ಅಪ್ಪು ಬರ್ತ್ ಡೇ ದಿನವೇ 'ಜೇಮ್ಸ್' ರಿಲೀಸ್, ಇದು ಪುನೀತ್‌ ಕನಸು!

'ಜೇಮ್ಸ್' ಚಿತ್ರ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಒಂದೊಂದೇ ಕುತೂಹಲಕಾರಿ ಅಂಶಗಳು ಹೊರ ಬೀಳುತ್ತಿವೆ. 'ಜೇಮ್ಸ್' ಸಿನಿಮಾ, ನಟ ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬದಂದು, ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ಅಪ್ಪು ಇಲ್ಲವಾದ ಕಾರಣ 'ಜೇಮ್ಸ್' ಚಿತ್ರವನ್ನು ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡಲಾಗುತ್ತಿದೆ. ಇದು ಅವರಿಗೆ ಸಲ್ಲಿಸುವ ಗೌರವ ಎಂದುಕೊಳ್ಳಲಾಗಿತ್ತು.

ಇದು ಅಪ್ಪು ಅವರ ಕೊನೆಯ ಸಿನಿಮಾ ಆದ ಕಾರಣ, ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಆಗುವುದು ಅಷ್ಟೆ ಮುಖ್ಯ ಆಗಿತ್ತು. ಆದರೆ ಇದು ಸಿನಿಮಾತಂಡ ತೆಗೆದುಕೊಂಡ ನಿರ್ಧಾರವಲ್ಲ. ಬದಲಿಗೆ ಇದು ನಟ ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಅವರ ಆಸೆ ಆಗಿತ್ತು ಎಂದರೆ ನಂಬಲೇ ಬೇಕು. ಹೌದು ತಮ್ಮ ಹುಟ್ಟುಹಬ್ಬದ ದಿನ ತಮ್ಮ ಸಿನಿಮಾವನ್ನು ರಿಲೀಸ್ ಮಾಡಬೇಕು ಎನ್ನುವುದು ಅಪ್ಪು ಅವರ ದೊಡ್ಡ ಆಸೆ ಆಗಿತ್ತಂತೆ.

ಇದೇ ಕಾರಣಕ್ಕೆ ಸಿನಿಮಾತಂಡ ಸಾಕಷ್ಟು ರಿಸ್ಕ್ ತೆಗೆದುಕೊಂಡು, ಮಾರ್ಚ್ 17ರ ಒಳಗೆ ಸಿನಿಮಾ ತಯಾರಿಸಿ, ರಿಲೀಸ್‌ಗೆ ಸಿದ್ಧ ಮಾಡಿಕೊಂಡಿದೆ. ಅಪ್ಪು ಅವರ ಆಸೆ ಆಗಿದ್ದ ಕಾರಣ ಅವರ ಕೊನೆ ಸಿನಿಮಾವನ್ನು ಅವರ ಹುಟ್ಟು ಹಬ್ಬದ ದಿನ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಈ ವಿಚಾರ ಈಗ ಬೆಳಕಿಗೆ ಬಂದಿದೆ.

ಮಾರ್ಚ್ 17 ಚಿತ್ರ ರಿಲೀಸ್, ಪುನೀತ್‌ ದೊಡ್ಡ ಆಸೆ!

ಮಾರ್ಚ್ 17 ಚಿತ್ರ ರಿಲೀಸ್, ಪುನೀತ್‌ ದೊಡ್ಡ ಆಸೆ!

ನಟ ಪುನೀತ್‌ ರಾಜ್‌ಕುಮಾರ್ ಅವರ ಅಪರೂಪದ ಕನಸಿನ ಬಗ್ಗೆ 'ಜೇಮ್ಸ್' ಚಿತ್ರದ ನಿರ್ಮಾಪಕ ಕಿಶೋರ್ ಪಾತಿಕೊಂಡ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ್ದಾರೆ. "ಹೀಗೆ ಸಿನಿಮಾ ಬಗ್ಗೆ ಮಾತನಾಡುವ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಆಸೆ ಬಗ್ಗೆ ಹೇಳಿಕೊಂಡಿದ್ದರು. ಮಾರ್ಚ್ 17 ಹುಟ್ಟುಹಬ್ಬಕ್ಕೆ ಒಂದು ಸಿನಿಮಾ ರಿಲೀಸ್ ಮಾಡಬೇಕು, ಇಲ್ಲಿ ತನಕ ಆಗಿಲ್ಲ, ಹುಟ್ಟುಹಬ್ಬ ಜೊತೆಗೆ ರಾಯರ ವಾರ ಬಂದಿದೆ. ಹಾಗಾಗಿ ಅಂದೇ ರಿಲೀಸ್ ಮಾಡೋಣ ಎಂದು ಹೇಳಿದ್ದರು. ಹಾಗಾಗಿ ನಾವು ಅದನ್ನ ಸಾಕಾರ ಮಾಡುವ ನಿಟ್ಟಿನಲ್ಲಿ ಮಾರ್ಚ್ 17ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ." ಎಂದು ಹೇಳಿಕೆ ನೀಡಿದ್ದಾರೆ.

