'ಯುವರತ್ನ'ದಿಂದ 'ಜೇಮ್ಸ್'; ಪುನೀತ್ ಬಳಿ ಇರುವ ಸಿನಿಮಾಗಳೆಷ್ಟು? ಇಲ್ಲಿದೆ ವಿವರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಬಹುನಿರೀಕ್ಷೆಯ ಯುವರತ್ನ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪ್ರಮೋಷನ್ ಚಟುವಟಿಗಳು ಪ್ರಾರಂಭವಾಗಿದ್ದು, ಸಿನಿಮಾ ಏಪ್ರಿಲ್ 1ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

ಸಂತೋಷ್ ಆನಂದರಾಮ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಯುವರತ್ನ ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿದೆ. ಸದ್ಯ ಸಿನಿಮಾತಂಡ ವಿಭಿನ್ನವಾಗಿ ಪ್ರಮೋಷನ್ ಮಾಡಲು ಮುಂದಾಗಿದ್ದು, ಇಡೀ ಸಿನಿಮಾತಂಡ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ನೇರ ಸಂಪರ್ಕ ಬೆಳೆಸುವ ಯೋಜನೆ ಹಾಕಿಕೊಂಡಿದೆ. ಇದೇ ತಿಂಗಳು 21ರಿಂದ ಯುವರತ್ನ ಸಿನಿಮಾ ತಂಡ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಯುವರತ್ನ ಪ್ರಮೋಷನ್ ಜೊತೆಗೆ ಅಪ್ಪು ಜೇಮ್ಸ್ ಸಿನಿಮಾದಲ್ಲೂ ನಿರತರಾಗಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಈಗಾಗಲೇ ಮಾಡಿ ಮುಗಿಸಿದ್ದಾರೆ. ಸದ್ಯ ಹಾಡು ಮತ್ತು ಕೆಲವು ಟಾಕಿ ಭಾಗ ಉಳಿಸಿಕೊಂಡಿದ್ದು, ಸದ್ಯದಲ್ಲೇ ಚಿತ್ರೀಕರಣ ಮುಕ್ತಾಯವಾಗಲಿದೆ.

Puneeth Rajkumar Birthday Special: Here is the List of Upcoming Movies of Power Star

ಚಿತ್ರದಲ್ಲಿ ಪುನೀತ್‌ಗೆ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕುಮಾರ ಸಿನಿಮಾ ಬಳಿಕ ಪ್ರಿಯಾ ಎರಡನೇ ಬಾರಿ ಅಪ್ಪು ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಜೇಮ್ಸ್ ಸಿನಿಮಾದ ಪೋಸ್ಟರ್ ಸಹ ರಿಲೀಸ್ ಆಗಿದೆ.

ಈ ಎರಡು ಸಿನಿಮಾಗಳ ಜೊತೆಗೆ ಪುನೀತ್ ಮೊದಲ ಬಾರಿಗೆ ದಿನಕರ್ ತೂಗುದೀಪ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಜಯಣ್ಣ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಇದೇ ವರ್ಷ ಸೆಟ್ಟೇರಲಿದೆ.

Puneeth Rajkumar Birthday Special: Here is the List of Upcoming Movies of Power Star

ಇನ್ನು ಪೈಲ್ವಾನ ಖ್ಯಾತಿಯ ನಿರ್ದೇಶಕ ಕೃಷ್ಣ ಸಾರಥ್ಯದಲ್ಲಿ ಪುನೀತ್ ರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಚಿತ್ರಕ್ಕೆ ಸ್ವಪ್ನ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪುನೀತ್ ರಾ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯುವರತ್ನ ಮತ್ತು ಜೇಮ್ಸ್ ಬಳಿಕ ಪುನೀತ್ ಬಳಿ ಎರಡು ಸಿನಿಮಾಗಳಿಗೆ. ಈ ವರ್ಷ ಅಪ್ಪು ಯುವರತ್ನ ಬಳಿಕ ಜೇಮ್ಸ್ ಮೂಲಕ ತೆರೆ ಮೇಲೆ ಬರಲಿದ್ದಾರೆ. ಎರಡು ಸಿನಿಮಾಗಳು ರಿಲೀಸ್ ಆಗುವ ಸಾಧ್ಯತೆ ಇದೆ.

English summary
Puneeth Rajkumar Birthday Special: Here is the List of Upcoming Movies of Power Star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X