For Quick Alerts
  ALLOW NOTIFICATIONS  
  For Daily Alerts

  ಕಾಶ್ಮೀರದಲ್ಲಿ ಯೋಧನಾದ ಪುನೀತ್ ರಾಜ್ ಕುಮಾರ್, ಫೋಟೋ ವೈರಲ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಕಾಶ್ಮೀರದಲ್ಲಿ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಪುನೀತ್ ಶೂಟಿಂಗ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು.

  ಇದೀಗ, ಪುನೀತ್ ರಾಜ್ ಕುಮಾರ್ ಹೊಸ ಫೋಟೋ ಬಹಿರಂಗವಾಗಿದೆ. ಯೋಧನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಅಪ್ಪು ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  ಪ್ರೇಮ ಕಾಶ್ಮೀರದಲ್ಲಿ ಪವರ್ ಸ್ಟಾರ್ ಪುನೀತ್: 'ಜೇಮ್ಸ್' ಚಿತ್ರೀಕರಣದ ಫೋಟೋ ವೈರಲ್ ಪ್ರೇಮ ಕಾಶ್ಮೀರದಲ್ಲಿ ಪವರ್ ಸ್ಟಾರ್ ಪುನೀತ್: 'ಜೇಮ್ಸ್' ಚಿತ್ರೀಕರಣದ ಫೋಟೋ ವೈರಲ್

  ಯೋಧನ ಗೆಟಪ್‌ನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದ ಫ್ಯಾನ್ಸ್, ಜೇಮ್ಸ್ ಸಿನಿಮಾದಲ್ಲಿ ಅಪ್ಪು ಯೋಧ ಆಗಿರಬಹುದಾ ಎಂದು ಯೋಚಿಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಇಲ್ಲ.

  ಕಾಶ್ಮೀರದಲ್ಲಿ ಕೆಲವು ಆಕ್ಷನ್ ದೃಶ್ಯಗಳು ಹಾಗೂ ಹಾಡಿನ ಚಿತ್ರೀಕರಣ ಮಾಡಲು ಹೋಗಿದ್ದಾರೆ ಎನ್ನಲಾಗಿದೆ. ಬಹುಶಃ ಹಾಡೊಂದರಲ್ಲಿ ಪುನೀತ್ ಯೋಧನ ಲುಕ್‌ನಲ್ಲಿ ಕಾಣಿಸಿಕೊಂಡಿರಬಹುದು. ಒಂದು ವೇಳೆ ಸಿನಿಮಾದಲ್ಲಿ ಪುನೀತ್ ಆರ್ಮಿ ಆಫೀಸರ್ ಆಗಿದ್ದರೇ ಅದರ ಮಜಾನೇ ಬೇರೆ.

  ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಜೇಮ್ಸ್ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಅನು ಪ್ರಭಾಕರ್ ಹಾಗೂ ತೆಲುಗು ನಟ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಮತ್ತೊಂದೆಡೆ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ತಯಾರಾಗಿರುವ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ತೆರೆಕಾಣಲಿದೆ. ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ಮಿಸಿದ್ದು, ಸಯೇಶಾ ಸೈಗಲ್ ನಾಯಕಿಯಾಗಿದ್ದಾರೆ. ಧನಂಜಯ್, ವಸಿಷ್ಠ ಸಿಂಹ ಈ ಚಿತ್ರದಲ್ಲಿ ನಟಿಸಿದ್ದಾರೆ.

  Bigg Boss Kannada season 8: ಈ ಸಲ ಹೆಚ್ಚಾಯ್ತು ಬಿಗ್ ಬಾಸ್ ಮನೆಯಲ್ಲಿ ಕೆಲ್ಸ ಮಾಡೋರ ಸಂಖ್ಯೆ |Filmibeat Kannada
  English summary
  Kannada actor Puneeth Rajkumar as Soldier in James; Picture Goes Viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X