವಾರ್ಡ್ಸ್ ಕಾರ್ಯಕ್ರಮವನ್ನು ಆಯೋಜಿಸಲು ಕಾರಣ ಕನ್ನಡದ ಇಬ್ಬರು ಸ್ಟಾರ್ ನಟರು. ಹೌದು, ಈ ವಿಷಯವನ್ನು ಸ್ವತಃ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಅವರೇ ಈ ಹಿಂದೆ ಬಹಿರಂಗಪಡಿಸಿದ್ದರು.

  ಬೆಂಗಳೂರಿನಲ್ಲಿ ಸೈಮಾ ನಡೆಸಲು ಇದೇ ಕಾರಣ

  ಬೆಂಗಳೂರಿನಲ್ಲಿ ಸೈಮಾ ನಡೆಸಲು ಇದೇ ಕಾರಣ

  ಸೈಮಾ ಕಾರ್ಯಕ್ರಮ ಆರಂಭವಾಗುವುದಕ್ಕೂ ವಾರಗಳ ಹಿಂದೆ ಮಾತನಾಡಿದ್ದ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಈ ಬಾರಿಯ ಸೈಮಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಖುಷಿಪಡುತ್ತೇನೆ ಎಂದಿದ್ದರು. ಇನ್ನೂ ಮುಂದುವರಿದು ಮಾತನಾಡಿದ ಬೃಂದಾ ಪ್ರಸಾದ್ ಬೆಂಗಳೂರಿನಲ್ಲಿಯೇ ಈ ಬಾರಿಯ ಸೈಮಾ ಕಾರ್ಯಕ್ರಮವನ್ನು ಆಯೋಜಿಸಲು ಪ್ರಮುಖವಾಗಿ 2 ಕಾರಣಗಳಿವೆ ಎಂದಿದ್ದರು. ನಾವು ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಅವರಿಗೆ ಗೌರವ ಸಲ್ಲಿಸುವುದು ಸೈಮಾ ಬೆಂಗಳೂರಿನಲ್ಲಿ ಆಯೋಜನೆಯಾಗುತ್ತಿರುವುದರ ಹಿಂದಿನ ಮೊದಲ ಕಾರಣ ಹಾಗೂ ಮತ್ತೊಂದು ಕಾರಣವೇನೆಂದರೆ ಇಲ್ಲಿನ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೆಸರು ಮತ್ತು ಖ್ಯಾತಿಯನ್ನು ಗಳಿಸಿರುವುದು ಎಂದು ಬೃಂದಾ ಪ್ರಸಾದ್ ತಿಳಿಸಿದ್ದರು.

  ಅಪ್ಪು ಜೊತೆ ಯಶ್ ಕೂಡ ಕಾರಣ

  ಅಪ್ಪು ಜೊತೆ ಯಶ್ ಕೂಡ ಕಾರಣ

  ಬೃಂದಾ ಪ್ರಸಾದ್ ತಿಳಿಸಿದ ಹಾಗೆ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿದ್ದು ಯಶ್ ಅಭಿನಯದ ಕೆಜಿಎಫ್ ಚಿತ್ರದ ಮೂಲಕ. ಯಶ್ ಅವರು ಕೆಜಿಎಫ್ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಬೇಕು ಎಂದು ಮನಸ್ಸು ಮಾಡದೇ ಇದ್ದಿದ್ದರೆ ಸೈಮಾ ಬಹುಶಃ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರಲಿಲ್ಲ ಎನ್ನಬಹುದು.

  ಬೆಂಗಳೂರಿನಲ್ಲಿಯೂ ಅವಾರ್ಡ್ ಕಾರ್ಯಕ್ರಮ ನಡೆಯಬೇಕು ಎಂದಿದ್ದರು ಯಶ್

  ಬೆಂಗಳೂರಿನಲ್ಲಿಯೂ ಅವಾರ್ಡ್ ಕಾರ್ಯಕ್ರಮ ನಡೆಯಬೇಕು ಎಂದಿದ್ದರು ಯಶ್

  ಈ ಹಿಂದೆ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯಶ್ ಬೇರೆ ನಗರಗಳಲ್ಲಿ ನಡೆಯುವ ಹಾಗೆ ಬೆಂಗಳೂರಿನಲ್ಲಿಯೂ ಸಹ ದೊಡ್ಡ ದೊಡ್ಡ ಅವಾರ್ಡ್ಸ್‌ ಕಾರ್ಯಕ್ರಮಗಳು ನಡೆಯಬೇಕು ಎಂದಿದ್ದರು. ಅಂದು ಯಶ್ ಹೇಳಿದ್ದ ಮಾತು ಇಂದು ನಿಜವಾಗಿದ್ದು, ಸೈಮಾ ರೀತಿಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಿಲಿಕಾನ್ ಸಿಟಿಯಲ್ಲಿ ಜರುಗುತ್ತಿದೆ.

