For Quick Alerts
  ALLOW NOTIFICATIONS  
  For Daily Alerts

  ಇಷ್ಟದ ನಟ, ಡಾನ್ಸರ್, ಯುವರತ್ನ ಸಿನಿಮಾ ಎಲ್ಲದರ ಬಗ್ಗೆ ಪುನೀತ್ ಮಾತು

  |

  ಪುನೀತ್ ರಾಜ್‌ಕುಮಾರ್ ಆಸಕ್ತಿಗಳ ವಿಸ್ತಾರ ದೊಡ್ಡದು. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಇನ್ನೊಂದಿಷ್ಟು ಹೊಸ ವಿಷಯಗಳ ಬಗ್ಗೆ ಪುನೀತ್ ತಿಳಿದುಕೊಂಡಿದ್ದಾರೆ. ಹೊಸ ವಿಷಯಗಳನ್ನು ಕಲಿತುಕೊಂಡಿದ್ದಾರೆ.

  Kaanadante Maayavadanu Behind The scenes Part 03 | Filmibeat Kannada

  ಕೊರೊನಾ ಸಮಯದಲ್ಲಿ ತಮ್ಮ ದಿನಚರಿ, ನೋಡಿದ ಸಿನಿಮಾಗಳು, ಭೇಟಿ ಮಾಡಿದ ವ್ಯಕ್ತಿಗಳು, ಕಲಿತ ಹೊಸ ವಿಷಯಗಳು ಇನ್ನೂ ಅನೇಕ ವಿಷಯಗಳನ್ನು ಪುನೀತ್ ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಪಕ್ಕದಲ್ಲಿ ಫೆರಾರಿ ಹೋದರೂ ತಲೆಕೆಡಿಸಿಕೊಳ್ಳೊಲ್ಲ: 'ಯುವರತ್ನ'ದ ಹಬ್ಬದ ಪೋಸ್ಟರ್ ರಿಲೀಸ್ಪಕ್ಕದಲ್ಲಿ ಫೆರಾರಿ ಹೋದರೂ ತಲೆಕೆಡಿಸಿಕೊಳ್ಳೊಲ್ಲ: 'ಯುವರತ್ನ'ದ ಹಬ್ಬದ ಪೋಸ್ಟರ್ ರಿಲೀಸ್

  ನಿನ್ನೆ (ಮಂಗಳವಾರ) ಸಂಜೆ ಇನ್‌ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದ ಪುನೀತ್ ರಾಜ್‌ಕುಮಾರ್, ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇಷ್ಟದ ನಟ, ನೆಚ್ಚಿನ ಡಾನ್ಸರ್, ಸಿನಿಮಾ, ಕಲಿತ ಹೊಸ ವಿಷಯ, ಹೊಸ ಸಿನಿಮಾ ಬಿಡುಗಡೆ, ತಮ್ಮ ಪ್ರೊಡಕ್ಷನ್ ಹೌಸ್ ಹೀಗೆ ಹಲವು ವಿಷಯಗಳ ಬಗ್ಗೆ ಪುನೀತ್ ಮಾತನಾಡಿದ್ದಾರೆ.

  ಪುನೀತ್ ಗೆ ಹಲವು ನಟರ ಅಭಿನಯ ಇಷ್ಟ

  ಪುನೀತ್ ಗೆ ಹಲವು ನಟರ ಅಭಿನಯ ಇಷ್ಟ

  ಪುನೀತ್ ರಾಜ್‌ಕುಮಾರ್ ಗೆ ಹಾಲಿವುಡ್‌ನಲ್ಲಿ Rambo ಸಿನಿಮಾ ಖ್ಯಾತಿಯ ಸಿಲ್‌ವೆಸ್ಟರ್ ಸ್ಟಾಲೋನ್, ಖ್ಯಾತ ನಟ ಅರ್ನಾಲ್ಡ್, ಫಾರೆಸ್ಟ್ ಗಂಪ್ ಖ್ಯಾತಿಯ ಟಾಮ್‌ ಹ್ಯಾಂಕ್ಸ್ ಹಾಗೂ ಜಾಕಿ ಚಾನ್ ಪುನೀತ್‌ ರಾಜ್‌ಕುಮಾರ್ ಅವರ ನೆಚ್ಚಿನ ನಟರಂತೆ.

  ಶಿವಣ್ಣ ಬಗ್ಗೆ ಪುನೀತ್‌ಗೆ ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು ಜಗ್ಗೇಶ್ಶಿವಣ್ಣ ಬಗ್ಗೆ ಪುನೀತ್‌ಗೆ ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು ಜಗ್ಗೇಶ್

  ಪುನೀತ್ ಆರಾಧಿಸುವ ಬೆಸ್ಟ್ ಡಾನ್ಸರ್ ಯಾರು?

