ವಿಡಿಯೋ ವೈರಲ್: ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಗೆ ಅಭಿಮಾನಿಗಳು ಫಿದಾ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಕೌಟ್, ಡ್ಯಾನ್ಸ್, ಸೈಕ್ಲಿಂಗ್ ಅಂತ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಫಿಟ್ ನೆಸ್ ಫ್ರೀಕ್ ಪವರ್ ಸ್ಟಾರ್ ಮತ್ತೊಂದು ಸಾಹಸದ ವಿಡಿಯೋ ಈಗ ಅಭಿಮಾನಿಗಳ ಮೈ ಜುಮ್ ಎನಿಸಿದೆ.
Recommended Video
ಹೌದು, ಪವರ್ ಸ್ಟಾರ್ ಸಮುದ್ರದಲ್ಲಿ ಬ್ಯಾಕ್ ಡೈವ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಫಿದಾ ಆಗಿರುವ ಅಭಿಮಾನಿಗಳು ಇದು ಹೇಗೆ ಎಂದು ಅಚ್ಚರಿಯ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಪವರ್ ಸ್ಟಾರ್ ಇತ್ತೀಚಿಗೆ ಮುರುಡೇಶ್ವರ ಕಡೆ ಪಯಣ ಬೆಳೆಸಿದ್ದರು. ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಇದೀಗ ನೇತ್ರಾಣಿಯಲ್ಲಿ ಬ್ಯಾಕ್ ಡೈವ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'ಬ್ಯಾಕ್ ಡೈವ್ ನೆನಪು. ವಿಭಿನ್ನ ಪ್ರಪಂಚಕ್ಕೆ ಡೈವ್ ಮಾಡುತ್ತಿರುವುದು' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೂ ಮೊದಲು ಅಪ್ಪು ದಯವಿಟ್ಟು ಯಾರು ಈ ರೀತಿ ಪ್ರಯತ್ನ ಮಾಡಬೇಡಿ ಎನ್ನುವ ಸೂಚನೆ ನೀಡಿದ್ದಾರೆ. ಪವರ್ ಸ್ಟಾರ್ ಸಾಹಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇತ್ತೀಚಿಗೆ ವರ್ಕೌಟ್ ವಿಡಿಯೋವೊಂದನ್ನು ಶೇರ್ ಮಾಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.
ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಯುವರತ್ನ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಏಪ್ರಿಲ್ 1ಕ್ಕೆ ಯುವರತ್ನ ಸಿನಿಮಾ ರಿಲೀಸ್ ಆಗುತ್ತಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications










