ಅಪ್ಪು- ಅಶ್ವಿನಿ ಆದರ್ಶ ದಂಪತಿ! ಸರಳತೆಯ ಸಾಹುಕಾರರು!

ಕನ್ನಡದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಫಿಟ್‌ನೆಸ್‌ಗೆ ಆದ್ಯತೆ ನೀಡುವ ಅಪ್ಪು, ವರ್ಕೌಟ್‌ ಮಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ಅಭಿಮಾನಿಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ.

ಪುನೀತ್ ರಾಜಕುಮಾರ್ ಎಲ್ಲರಿಗೂ ಎಷ್ಟು ಅಚ್ಚುಮೆಚ್ಚು. ಪುನೀತ್ ಅವರಂತೆಯೇ ಅವರ ಜೀವಕ್ಕೆ ಜೀವವಾಗಿದ್ದ ಅವರ ಧರ್ಮಪತ್ನಿ ಅಶ್ವಿನಿ ಕೂಡ ಎಲ್ಲರಿಗೂ ಅಷ್ಟೇ ಅಚ್ಚು-ಮೆಚ್ಚು. ಇಬ್ಬರದ್ದೂ ಒಂದೇ ರೀತಿಯಾದಂತಹ ಗುಣ. ಅಶ್ವಿನಿ ಮತ್ತು ಪುನೀತ್ ಇಬ್ಬರೂ ಕೂಡ ಸರಳತೆಯ ಸಾಹುಕಾರರು. ಅಪ್ಪು ಅವರಂತೆಯೇ ಅಶ್ವಿನಿ ಅವರು ಕೂಡ ಸರಳ ವ್ಯಕ್ತಿತ್ವದವರು.

ತಾನು ದೊಡ್ಡ ಮನೆಯ ಸೊಸೆ ಎನ್ನುವ ಹಮ್ಮು-ಬಿಮ್ಮನ್ನು ಎಂದು ಕೂಡ ತೋರಿದವರಲ್ಲ. ಅಶ್ವಿನಿ ಅವರನ್ನು ಹತ್ತಿರದಿಂದ ಬಲ್ಲವರು ಅವರನ್ನ ಅನ್ನಪೂರ್ಣೇಶ್ವರಿ ಅಂತಲೇ ಕರೆಯುತ್ತಾರೆ. ಅಪ್ಪು ಮನೆಗೆ ಹೋದರೆ ಊಟ ಇಲ್ಲದೆ ಯಾರೊಬ್ಬರೂ ಹಾಗೆ ಬರುವುದಿಲ್ಲ. ಅಷ್ಟರಮಟ್ಟಿಗೆ ಅವರ ಮನೆಯಲ್ಲಿ ಆತಿಥ್ಯ ಇರುತ್ತದೆ. ಅದು ಯಾರೇ ಆಗಿರಲಿ ಹಿಂಜರಿಕೆ ಇಲ್ಲದೆ ಅವರ ಮನೆಯಲ್ಲಿ ಆತಿಥ್ಯ ಇದ್ದಿದ್ದೆ.

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್

1976 ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ಈಗ ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌. ಅಪ್ಪು ಅವ್ರ ಈ ಸೂಪರ್‌ ಜರ್ನಿಯಲ್ಲಿ ಅಶ್ವಿ ಅವರದ್ದು ಪ್ರಮುಖ ಪಾತ್ರ. 1999ರಲ್ಲಿ ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರ ಪ್ರೇಮಕಥೆ ಸಂಚಲನ ಮೂಡಿಸಿತ್ತು. ಪುನೀತ್ ರಾಜಕುಮಾರ್ ಅಶ್ವಿನಿ ಕಾಮನ್ ಫ್ರೆಂಡ್ ಆಗಿದ್ದರು ನಂತರ ಪ್ರೇಮಿಗಳಾದರು. ಇವರ ಪ್ರೇಮಕಥೆಯಲ್ಲಿ ಹಲವು ಸಿನಿಮಾ ರೀತಿಯಲ್ಲೆ ಹಲವು ಟ್ವೀಟುಗಳು ಇವೆ. ಪುನೀತ್ ರಾಜ್‌ಕುಮಾರ್‌ ಪ್ರೇಮ ನಿವೇದನೆ ಮಾಡಿಕೊಂಡಾಗ ಅಶ್ವಿನಿ ಒಪ್ಪಿದರೂ, ಅವರ ಮನೆಯ ಹಿರಿಯರು ಒಪ್ಪಿರಲಿಲ್ಲವಂತೆ. ಆದರೆ ಮಗನ ನಿರ್ಧಾರಕ್ಕೆ ಪುನೀತ್ ಪೋಷಕರು ಮೊದಲಿನಿಂದಲೂ ಬೆಂಬಲ ನೀಡಿದ್ದರು. ಕೊನೆಗೆ ಅಶ್ವಿನಿಯ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತು. ನಂತರ ಇಬ್ಬರ ಪ್ರೇಮಕಥೆ ಮದುವೆಯೊಂದಿಗೆ ಮುಂದುವರೆಯಿತು.