  ಈ ಬಾರಿಯ ಸೈಮಾದಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗರ ಪಟ್ಟಿ

  ಈ ಬಾರಿಯ ಸೈಮಾದಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗರ ಪಟ್ಟಿ

  ಅತ್ಯುತ್ತಮ ಚಿತ್ರ - ಗರುಡ ಗಮನ ವೃಷಭ ವಾಹನ

  ಅತ್ಯುತ್ತಮ ನಿರ್ದೇಶಕ - ತರುಣ್ ಸುಧೀರ್ (ರಾಬರ್ಟ್)

  ಅತ್ಯುತ್ತಮ ಛಾಯಾಗ್ರಾಹಕ - ಸುಧಾಕರ್ ರಾಜ್ (ರಾಬರ್ಟ್)

  ಅತ್ಯುತ್ತಮ ನಟ - ಪುನೀತ್ ರಾಜ್‌ಕುಮಾರ್ (ಯುವರತ್ನ)

  ಅತ್ಯುತ್ತಮ ನಟಿ - ಅಮೃತ ಅಯ್ಯಂಗಾರ್ - ( ಬಡವ ರಾಸ್ಕಲ್ )

  ಅತ್ಯುತ್ತಮ ಪೋಷಕ ನಟ - ಪ್ರಮೋದ್ (ರತ್ನನ್ ಪ್ರಪಂಚ)

  ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಆರೋಹಿ ನಾರಾಯಣ (ದೃಶ್ಯ 2)

  ಅತ್ಯುತ್ತಮ ಖಳನಟ - ಪ್ರಮೋದ್ ಶೆಟ್ಟಿ (ಹೀರೊ)

  ಅತ್ಯುತ್ತಮ ಹಾಸ್ಯನಟ - ಚಿಕ್ಕಣ್ಣ (ಪೊಗರು)

  ಅತ್ಯುತ್ತಮ ಉದಯೋನ್ಮುಖ ನಟ - ನಾಗಭೂಷಣ ಎನ್ ಎಸ್ (ಇಕ್ಕಟ್)

  ಅತ್ಯುತ್ತಮ ಉದಯೋನ್ಮುಖ ನಟಿ - ಶರಣ್ಯ ಶೆಟ್ಟಿ (1980)

  ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಗುರು ಶಂಕರ್ (ಬಡವ ರಾಸ್ಕಲ್)

  ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ - ಕೆಆರ್‌ಜಿ ಸ್ಟುಡಿಯೋಸ್ (ರತ್ನನ್ ಪ್ರಪಂಚ)

  ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್ ಜನ್ಯ (ರಾಬರ್ಟ್)

  ಅತ್ಯುತ್ತಮ ಗೀತರಚನೆಕಾರ - ವಾಸುಕಿ ವೈಭವ್ - ನಿನ್ನ ಸನಿಹಕೆಯಿಂದ "ನಿನ್ನ ಸನಿಹಕೆ"

  ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಮಾನ್ ಮಲಿಕ್, ಥಮನ್ ಎಸ್ - ಯುವರತ್ನದಿಂದ "ನೀನಾದೆ ನಾ"

  ಅತ್ಯುತ್ತಮ ಹಿನ್ನೆಲೆ ಗಾಯಕಿ - ಚೈತ್ರ ಜೆ ಆಚಾರ್ - "ಸೂಜುಗದ ಸೂಜುಮಲ್ಲಿಗೆ" ಫ್ರಮ್ ಗರುಡ ಗಮನ ವೃಷಭ ವಾಹನ

  English summary
  Puneeth Rajkumar and Yash are the reason for SIIMA 2022 to take place in Bengaluru
  Sunday, September 11, 2022, 21:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X