ಜೂ.ಎನ್ ಟಿ ಆರ್ ಹುಟ್ಟುಹಬ್ಬಕ್ಕೆ ಅಪ್ಪು ಶುಭ ಕೋರಿದ್ದು ಹೀಗೆ
ಟಾಲಿವುಡ್ ಸ್ಟಾರ್ ನಟ ಜೂ.ಎನ್.ಟಿ.ಆರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊರೊನಾ ಲಾಕ್ ಡೌನ್ ಪರಿಣಾಮ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸದಿದ್ದರೂ, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದುಬಂದಿದೆ.
ದಕ್ಷಿಣ ಭಾರತೀಯ ಚಿತ್ರರಂಗದ ಸಾಕಷ್ಟು ಕಲಾವಿದರು ತಾರಕ್ ರಾಮ್ ಹುಟ್ಟುಹಬ್ಬಕ್ಕೆ ಪ್ರೀತಿಯ ವಿಶ್ ತಿಳಿಸಿದ್ದಾರೆ. ವಿಶೇಷ ಅಂದರೆ ಕನ್ನಡದ ಸ್ಟಾರ್ಸ್ ಸಹ ಶುಭಕೋರಿದ್ದಾರೆ. ಪ್ರಶಾಂತ್ ನೀಲ್, ಪ್ರಣೀತಾ ಜೂ.ಎನ್.ಟಿ.ಆರ್ ಗೆ ಶುಭಾಶಯ ಕೋರಿದ್ದಾರೆ.
ವಿಶೇಷ ಅಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ. ಪುನೀತ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ಉತ್ತಮ ಸ್ನೇಹಿತರು. ಇದೇ ಸ್ನೇಹ ಜೂ.ಎನ್ ಟಿ ಆರ್, ಪುನೀತ್ ಅವರ ಚಕ್ರವ್ಯೂಹ ಚಿತ್ರಕ್ಕೆ ಹಾಡುವಂತೆ ಮಾಡಿತ್ತು. ಚಿತ್ರರಂಗ ಬೇರೆ ಆದರು ಇಬ್ಬರು ಸ್ನೇಹ ಸಂಬಂಧ ಉತ್ತಮವಾಗಿದೆ.

ವಿಡಿಯೋ ಸಂದೇಶದಲ್ಲಿ ಪುನೀತ್ "ಹುಟ್ಟುಹಬ್ಬದ ಶುಭಾಯಗಳು ಸಹೋದರ. ಆರೋಗ್ಯವಾಗಿ, ಸಂತೋಷವಾಗಿರಿ. ಆಲ್ವೇಸ್ ಹ್ಯಾಪಿನೆಸ್" ಎಂದು ವಿಶ್ ಮಾಡಿದ್ದಾರೆ. ಸದ್ಯ ಅಪ್ಪು ಶುಭಕೋರಿರುವ ವಿಡಿಯೋ ಜೂ.ಎನ್ ಟಿ ಆರ್ ಅಭಿಮಾನಿಗಳು ಶೇರ್ ಮಾಡುತ್ತಿದ್ದರೆ. ಜೊತೆಗೆ ಅಪ್ಪುಗೆ ಧನ್ಯವಾದ ತಿಳಿಸುತ್ತಿದ್ದಾರೆ.
ಇನ್ನೂ ವಿಡಿಯೋದ ವಿಶೇಷ ಅಂದರೆ ಪುನೀತ್ ಅವರ ದಾಡಿ ಬಿಟ್ಟಿರುವ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಪುನೀತ್ ದಾಡಿ ಬಿಡುವುದಿಲ್ಲ. ಆದರೆ ಲಾಕ್ ಡೌನ್ ನಿಂದ ಮನೆಯಲ್ಲಿರುವ ಅಪ್ಪು ಉದ್ದ ದಾಡಿ ಬಿಟ್ಟು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