  ಪುನೀತ್ ಆರಾಧಿಸುವ ಬೆಸ್ಟ್ ಡಾನ್ಸರ್ ಯಾರು?

  ಇನ್ನು ಪುನೀತ್ ರಾಜ್‌ಕುಮಾರ್ ಆರಾಧಿಸುವ ಬೆಸ್ಟ್ ಡಾನ್ಸರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅಪ್ಪು, ನನಗೆ ಮೈಕಲ್ ಜಾಕ್ಸನ್ ಸದಾ ಇಷ್ಟ. ನಾನು ಆರಾಧಿಸುವ ಅತ್ಯುತ್ತಮ ನೃತ್ಯಗಾರ ಮೈಕಲ್ ಜಾನ್ಸನ್ ಎಂದರು. ಮೈಕಲ್ ಜಾನ್ಸನ್ ನಿಧನರಾದಾಗ ಅವರಿಗಾಗಿ ನೃತ್ಯ ಶ್ರದ್ಧಾಂಜಲಿ ಸಲ್ಲಿಸಿದ್ದರು ಪುನೀತ್.

  ಅಡುಗೆ ಮಾಡುವುದನ್ನು ಕಲಿತ ಪುನೀತ್

  ಅಡುಗೆ ಮಾಡುವುದನ್ನು ಕಲಿತ ಪುನೀತ್

  ಲಾಕ್‌ಡೌನ್ ಸಮಯದಲ್ಲಿ ತಾವು ಎಲ್ಲಿಯೂ ಹೊರಗೆ ಹೋಗಲಿಲ್ಲ ಎಂಬ ಪುನೀತ್ ಆ ಸಮಯದಲ್ಲಿ ಅಡುಗೆ ಮಾಡುವುದನ್ನು ಕಲಿತಿದ್ದಾಗಿ ಹಾಗೂ ಹಲವಾರು ಸಿನಿಮಾ ಹಾಗೂ ವೆಬ್ ಸೀರೀಸ್‌ಗಳನ್ನು ನೋಡಿದ್ದಾಗಿ ಹೇಳಿದರು. ಅನ್‌ಲಾಕ್ ಪ್ರಾರಂಭವಾದಾಗ ಸೈಕ್ಲಿಂಗ್‌ಗೆ ಹೋಗಿದ್ದರಂತೆ.

  ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ಪುನೀತ್ ರಾಜ್ ಕುಮಾರ್-ಯಶ್?ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ಪುನೀತ್ ರಾಜ್ ಕುಮಾರ್-ಯಶ್?

  ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ

  ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ

  ಯುವರತ್ನ ಸಿನಿಮಾ ಬಗ್ಗೆ ಮಾತನಾಡಿದ ಪುನೀತ್ ರಾಜ್‌ಕುಮಾರ್, ಸಿನಿಮಾ ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು. ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಶೀಘ್ರದಲ್ಲಿಯೇ ಮುಗಿಸಲಾಗುತ್ತದೆ ಎಂದರು.

  ನಿರ್ಮಾಣದ ಸಿನಿಮಾವನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ

  ನಿರ್ಮಾಣದ ಸಿನಿಮಾವನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ

  ತಮ್ಮ ಪ್ರೊಡಕ್ಷನ್‌ನ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆದ ಬಗ್ಗೆ ಮಾತನಾಡಿದ ಅವರು, ಲಾ ಹಾಗೂ ಫ್ರೆಂಚ್ ಬಿರಿಯಾನಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಇದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಕೊರೊನಾ ಸಮಯದಲ್ಲಿ ಎಲ್ಲರೂ ಜಾಗೃತೆಯಿಂದ ಇರಿರೆಂದು ಎಚ್ಚರಿಕೆಯನ್ನು ಪುನೀತ್ ನೀಡಿದರು.

  ಪಾಪ ದಾನಿಶ್ ಸೇಠ್‌ಗೆ ಹೀಗಾ ಬಯ್ಯೋದು ಪುನೀತ್ ರಾಜ್‌ಕುಮಾರ್ಪಾಪ ದಾನಿಶ್ ಸೇಠ್‌ಗೆ ಹೀಗಾ ಬಯ್ಯೋದು ಪುನೀತ್ ರಾಜ್‌ಕುಮಾರ್

  English summary
  Actor Puneeth Rajkumar chit chat with his fans through social media. He talked about Yuvarathna movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X