1999ರ ಡಿಸೆಂಬರ್ 1ರಂದು ಈ ಜೋಡಿ ವೈವಾಹಿಕ ಬಾಳಿಕೆ

1999ರ ಡಿಸೆಂಬರ್ 1ರಂದು ಈ ಜೋಡಿ ವೈವಾಹಿಕ ಬಾಳಿಕೆ

1999ರ ಡಿಸೆಂಬರ್ 1ರಂದು ಈ ಜೋಡಿ ವೈವಾಹಿಕ ಬಾಳಿಕೆ ಕಾಲಿಟ್ಟಿತು. ಈ ಜೋಡಿ ಮದುವೆಯಾಗಿ 21 ವರ್ಷ ಕಳೆದಿದೆ. ಇನ್ನೇನು ಈ ಡಿಸೆಂಬರ್ ಬಂದರೆ ಇವರ ಮದುವೆಗೆ 22 ವರ್ಷಕ್ಕೆ ಆಗುತ್ತದೆ. ಅಶ್ವಿನಿ ಬೆಂಗಳೂರಿನವರು ಮದುವೆಯ ನಂತರ ಅವರು ಕೂಡ ಸಿನಿಮಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು, ನಿರ್ಮಾಪಕಿ ಆಗಿಯೂ ಅಶ್ವಿನಿ ಕೆಲಸಮಾಡಿದ್ದಾರೆ. ಇವರ ಪ್ರೇಮಕಥೆ ಹುಟ್ಟಿಕೊಂಡಿದ್ದು ಜಿಮ್‌ನಲ್ಲಿ. ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಇಬ್ಬರು ಕೂಡ ಒಂದೇ ಜಿಮ್‌ಗೆ ಹೋಗ್ತಾ ಇದ್ದರು. ಅಲ್ಲಿ ಸ್ನೇಹಿತರಾಗಿ ಸ್ನೇಹ- ಪ್ರೇಮವಾಯಿತು.

ಅಶ್ವಿನಿ ತಮ್ಮ ಪ್ರೀತಿಯ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದರು

ಅಶ್ವಿನಿ ತಮ್ಮ ಪ್ರೀತಿಯ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದರು

ಈ ಹಿಂದೆ ಅಶ್ವಿನಿ ತಮ್ಮ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಪುನೀತ್ ಅವರ ಸರಳ ವ್ಯಕ್ತಿತ್ವ, ಮತ್ತೊಬ್ಬರಿಗೆ ಸಹಾಯ ಮಾಡಬೇಕು ಅನ್ನುವ ಗುಣ ನನಗೆ ತುಂಬಾ ಇಷ್ಟವಾಯಿತು. ಪುನೀತ್ ಅವರು ವ್ಯಕ್ತಿಗಳನ್ನು ತುಂಬಾ ಸರಳವಾಗಿ ನಂಬಿ ಬಿಡುತ್ತಾರೆ ಅವರಿಗೆ ಟ್ರಾವೆಲ್‌ ಮಾಡುವುದು ಮತ್ತು ಒಳ್ಳೆಯ ಸ್ನೇಹಿತರನ್ನು ಪಡೆಯುವುದು ತುಂಬಾ ಇಷ್ಟ. ಅವರ ಈ ಗುಣಗಳು ನನಗೆ ತುಂಬಾ ಇಷ್ಟವಾಯಿತು' ಎಂದು ಅಶ್ವಿನಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇವರಿಬ್ಬರೂ ಆದರ್ಶ ದಂಪತಿಗಳು

