For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಭೀತಿ: ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ರದ್ದು?

  |

  ಕೊರೊನಾ ಕರ್ನಾಟಕಕ್ಕೆ ಕಾಲಿಟ್ಟಿದ್ದು ಐದು ಧೃಡೀಕೃತ ಹಾಗೂ ಒಂದು ಶಂಕಿತ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಒಬ್ಬ ವೃದ್ಧ ಕೊರೊನಾ ವೈರಸ್ ನಿಂದ ಸಾವಿಗೀಡಾಗಿದ್ದಾರೆ.

  ಕೊರೊನಾ ಭೀತಿಯಿಂದಾಗಿ ಈಗಾಗಲೇ ಹಲವು ಚಿತ್ರಗಳ ಶೂಟಿಂಗ್ ಶೆಡ್ಯೂಲ್‌ನಲ್ಲಿ ವ್ಯತ್ಯಾಸವಾಗಿವೆ. ಸಭೆ, ಸಮಾರಂಭಗಳು ಮುಂದೂಡಲ್ಪಟ್ಟಿವೆ.

  ವಿದೇಶದಲ್ಲಿ ನಡೆಯಬೇಕಿದ್ದ ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಚಿತ್ರದ ಹಾಡಿನ ಚಿತ್ರೀಕರಣವನ್ನು ಕೊರೊನಾ ಭೀತಿಯಿಂದ ರದ್ದು ಮಾಡಲಾಗಿತ್ತು, ಇದೀಗ ಅವರ ಹುಟ್ಟುಹಬ್ಬ ಆಚರಣೆಯನ್ನೂ ರದ್ದು ಮಾಡಲಾಗುತ್ತಿದೆ.

  ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬ

  ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬ

  ಹೌದು, 17 ಮಾರ್ಚ್‌ ನಂದು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವಿದ್ದು, ಪ್ರತಿವರ್ಷವೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಪುನೀತ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಕೊರೊನಾ ಭೀತಿಯಿಂದಾಗಿ ಈ ಬಾರಿ ಬಹಿರಂಗ ಆಚರಣೆ ರದ್ದು ಮಾಡುವ ಸಾಧ್ಯತೆ ಇದೆ.

  ಕುಟುಂಬ ಸದಸ್ಯರೊಟ್ಟಿಗಷ್ಟೆ ಆಚರಣೆ

  ಕುಟುಂಬ ಸದಸ್ಯರೊಟ್ಟಿಗಷ್ಟೆ ಆಚರಣೆ

  ಮೂಲಗಳ ಪ್ರಕಾರ ಪುನೀತ್ ರಾಜ್‌ಕುಮಾರ್ ಅವರು ಕುಟುಂಬ ಸದಸ್ಯರೊಂದಿಗಷ್ಟೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಅಭಿಮಾನಿಗಳ ಆರೋಗ್ಯ ಹಿತದೃಷ್ಟಿಯಿಂದ ಹಾಗೂ ವೈಯಕ್ತಿಕ ಆರೋಗ್ಯ ಕಾಳಜಿಯಿಂದ ಪುನೀತ್ ಅವರು ತಮ್ಮ ಹುಟ್ಟುಹಬ್ಬ ಆಚರಣೆ ರದ್ದು ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ಯುವರತ್ನ ಹಾಡಿನ ಚಿತ್ರೀಕರಣ ಈಗಷ್ಟೆ ರದ್ದಾಗಿದೆ

  ಯುವರತ್ನ ಹಾಡಿನ ಚಿತ್ರೀಕರಣ ಈಗಷ್ಟೆ ರದ್ದಾಗಿದೆ

  ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣ ಆಸ್ಟ್ರಿಯಾ ದಲ್ಲಿ ನಿಗದಿ ಮಾಡಲಾಗಿತ್ತು. ಮಾರ್ಚ್‌ 2 ರಂದೇ ಪುನೀತ್ ರಾಜ್‌ಕುಮಾರ್ ಮತ್ತು ಯುವರತ್ನ ತಂಡ ವಿದೇಶಕ್ಕೆ ಪ್ರಯಾಣ ಬೆಳೆಸಬೇಕಿತ್ತು, ಆದರೆ ಕೊರೊನಾ ಕಾರಣದಿಂದ ಶೂಟಿಂಗ್ ರದ್ದು ಮಾಡಲಾಯಿತು.

  ಸಲ್ಮಾನ್, ಹೃತಿಕ್ ಚಿತ್ರೀಕರಣ ರದ್ದು

  ಸಲ್ಮಾನ್, ಹೃತಿಕ್ ಚಿತ್ರೀಕರಣ ರದ್ದು

  ಎಲ್ಲಾ ಚಿತ್ರರಂಗದ ಮೇಲೂ ಕೊರೊನಾ ಪರಿಣಾಮ ಬೀರುತ್ತಿದ್ದು ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಶನ್ ವಿದೇಶಗಳಲ್ಲಿ ಚಿತ್ರೀಕರಣಗೊಳ್ಳಬೇಕಿದ್ದ ತಮ್ಮ ಸಿನಿಮಾಗಳ ಚಿತ್ರಕರಣವನ್ನು ಮುಂದೂಡಿದ್ದಾರೆ.

  English summary
  Star actor Puneeth Rajkumar birthday (17th March) celebration may cancel due to corona virus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X