'ಅಂಜನಿಪುತ್ರ'ನ ದರ್ಶನ ಪಡೆದು ಪುನೀತರಾದ ಅಭಿಮಾನಿಗಳು

By Naveen

Recommended Video

ಅಂಜನೀಪುತ್ರ ಸಿನಿಮಾ : ಫಸ್ಟ್ ಡೇ ಫಸ್ಟ್ ಶೋ ಜೋರೋ ಜೋರು | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಬಂದಿದ್ದಾರೆ. 'ರಾಜಕುಮಾರ' ನಂತರ ಅಪ್ಪು 'ಅಂಜನಿಪುತ್ರ'ನಾಗಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ 'ಅಂಜನಿಪುತ್ರ' ಸಿನಿಮಾ ಇಂದು ರಾಜ್ಯಾದಂತ್ಯ ಬಿಡುಗಡೆಯಾಗಿದೆ.

'ಅಂಜನಿಪುತ್ರ' ಸಿನಿಮಾದ ದರ್ಬಾರ್ ಬಹಳ ಜೋರಾಗಿದೆ. ಅನೇಕ ಕಡೆ ಚಿತ್ರದ ಪ್ರದರ್ಶನ ಮಧ್ಯರಾತ್ರಿಯೇ ಶುರುವಾಗಿದೆ. ಬೆಂಗಳೂರಿನ ತ್ರಿವೇಣಿ, ಬಾಲಾಜಿ, ಲಕ್ಷ್ಮಿ, ಶ್ರೀ ನಿವಾಸ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಬೆಳ್ಳಗೆಯೇ ಸಿನಿಮಾದ ಮೊದಲ ಪ್ರದರ್ಶನ ಪ್ರಾರಂಭವಾಗಿದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಜಾತ್ರೆ ಇಂದಿನಿಂದ ಆರಂಭವಾಗಿದೆ. ಮುಂದೆ ಓದಿ...

ಮಧ್ಯರಾತ್ರಿ 12ಗಂಟೆಗೆ

ಮಧ್ಯರಾತ್ರಿ 12ಗಂಟೆಗೆ

'ಅಂಜನಿಪುತ್ರ' ಸಿನಿಮಾದ ಪ್ರದರ್ಶನ ಬೆಳ್ಳಗೆ ಇದ್ದರು ಕೂಡ ಎಷ್ಟೊ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12ಗಂಟೆಗೆ ಜನ ಬಂದು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

'ಅಂಜನಿಪುತ್ರ'ನ ದರ್ಶನ

'ಅಂಜನಿಪುತ್ರ'ನ ದರ್ಶನ

'ಅಂಜನಿಪುತ್ರ' ಸಿನಿಮಾದ ನೋಡಿದ ಪುನೀತ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿ ತಮ್ಮ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ಶ್ರೀ ನಿವಾಸದಲ್ಲಿ 5 ಗಂಟೆಗೆ, ಬಾಲಾಜಿ ಮತ್ತು ಲಕ್ಷ್ಮಿ ಚಿತ್ರಮಂದಿರದಲ್ಲಿ 6 ಗಂಟೆಗೆ ಹಾಗೂ ತ್ರಿವೇಣಿ ಚಿತ್ರಮಂದಿರದಲ್ಲಿ 7 ಗಂಟೆಗೆ ಮೊದಲ ಶೋ ಶುರುವಾಗಿದೆ.

ಶಿವಮೊಗ್ಗದ ಮೂರು ಚಿತ್ರಮಂದಿರದಲ್ಲಿ

ಶಿವಮೊಗ್ಗದ ಮೂರು ಚಿತ್ರಮಂದಿರದಲ್ಲಿ

ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿಯೇ ಮೂರು ಚಿತ್ರಮಂದಿರದಲ್ಲಿ ರಿಲೀಸ್ ಆದ ಸಿನಿಮಾ 'ಅಂಜನಿಪುತ್ರ'ವಾಗಿದೆ. ನಗರದ ಮಂಜುನಾಥ, ವಿನಾಯಕ ಮತ್ತು ಭರತ್ ಸಿನಿಮಾಸ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

ಬಳ್ಳಾರಿಯಲ್ಲಿ

ಬಳ್ಳಾರಿಯಲ್ಲಿ

ಬಳ್ಳಾರಿ ಜಿಲ್ಲೆಯಲ್ಲಿ ಮಧ್ಯರಾತ್ರಿಯೇ ಚಿತ್ರಮಂದಿರದಲ್ಲಿ ಹಬ್ಬದ ವಾತಾವರಣ ಏರ್ಪಟಿತ್ತು. ಡೋಲು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು ಅಪ್ಪು ಅಭಿಮಾನಿಗಳು.

ತುಮಕೂರಿನಲ್ಲಿ

ತುಮಕೂರಿನಲ್ಲಿ

ತುಮಕೂರಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ಕಟ್ ಔಟ್ ಮತ್ತು ಆಂಜನೇಯ ಸ್ವಾಮಿಯ ದೊಡ್ಡ ಚಿತ್ರವನ್ನು ಜಿಲ್ಲೆಯ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಹೊಸಪೇಟೆಯಲ್ಲಿ

ಹೊಸಪೇಟೆಯಲ್ಲಿ

ಹೊಸಪೇಟೆ ರಾಜ್ ಕುಟುಂಬದ ಸಿನಿಮಾಗೆ ದೊಡ್ಡ ಕ್ರೇಜ್ ಇರುತ್ತದೆ. ಇನ್ನು 'ಅಂಜನಿಪುತ್ರ' ಚಿತ್ರಕ್ಕೆ ಕೂಡ ಅದು ಮುಂದುವರೆದಿದೆ. ಹೊಸಪೇಟೆಯ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆಗುತ್ತಿದೆ.

ಅನೇಕ ಜಿಲ್ಲೆಗಳಲ್ಲಿ

ಅನೇಕ ಜಿಲ್ಲೆಗಳಲ್ಲಿ

ಮಂಡ್ಯ, ಮೈಸೂರು, ದಾವಣಗೆರೆ, ಕೊಳ್ಳೆಗಾಲ ದಲ್ಲಿಯೂ 'ಅಂಜನಿಪುತ್ರ' ಸಿನಿಮಾದ ಅಬ್ಬರ ಜೋರಾಗಿ ಶುರುವಾಗಿದೆ.

ಟಿಕೆಟ್ ಸೋಲ್ಡ್ ಔಟ್

ಟಿಕೆಟ್ ಸೋಲ್ಡ್ ಔಟ್

ಬುಕ್ ಮೈ ಶೋ ದಲ್ಲಿಯೂ 'ಅಂಜನಿಪುತ್ರ' ಸಿನಿಮಾದ ಮೊದಲ ಪ್ರದರ್ಶನದ ಟಿಕೆಟ್ ನಿನ್ನೆಯೇ ಸೋಲ್ಡ್ ಔಟ್ ಆಗಿತ್ತು.

More from Filmibeat

English summary
Actor Puneeth Rajkumar's starrer Kannada movie 'Anjaniputra' released Today(December 21st). And first show started from midnight. The movie is directed by A.Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X