For Quick Alerts
  ALLOW NOTIFICATIONS  
  For Daily Alerts

  5ನೇ ಬಾರಿ ಅಪ್ಪುಗೆ ಫಿಲ್ಮ್ ಫೇರ್ : ಈ ಮೂವರಿಗೆ ಪ್ರಶಸ್ತಿ ಸಮರ್ಪಣೆ

  By Naveen
  |
  ಮತ್ತೆ ಪವರ್ ಸ್ಟಾರ್ ಕೈ ಸೇರಿದ ಬ್ಲ್ಯಾಕ್ ಲೇಡಿ...!! | Filmibeat Kannada

  ನಟ ಪುನೀತ್ ರಾಜ್ ಕುಮಾರ್ ಮತ್ತೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. 5 ನೇ ಬಾರಿ ಕಪ್ಪು ರಾಜಕುಮಾರಿಯನ್ನು ಪುನೀತ್ ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಪಡೆದ ಪುನೀತ್ ತಮ್ಮ ಸಂತಸವನ್ನು ಈ ರೀತಿ ಹಂಚಿಕೊಂಡಿದ್ದಾರೆ.

  ''ನಮಸ್ಕಾರ, ಈ ಸಿನಿಮಾಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿರುವುದು ತುಂಬ ಮುಖ್ಯ. ಯಾಕೆಂದರೆ, ಇಡೀ ಕರ್ನಾಟಕ ಈ ಸಿನಿಮಾವನ್ನು ನೋಡಿ ಕೊಂಡಾಡಿ, ಒಂದು ಹಬ್ಬ ಮಾಡಿದಂತೆ ಆಚರಿಸಿದ ಸಿನಿಮಾ ಇದು. 'ರಾಜಕುಮಾರ' ಚಿತ್ರಕ್ಕಾಗಿ ಫಿಲ್ಮ್ ಫೇರ್ ಬಂದಿರುವುದು ಬಹಳ ಖುಷಿ ನೀಡಿದೆ. ನಮ್ಮ ತಂದೆಯವರ ಹೆಸರಿನಲ್ಲಿ ಮಾಡಿದಂತಹ ಸಿನಿಮಾಗೆ ನನಗೆ ಫಿಲ್ಮ್ ಫೇರ್ ಸಿಕ್ಕಿರುವುದಕ್ಕೆ ಧನ್ಯವಾದ ಹೇಳುತ್ತೇನೆ.'' ಎಂದಿರುವ ಅಪ್ಪು ಪ್ರಶಸ್ತಿಯನ್ನು ಮೂರು ಜನರಿಗೆ ಅರ್ಪಿಸಿದ್ದಾರೆ.

  65ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಬ್ಲಾಕ್ ಲೇಡಿ' ಹಿಡಿದು ನಗೆ ಬೀರಿದ ಕನ್ನಡಿಗರ ಪಟ್ಟಿ ಇಲ್ಲಿದೆ 65ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಬ್ಲಾಕ್ ಲೇಡಿ' ಹಿಡಿದು ನಗೆ ಬೀರಿದ ಕನ್ನಡಿಗರ ಪಟ್ಟಿ ಇಲ್ಲಿದೆ

  ''ಈ ಪ್ರಶಸ್ತಿಯನ್ನು ನಾನು ವಿಶೇಷವಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಡೇಡಿಕೇಟ್ ಮಾಡುತ್ತೇನೆ. ಈ ಸಿನಿಮಾ ಇಷ್ಟರ ಮಟ್ಟಿಗೆ ಹಿಟ್ ಆಗಲು ಈ ಮೂವರು ಮುಖ್ಯ ಕಾರಣ. ಅದಕ್ಕಿಂತ ಹೆಚ್ಚಾಗಿ ನೀವು ಅಭಿಮಾನಿಗಳು) ಕಾರಣ'' ಎಂದು ಎಲ್ಲರಿಗೆ ಧನ್ಯವಾದ ತಿಳಿಸಿದ್ದಾರೆ.

  ಪುನೀತ್ ರಾಜ್ ಕುಮಾರ್ ಫಿಲ್ಮ್ಸ್ ಫೇರ್ ಪ್ರಶಸ್ತಿ ಪಟ್ಟಿ

  1985 ರಲ್ಲಿ 'ಬೆಟ್ಟದ ಹೂ' ಚಿತ್ರಕ್ಕೆ ಬಾಲ ನಟ ಫಿಲ್ಮ್ಸ್ ಫೇರ್ ಪ್ರಶಸ್ತಿ

  2006 ರಲ್ಲಿ 'ಅರಸು' ಸಿನಿಮಾಗೆ ನಾಯಕನಾಗಿ ಮೊದಲ ಫಿಲ್ಮ್ಸ್ ಫೇರ್ ಪ್ರಶಸ್ತಿ

  2011 ರಲ್ಲಿ 'ಹುಡುಗರು' ಚಿತ್ರಕ್ಕೆ ಫಿಲ್ಮ್ಸ್ ಫೇರ್ ಪ್ರಶಸ್ತಿ

  2015 ರಲ್ಲಿ 'ರಣವಿಕ್ರಮ' ಚಿತ್ರಕ್ಕೆ ಫಿಲ್ಮ್ಸ್ ಫೇರ್ ಪ್ರಶಸ್ತಿ

  2017 ರಲ್ಲಿ 'ರಾಜಕುಮಾರ' ಸಿನಿಮಾಗೆ ಫಿಲ್ಮ್ಸ್ ಫೇರ್ ಪ್ರಶಸ್ತಿ

  English summary
  65th South Filmfare Awards : Kannada actor Puneeth Rajkumar bags Best Actor award for 'Raajakumara' movie. It is his 5th Filmfare Award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X