ಪುನೀತ್-ಯೋಗರಾಜ್ ಭಟ್ ಮಾಡಬೇಕಿದ್ದ ಚಿತ್ರ ನಿಂತು ಹೋಗಿದ್ದೇಕೆ? ಯಾವುದು ಆ ಚಿತ್ರ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಚಿತ್ರ ಪರಮಾತ್ಮ. ಮೊದಲ ಸಲ ಈ ಜೋಡಿಯಿಂದ ಬಂದಿದ್ದ ಈ ಚಿತ್ರ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು.
Recommended Video

ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ಅಷ್ಟಾಗಿ ಇಂಪ್ರೆಸ್ ಆಗಲಿಲ್ಲ. ಆದ್ರೆ, ಇನ್ನೊಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಬಹಳ ಇಷ್ಟ ಆಗಿತ್ತು. ಇಂದಿಗೂ ಪರಮಾತ್ಮ ಚಿತ್ರವನ್ನು ನೆನಪಿಸಿಕೊಳ್ಳುವ ಆಡಿಯೆನ್ಸ್ ಇದ್ದಾರೆ. ಹಾಡುಗಳು ಅಷ್ಟೇ ಹಿಟ್ ಆಗಿತ್ತು. ವಿಷ್ಯ ಏನಪ್ಪಾ ಅಂದ್ರೆ ಪರಮಾತ್ಮ ಚಿತ್ರಕ್ಕೂ ಮೊದಲೇ ಭಟ್-ಪುನೀತ್ ಜೋಡಿಯಲ್ಲಿ ಒಂದು ಸಿನಿಮಾ ಘೋಷಣೆಯಾಗಿತ್ತು. ಆದ್ರೆ, ಆ ಚಿತ್ರ ಆರಂಭವಾಗಲಿಲ್ಲ, ಯಾವುದು? ಮುಂದೆ ಓದಿ....

'ಲಗೋರಿ' ಸಿನಿಮಾ ಮಾಡಬೇಕಿತ್ತು!
ಯೋಗರಾಜ್ ಭಟ್ ಮತ್ತು ಪುನೀತ್ ರಾಜ್ ಕುಮಾರ್ 2008ರ ಸಮಯದಲ್ಲೇ ಲಗೋರಿ ಎಂಬ ಸಿನಿಮಾ ಮಾಡಬೇಕಿತ್ತು. ಈ ಚಿತ್ರವನ್ನು ಮಾಡಲು ರಾಘಣ್ಣ ಹಾಗೂ ಪುನೀತ್ ಒಪ್ಪಿದ್ದರು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಆದ್ರೆ, ಆಮೇಲೆ ಏನಾಯ್ತೋ ಸಿನಿಮಾ ಸೆಟ್ಟೇರಲಿಲ್ಲ. ಆದರೂ 'ಲಗೋರಿ' ಎಂದಾಗ ಪುನೀತ್-ಭಟ್ ಜೋಡಿಯ ಚಿತ್ರ ಎಂಬ ಹಳೆಯ ನೆನಪು ಕಾಡುತ್ತಿದೆ.

ಮುಂಗಾರುಮಳೆಗೂ ಮೊದಲೇ ಪುನೀತ್ ನಟಿಸಬೇಕಿತ್ತು
ಮಣಿ, ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾಗಳು ಆದ್ಮೇಲೆ ಎರಡ್ಮೂರು ಕಥೆ ಇಡ್ಕೊಂಡು ವಜ್ರೇಶ್ವರಿ ಕಂಬೈನ್ಸ್ ಬಳಿ ಯೋಗರಾಜ್ ಭಟ್ ಹೋಗಿದ್ದರಂತೆ. ಆದ್ರೆ, ದೊಡ್ಮನೆಯ ಬಾಗಿಲು ಭಟ್ಟರಿಗೆ ತೆರೆದಿಲ್ಲ. ನಂತರವೇ ಮುಂಗಾರುಮಳೆ ಹಾಗೂ ಗಾಳಿಪಟ ಅಂತಹ ಚಿತ್ರಗಳು ಹಿಟ್ ಆಗಿದ್ದು. ಆಪ್ತರು ಹೇಳುವ ಪ್ರಕಾರ ಈ ಕಥೆಗಳನ್ನು ಪುನೀತ್‌ಗಾಗಿ ಭಟ್ಟರು ಸಿದ್ಧಮಾಡಿಕೊಂಡಿದ್ದರಂತೆ. ಅವಕಾಶ ಸಿಗದಿದ್ದಾಗ ಹೊಸ ನಟನ ಜೊತೆ ಸಿನಿಮಾ ಮಾಡಿ ಯಶಸ್ಸು ಕಂಡರು.

'ಪರಮಾತ್ಮ'ದಲ್ಲಿ ಸಿಕ್ಕ ಅದೃಷ್ಟ
ಮುಂಗಾರು ಮಳೆ, ಗಾಳಿಪಟ, ಮನಸಾರೆ ಅಂತಹ ಹಿಟ್ ಚಿತ್ರಗಳು ಆದ್ಮೇಲೆ ಪುನೀತ್ ಗೆ ಸಿನಿಮಾ ಮಾಡುವ ಅದೃಷ್ಟ ಯೋಗರಾಜ್ ಭಟ್ ಅವರಿಗೆ ಸಿಕ್ಕಿತ್ತು. ಅದು ಪರಮಾತ್ಮ ಚಿತ್ರದ ಮೂಲಕ. 2011ರಲ್ಲಿ ಮೂಡಿ ಬಂದ ಚಿತ್ರ ಪರಮಾತ್ಮ.

'ಲಗೋರಿ' ನಿಂತು ಹೋಗಿದ್ದನ್ನು ನೆನಪಿಸಿದ ಮಹೇಶ್
ಫಿಲ್ಮಿಬೀಟ್ ಡೈರೆಕ್ಟರ್ ಡೈರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್, ಲಗೋರಿ ಸಿನಿಮಾ ನಿಂತು ಹೋಗಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದರು. ಆ ಸಮಯದಲ್ಲಿ ಮಹೇಶ್, ನಿರ್ದೇಶಕ ಯೋಗರಾಜ್ ಭಟ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರಂತೆ.


Click it and Unblock the Notifications











