ಹೊಸ ಸಿನಿಮಾಗಾಗಿ ಬದಲಾಯಿತು ಪುನೀತ್ ಹೇರ್ ಸ್ಟೈಲ್
ಸಿನಿಮಾ ನಟರು ತರಹೇವಾರಿ ಹೇರ್ ಸ್ಟೈಲ್ ಗಳನ್ನು ಮಾಡುತ್ತಿರುತ್ತಾರೆ. ಆದರೆ ನಟ ಪುನೀತ್ ರಾಜ್ ಕುಮಾರ್ ಇದುವರೆಗೆ ತಮ್ಮ ಹೇರ್ ಸ್ಟೈಲ್ ಅನ್ನು ಹೆಚ್ಚಾಗಿ ಬದಲಾವಣೆ ಮಾಡಿಲ್ಲ. ಆದರೆ ಈಗ ಅಪ್ಪು ತಮ್ಮ ಹೊಸ ಸಿನಿಮಾಗಾಗಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ.

ಪುನೀತ್ ತಮ್ಮ ಮುಂದಿನ ಚಿತ್ರಕ್ಕಾಗಿ ಈ ಬದಲಾದ ಹೇರ್ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅಪ್ಪು ಅವರ ಮುಂದಿನ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಪುನೀತ್ ಲುಕ್ ಸಖತ್ ಸ್ಟೈಲಿಶ್ ಆಗಿದೆ. ಹೊಸ ಹೇರ್ ಸ್ಟೈಲ್ ನೊಂದಿಗೆ ಪುನೀತ್ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದರೆ ಅಪ್ಪು ರೀತಿ ನಿರ್ದೇಶಕ ಪವನ್ ಒಡೆಯರ್ ಕೂಡ ಅದೇ ಶೈಲಿಯ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಹೀರೋ, ಡೈರೆಕ್ಟರ್ ಇಬ್ಬರು ಒಂದೇ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಅಪ್ಪು ಅವರ ಈ ಹೊಸ ಕೇಶ ವಿನ್ಯಾಸವನ್ನು ಮುಂದೆ ಅವರ ಅಭಿಮಾನಿಗಳು ಸಹ ಅನುಸರಿಸುತ್ತಾರೆ ಅನಿಸುತ್ತದೆ.
'ರಣವಿಕ್ರಮ' ನಂತರ ಪವನ್ ಓಡೆಯರ್ ಮತ್ತೆ ಪುನೀತ್ ರಾಜ್ ಕುಮಾರ್ ಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣದಿಂದ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಾರ್ಚ್ 17ರ ಪುನೀತ್ ಹುಟ್ಟುಹಬ್ಬಕ್ಕೆ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಲಿದೆ.

ಇತ್ತೀಚಿಗಷ್ಟೆ ಈ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದ್ದು ಪ್ರಿಯಾಂಕ ಜ್ವಾಲಕರ್ ಪುನೀತ್ ಗೆ ಜೊತೆಯಾಗಿದ್ದಾರೆ. ಪ್ರಿಯಾಂಕ ಜ್ವಾಲಕರ್ ಮೂಲತಃ ಮಹಾರಾಷ್ಟ್ರದ ಅನಂತಪುರದ ಹುಡುಗಿ, ಸಾಫ್ಟ್ ವೇರ್ ಎಂಜಿನೀಯರ್ ಆಗಿರುವ ಪ್ರಿಯಾಂಕ ತೆಲುಗಿನಲ್ಲಿ ಈಗಾಗಲೇ ಒಂದು ಸಿನಿಮಾ ಮಾಡಿದ್ದಾರೆ. ಉಳಿದಂತೆ ಸಿನಿಮಾದ ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಬಿ ಸರೋಜ ದೇವಿ ಸಹ ನಟಿಸುತ್ತಿದ್ದಾರೆ.


Click it and Unblock the Notifications











