'ಪವರ್ ಆಫ್ ಯೂತ್ ಚಾಲೆಂಜ್' ವಿನ್ನರ್ ಯಾರೆಂದು ಘೋಷಿಸಿದ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಯುವರತ್ನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ.

ಕಳೆದ ವಾರ ಯುವರತ್ನ ಚಿತ್ರತಂಡ 'ಪವರ್ ಆಪ್ ಯೂತ್' ಎಂಬ ಚಾಲೆಂಜ್ ಆರಂಭಿಸಿತ್ತು. ಈ ಹಾಡಿಗೆ ಅಭಿಮಾನಿಗಳನ್ನು ಡ್ಯಾನ್ಸ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಕಿತ್ತು. ಈ ಚಾಲೆಂಜ್‌ನಲ್ಲಿ ವಿನ್ ಆದವರಿಗೆ ಸರ್ಪ್ರೈಸ್ ನೀಡಲಾಗುವುದು ಎಂದು ಪ್ರಕಟಿಸಿದ್ದರು.

ಇದೀಗ, ಈ ಚಾಲೆಂಜ್‌ನ ವಿನ್ನರ್ ಯಾರೆಂದು ಘೋಷಣೆಯಾಗಿದೆ. ಐದು ಮಂದಿಯನ್ನು ವಿನ್ನರ್ ಎಂದು ಪ್ರಕಟಿಸಲಾಗಿದೆ. ಜಯಶಾಲಿಯಾದ ಎಲ್ಲರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗುವ ಅವಕಾಶ ಪಡೆಯಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

Puneeth rajkumar announce Power of Youth Dance Challenge Winners

'ಪವರ್ ಆಫ್ ಯೂತ್' ಚಾಲೆಂಜ್ ವಿನ್ನರ್

* Rack Brake Girls and Boys - Rajurba

* ನಾಟ್ಯಲೋಕ

* ಗುರು ದೇಶಪಾಂಡೆ - ಗಿ ಆಕಾಡೆಮಿ

* ರೋಹನ್ ಅಚಾರ್ಯ

* ನಿತೀನ್ ಗೌಡ

ಇನ್ನುಳಿದಂತೆ ಸಂತೋಷ್ ಆನಂದ್ ರಾಮ್ ಪವರ್ ಆಫ್ ಯೂತ್ ಹಾಡಿಗೆ ಸಾಹಿತ್ಯ ರಚಿಸಿದ್ದು, ಎಸ್ ಎಸ್ ತಮನ್ ಅವರ ಸಂಗೀತವಿದೆ. ನಕಾಶ್ ಅಜೀಜ್ ಹಾಡಿದ್ದಾರೆ. ಮೊದಲನೇ ಹಾಡು ಹಿಟ್ ಆದ ಬಳಿಕ ಎರಡನೇ ಹಾಡು ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ಎರಡನೇ ಹಾಡನ್ನು ಸ್ವತಃ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಇನ್ನು ಚಿತ್ರದಲ್ಲಿ ಪುನೀತ್‌ಗೆ ಜೋಡಿಯಾಗಿ ಸಯೇಶಾ ಕಾಣಿಸಿಕೊಂಡಿದ್ದಾರೆ. ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್, ದಿಗಂತ್, ವಸಿಷ್ಠ ಸಿಂಹ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜನವರಿ ಮೂರನೇ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ.

More from Filmibeat

English summary
Kannada actor Puneeth rajkumar announce 'Power of Youth Dance Challenge' Winners.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X