ಇವರಿಬ್ಬರೂ ಆದರ್ಶ ದಂಪತಿಗಳು

ಇವರಿಬ್ಬರೂ ಆದರ್ಶ ದಂಪತಿಗಳು. ಪುನೀತ್ ಮತ್ತು ಅಶ್ವಿನಿ ಎಲ್ಲಿ ತನಕ ಕೈಗೊಂಡಿರುವ ಕಾರ್ಯಗಳು, ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಅಂಶಗಳು ಮತ್ತೊಬ್ಬರಿಗೆ ಆದರ್ಶ ಆಗುವ ರೀತಿಯಲ್ಲಿ ಇವೆ. ಈ ದಂಪತಿಗಳ ಸರಳ ಸುಂದರ ಬದುಕನ್ನು ಹತ್ತಿರದಿಂದ ಬಲ್ಲವರು ಹಾಡಿ ಹೊಗಳುತ್ತಾರೆ. ಅವರಂತೆಯೇ ಬದುಕಬೇಕು ಎನ್ನುವ ಮಾತುಗಳನ್ನು ಆಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಅವರ ಇಬ್ಬರು ಮಕ್ಕಳು. ಮಕ್ಕಳು ಕೂಡ ತಾವು ರಾಜವಂಶದ ಮೊಮ್ಮಕ್ಕಳು, ತಾವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಕ್ಕಳು ಎನ್ನುವಂತಹ ರೀತಿಯಲ್ಲಿ ಹಮ್ಮು ಬಿಮ್ಮು ತೋರಿಸಿಕೊಂಡು ಇಲ್ಲಿಯತನಕ ಕಾಣಿಸಿಕೊಂಡಿಲ್ಲ. ಮಕ್ಕಳಿಗೂ ಕೂಡ ಅಪ್ಪು ಮತ್ತು ಅಶ್ವಿನಿ ಜೀವನದ ಮೌಲ್ಯಗಳನ್ನು ಚಿಕ್ಕಂದಿನಿಂದಲೇ ಹೇಳಿ ಕೊಟ್ಟಿದ್ದಾರೆ.

ಪ್ರೀತಿ ಪತಿಯನ್ನು ಕಳೆದುಕೊಂಡ ಅಶ್ವಿನಿ

ಪ್ರೀತಿ ಪತಿಯನ್ನು ಕಳೆದುಕೊಂಡ ಅಶ್ವಿನಿ

ಅದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚಿಗೆ ಅವರ ಮಗಳು ಧೃತಿ ಹೊರದೇಶಕ್ಕೆ ಓದುವ ಸಲುವಾಗಿ ಹೋಗಿರುವುದು. ಅಪ್ಪ ಅಮ್ಮನ ಬಳಿ ದುಡ್ಡು ಇದೆ ಎಂದು ಮಗಳು ಹೊರ ದೇಶಕ್ಕೆ ಹೋಗಿಲ್ಲ. ಬದಲಿಗೆ ತಾನು ಪಡೆದ ವಿದ್ಯಾರ್ಥಿವೇತನವನ್ನು ಬಳಸಿಕೊಂಡು ಹೊರದೇಶಕ್ಕೆ ಓದಲು ಹೋಗಿದ್ದಾರೆ. ಈ ವಿಚಾರವನ್ನು ಸಿನಿಮಾರಂಗದ ಹಲವರು ಇತ್ತೀಚೆಗಷ್ಟೇ ಪ್ರಸ್ತಾಪಿಸಿ ಈ ದಂಪತಿಗಳ ಬಗ್ಗೆ ಮೆಚ್ಚುಗೆಯನ್ನು ತೋರಿಸಿದ್ದಾರೆ. ಪ್ರೀತಿ ಪತಿಯನ್ನು ಕಳೆದುಕೊಂಡ ಅಶ್ವಿನಿಯವರ ನೋವನ್ನು ಹೇಳಲು ಸಾಧ್ಯವಿಲ್ಲ. ಅಪ್ಪು ಅವರ ಆ ನೆನಪುಗಳೊಂದಿಗೆ ಬದುಕುವ ಅನಿವಾರ್ಯತೆಯನ್ನು ಆ ದೇವರು ಅಶ್ವಿನಿ ಅವರ ಮುಂದೆ ಇಟ್ಟು ಬಿಟ್ಟಿದ್ದಾನೆ.

More from Filmibeat

English summary
Actor Puneeth Rajkumar And Ashwini Revanth Life Is Ideal For Many, Love Story and marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X