ತೆಲುಗು ನಟನಿಂದ ವಿಷ್ಣುದಾದಾನ ತೇಜೋವಧೆ; ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತನ್ನು ಹಿಂಪಡೆಯಬೇಕು- ಪುನೀತ್ ಆಕ್ರೋಶ

ಸ್ಯಾಂಡಲ್ ವುಡ್ ನ ದಾದಾ, ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ವಿವಾದಾತ್ಮಕ ಹೇಳಿಕೆ ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿದೆ. ರಂಗಬಾಬು ವಿರುದ್ಧ ಕ್ರಮಕೈಗೊಳ್ಳುವಂತೆ ಕನ್ನಡ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

Recommended Video

'ನನ್ನದು ತಪ್ಪಾಯ್ತು, ಬಾಯಿ ತಪ್ಪಿ ಮಾತನಾಡಿಬಿಟ್ಟೆ' ವಿಷ್ಣು ದಾದಾ ಅಭಿಮಾನಿಗಳ ಕ್ಷಮೆಯಾಚಿಸಿದ Vijay Rangaraju

ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಂಗರಾಜು ಇತ್ತೀಚಿಗೆ ಸಂದರ್ಶವೊಂದರಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಹಾಗೆ ಕೆಟ್ಟದಾಗಿ ಮಾನಾಡಿದ್ದಾರೆ. ಸ್ಯಾಂಡಲ್ ವುಡ್ ದಾದಾ ಬಗ್ಗೆ ನಾಲಿಗೆ ಹರಿಬಿಟ್ಟಿರುವ ರಂಗರಾಬು ವಿರುದ್ಧ ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡ ಸ್ಟಾರ್ಸ್ ಕೂಡ ಕೆಂಡಾಮಂಡಲರಾಗಿದ್ದಾರೆ. ವಿಜಯ್ ರಂಗರಾಜು ವಿರುದ್ಧ ನಟ ಜಗ್ಗೇಶ್, ಅನಿರುದ್ಧ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿ, ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು' ಎಂದು ಟ್ವೀಟ್ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ

ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ

ತೆಲುಗು ನಟನಿಂದ ಕನ್ನಡ ಮೇರುನಟ ವಿಷ್ಣುವರ್ಧನ್ ಅವರನ್ನು ನಿಂದನೆ ಮಾಡಿರುವ ಮಾತುಗಳನ್ನು ಕೇಳಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೆಂಡಾಮಂಡಲರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪುನೀತ್, 'ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು. ಭಾರತೀಯ ಚಿತ್ರರಂಗ, ನಮ್ಮ ಮನೆ ಎಲ್ಲಾ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ. ಮೊದಲು ಮಾನವನಾಗು ಎಂದು ಹೇಳಿದ್ದಾರೆ.

ಕಲಾವಿದನಾಗಬೇಕಾದರೆ ಮೊದಲು ಈ ಅರ್ಹತೆ ಇರಬೇಕು

ಕಲಾವಿದನಾಗಬೇಕಾದರೆ ಮೊದಲು ಈ ಅರ್ಹತೆ ಇರಬೇಕು

'ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿಯನ್ನು ತೋರುವುದು ಯಾವುದೇ ಭಾಷೆಯ ನಟರಾದರು ಗೌರವ ಮೊದಲು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುನೀತ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಧನಂಜಯ್

ಪುನೀತ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಧನಂಜಯ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಟ್ವೀಟ್ ಅನ್ನು ನಟ ಧನಂಜಯ್ ರಿಟ್ವೀಟ್ ಮಾಡಿದ್ದಾರೆ. ವಿಷ್ಣುದಾದಾನನ್ನು ತೇಜೋವಧೆ ಮಾಡಿದ ತೆಲುಗು ನಟನ ವಿರುದ್ಧ ಕ್ರಮ ಕೊಳ್ಳಬೇಕು, ಆ ಕಲಾವಿದ ಕ್ಷಮೆ ಕೇಳಬೇಕು ಎಂದು ಧನಂಜಯ್ ಸಹ ಪ್ರತಿಕ್ರಿಯಿಸಿದ್ದಾರೆ.

ಜಗ್ಗೇಶ್ ಕೆಂಡಾಮಂಡಲ

ಜಗ್ಗೇಶ್ ಕೆಂಡಾಮಂಡಲ

'ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯೂ ಸಲ್ಲದವ. ಅದರಲ್ಲೂ ಇವ ಕಲಾವಿದನಂತೆ ಈ ದರಿದ್ರ ಮುಖ ಯಾವಚಿತ್ರದಲ್ಲು ನೋಡಿದ ನೆನಪಿಲ್ಲಾ. ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ. ಇವನ ಉದ್ದಟತನ ಮಾತಿಗೆ ಕ್ಷಮೆಯಿಲ್ಲ. ಸತ್ತವರು ದೇವರಸಮ. ದುಃಖವಾಯಿತು.' ಎಂದು ಟ್ವಿಟ್ ಮಾಡಿದ್ದಾರೆ.

More from Filmibeat

English summary
Kannada Actor Puneeth Rajkumar Angry on Telugu Actor Vijay Rangaraju for Abusive Talks about Vishnuvardhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X