ಮಾರ್ಚ್ 17 ಅಪ್ಪು ಯಾವ ಚಿತ್ರ ರಿಲೀಸ್ ಆಗಿಲ್ಲ!

ಮಾರ್ಚ್ 17 ಅಪ್ಪು ಯಾವ ಚಿತ್ರ ರಿಲೀಸ್ ಆಗಿಲ್ಲ!

ನಟ ಪುನೀತ್‌ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಇಲ್ಲಿ ತನಕ ಅವರ ಯಾವುದೇ ಸಿನಿಮಾಗಳು ರಿಲೀಸ್ ಆಗಿಲ್ಲ. ಯಾಕೆಂದರೆ ಒಂದು, ಮಾರ್ಚ್ 17 ಗುರುವಾರ ಬರುತ್ತಾ ಇರಲಿಲ್ಲ. ಇನ್ನೊಂದು ಬಂದರೂ ಆ ಸಮಯಕ್ಕೆ ಸರಿಯಾಗಿ ಸಿನಿಮಾ ರಿಲೀಸ್‌ಗೆ ರೆಡಿ ಇರುತ್ತಿರಲಿಲ್ಲ. ಹಾಗಾಗಿ ಇಲ್ಲಿ ತನಕ ಅಪ್ಪು ಹುಟ್ಟುಹಬ್ಬದಂದೂ ಅವರ ಯಾವೊಂದು ಚಿತ್ರವೂ ರಿಲೀಸ್ ಆಗಿಲ್ಲ. ಆದರೆ ಈ ಬಾರಿ ಮಾರ್ಚ್ 17 ಗುರುವಾರ ಬಂದಿದೆ. ಜೊತೆಗೆ ಸಿನಿಮಾ ಕೂಡ ಬಹುತೇಕ ಮುಗಿದಿತ್ತು. ಹಾಗಾಗಿ ಅಪ್ಪು 'ಜೇಮ್ಸ್' ಸಿನಿಮಾವನ್ನು ತಮ್ಮ ಹುಟ್ಟಹಬ್ಬಕ್ಕೆ ರಿಲೀಸ್ ಮಾಡಬೇಕು ಎಂದುಕೊಂಡಿದ್ದರಂತೆ.

ಕನಸು ಈಡೇರುವ ಮುನ್ನವೇ ಕಣ್ಮರೆಯಾದ ಅಪ್ಪು!

ಕನಸು ಈಡೇರುವ ಮುನ್ನವೇ ಕಣ್ಮರೆಯಾದ ಅಪ್ಪು!

ಆದರೆ ತಮ್ಮ ಕನಸು ಈಡೇರುವುದನ್ನು ನೋಡಲು ಅಪ್ಪುನೇ ಇಲ್ಲ. ಆದರೂ ಅವರ ಈ ಕನಸನ್ನು ನನಸು ಮಾಡುವುದು ಕೇವಲ ಇದೊಂದು ಚಿತ್ರದಿಂದ ಮಾತ್ರ ಸಾಧ್ಯ. ಯಾಕೆಂದರೆ ಮುಂದೆ ಸಮಯ ಕೂಡಿ ಬಂದರೂ, ಸಿನಿಮಾ ಮಾಡಲೂ ಅವರೇ ಇಲ್ಲ. ಹಾಗಾಗಿ ಈ ಚಿತ್ರವನ್ನು ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಮಾರ್ಚ್ 13ಕ್ಕೆ 'ಜೇಮ್ಸ್' ಪ್ರೀ ರಿಲೀಸ್ ಕಾರ್ಯಕ್ರಮ!

ಮಾರ್ಚ್ 13ಕ್ಕೆ 'ಜೇಮ್ಸ್' ಪ್ರೀ ರಿಲೀಸ್ ಕಾರ್ಯಕ್ರಮ!

ಇನ್ನು ಜೇಮ್ಸ್ ಚಿತ್ರದ ಮೂಲಕ ಪುನೀತ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸೆನ್ಸಾರ್ ಆಗಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಮಾರ್ಚ್ 13ರಂದು ನಡೆಯಲಿದೆ. ಜೇಮ್ಸ್ ಕಾರ್ಯಕ್ರಮಕ್ಕಾಗಿ ಇಡೀ ಚಿತ್ರರಂಗ ಒಟ್ಟಾಗಿ ಬರಲಿದೆ. ಇನ್ನು ಮಾರ್ಚ್ 17ಕ್ಕೆ ಕರ್ನಾಟಕದಲ್ಲಿ ಅಕ್ಷರಶಃ ಜಾತ್ರೆ ನಡೆಯಲಿದೆ.

More from Filmibeat

English summary
Puneeth Rajkumar Big Dream Was To Release James Movie On March 17th,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X