ಪಾಪ ದಾನಿಶ್ ಸೇಠ್‌ಗೆ ಹೀಗಾ ಬಯ್ಯೋದು ಪುನೀತ್ ರಾಜ್‌ಕುಮಾರ್

ಕಮಿಡಿಯನ್, ನಟ, ದಾನಿಶ್ ಸೇಠ್‌ ನಟನೆಯ ಎರಡನೇ ಸಿನಿಮಾ 'ಫ್ರೆಂಚ್ ಬಿರಿಯಾನಿ' ಜುಲೈ 24 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗುತ್ತಿದೆ.

Recommended Video

ಅಭಿಮಾನಿಗಳೊಂದಿಗೆ ಖುಷಿ ವಿಚಾರ ಹಂಚಿಕೊಂಡ ಸುಮಲತಾ | Filmibeat Kannada

ನಟನಾಗುವ ಮುಂಚೆ ಸ್ಟ್ಯಾಂಡ್ ಅಪ್ ಕಮಿಡಿಯನ್ ಆಗಿ, ಫ್ರಾಂಕಸ್ಟರ್‌ ಆಗಿ ಖ್ಯಾತಿ ಪಡೆದಿದ್ದವರು ದಾನಿಶ್ ಸೇಠ್. ಈಗಲೂ ಲಾಕ್‌ಡೌನ್ ಸಮಯದಲ್ಲಿ ಕೆಲವು ಪಾತ್ರಗಳನ್ನು ಸೃಷ್ಟಿಸಿ ಅದರ ಮೂಲಕ ಹಾಸ್ಯಭರಿತ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ ಅವರು.

ಅವರ ವಿಡಿಯೋಗಳಲ್ಲಿ ರಾಮಮೂರ್ತಿ, ಕುಡುಕ, ದೀದಿ ಇನ್ನೂ ಹಲವು ಪಾತ್ರಗಳಲ್ಲಿ ಅವರೇ ನಟಿಸಿ ಒಟ್ಟಾರೆಯಾಗಿ ಒಂದು ಹಾಸ್ಯಭರಿತ ದೃಶ್ಯವನ್ನು ನೋಡುಗರ ಮುಂದಿಡುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ

ಇದೀಗ ಅವರ ನಟನೆಯ ಸಿನಿಮಾ 'ಫ್ರೆಂಚ್ ಬಿರಿಯಾನಿ' ಜುಲೈ 24 ಕ್ಕೆ ಬಿಡುಗಡೆ ಆಗಲಿರುವ ಕಾರಣ ಇಂದಿನ ವಿಡಿಯೋದಲ್ಲಿ ಸಿನಿಮಾ ಪ್ರಚಾರವನ್ನು ಸಹ ಮಾಡಿದ್ದಾರೆ. ಇಂದಿನ ವಿಡಿಯೋದ ವಿಶೇಷವೆಂದರೆ ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಸಹ ಇದ್ದಾರೆ.

ದಾನಿಶ್‌ ಗೆ ಬಯ್ಯುವ ಪುನೀತ್‌ರಾಜ್‌ಕುಮಾರ್

ದಾನಿಶ್‌ ಗೆ ಬಯ್ಯುವ ಪುನೀತ್‌ರಾಜ್‌ಕುಮಾರ್

ದಾನಿಶ್ ಅವರ ಹಾಸ್ಯ ವಿಡಿಯೋಗಳ ಪಾತ್ರವಾಗಿರುವ ಕುಡುಕ, 'ನಾನು ಪವರ್ ಸ್ಟಾರ್ ಫ್ಯಾನ್ ಆಗಿದ್ದು, ನನಗೆ ಫ್ರೆಂಚ್ ಕಿಸ್' ಕೊಡು ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಪುನೀತ್ ರಾಜ್‌ಕುಮಾರ್, 'ಥೂ ಬೇವರ್ಸಿ ಕುಡುಕ, ಅದು ಫ್ರೆಂಚ್ ಕಿಸ್ ಅಲ್ಲ, ಫ್ರೆಂಚ್ ಬಿರಿಯಾನಿ' ಎಂದು ಬೈಯುತ್ತಾರೆ.

ಅಶ್ವಿನಿ ಪುನೀತ್‌ರಾಜ್‌ಕುಮಾರ್ ನಿರ್ಮಾಪಕಿ

ಅಶ್ವಿನಿ ಪುನೀತ್‌ರಾಜ್‌ಕುಮಾರ್ ನಿರ್ಮಾಪಕಿ

'ಫ್ರೆಂಚ್ ಬಿರಿಯಾನಿ' ಸಿನಿಮಾವು ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ನಿಂದಲೇ ಬಿಡುಗಡೆ ಆಗುತ್ತಿದ್ದು, ಪುನೀತ್ ಪತ್ನಿ ಅಶ್ವಿನಿ ಅವರು ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರೊಂದಿಗೆ ಗುರುದತ್ ತಲ್ವಾರ್ ಸಹ ಇದ್ದಾರೆ.

ಪನ್ನಗಾಭರಣ ನಿರ್ದೇಶನ

ಪನ್ನಗಾಭರಣ ನಿರ್ದೇಶನ

ಫ್ರೆಂಚ್ ಬಿರಿಯಾನಿ ಸಿನಿಮಾವು ಜುಲೈ 24 ರಂದು ತೆರೆಗೆ ಬರಲಿದ್ದು, ಈ ಸಿನಿಮಾದಲ್ಲಿ ದಾನಿಶ್ ಸೇಠ್ ಜೊತೆಗೆ ರಂಗಾಯಣ ರಘು, ಸಲ್ ಯೂಸಫ್ ಸೇರಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ನಿರ್ದೇಶನವನ್ನು ಪನ್ನಗಾಭರಣ ಮಾಡಿದ್ದಾರೆ.

More from Filmibeat

English summary
Actor Puneeth Rajkumar appeared in Danish Sait's comedy video. Danish Sait's French Biriyani movie releasing on July 24 in Amazon Prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X